ದೇಶದ 2018ರ ಟಾಪ್ 10 ಡಿಸೈನ್ ಕಾಲೇಜುಗಳು, ಈ ಕೋರ್ಸ್ ಮಾಡಿ ಕೈ ತುಂಬಾ ಸಂಪಾದಿಸಬಹುದು

ದೇಶದ ಟಾಪ್ 10 ಡಿಸೈನ್ ಇನ್‌ಸ್ಟಿಟ್ಯೂಟ್ಸ್ 2018, ಈ ಕೋರ್ಸ್ ಮಾಡಿ ಕೈ ತುಂಬಾ ಸಂಪಾದಿಸಬಹುದು ಕೂಡಾ

By Nishmitha Bekal

ಇಂಟಿರೀಯರ್ ಅಥವಾ ಬ್ಯೂಟಿ ಪ್ರೊಡಕ್ಟ್ಸ್ ಯಾವುದೇ ಇದ್ದರೂ ಮೊದಲಿಗೆ ಎಲ್ಲರ ಗಮನ ಸೆಳೆಯುವುದು ಡಿಸೈನ್. ಇನ್ನು ಯಾವುದೇ ಉತ್ಪನ್ನಗಳಾದ್ರೂ ಸರಿಯೇ ಅದರ ಡಿಸೈನ್ ಅದನ್ನ ಹೆಚ್ಚು ಮಾರಾಟವಾಗುವಂತೆ ಮಾಡುತ್ತದೆ. ಹಾಗಾಗಿ ಹೆಚ್ಚಿನ ಕಂಪನಿಗಳು ಯಾರಲ್ಲಿ ಹೆಚ್ಚು ಈ ಡಿಸೈನ್ ಸ್ಕಿಲ್ ಇದೆಯೋ ಅವರನ್ನ ಸಂಸ್ಥೆಗೆ ನೇಮಕ ಮಾಡಿಕೊಳ್ಳುತ್ತದೆ.

ದೇಶದ 2018ರ ಟಾಪ್ 10 ಡಿಸೈನ್ ಕಾಲೇಜುಗಳು, ಈ ಕೋರ್ಸ್ ಮಾಡಿ ಕೈ ತುಂಬಾ ಸಂಪಾದಿಸಬಹುದು

ಟೆಕ್ನಿಕಲ್ ಕೋರ್ಸ್ ಸೇರಿದಂತೆ ಡಿಸೈನ್‌ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ ದೇಶದಲ್ಲಿ ಹಲವಾರು ಇನ್‌ಸ್ಟಿಟ್ಯೂಟ್‌ಗಳಿವೆ. ಇಂಡಸ್ಟ್ರಿಯಲ್ ಡಿಸೈನ್, ಅಪ್ಪಾರೆಲ್ ಡಿಸೈನ್, ಗ್ರಾಫಿಕ್ ಡಿಸೈನ್, ವಿಶ್ಯುವಲ್ ಡಿಸೈನ್, ಕಮ್ಯುನಿಕೇಶನ್ ಡಿಸೈನ್, ಟ್ರಾನ್ಸ್ ಪೋರ್ಟೇಶನ್ ಡಿಸೈನ್ ಮತ್ತು ಇನ್ನಿತ್ತರ ಕೋರ್ಸ್ ಗಳು ಫೇಮಸ್ ಡಿಸೈನ್ ಕ್ಷೇತ್ರದಲ್ಲಿ ಬರುವ ಫೇಮಸ್ ಕೋರ್ಸ್ ಗಳಾಗಿವೆ. ಇಲ್ಲಿ ನಿಮಗೆ ದೇಶದ ಫೇಮಸ್ ೧೦ ಡಿಸೈನ್ ಕೋರ್ಸ್ ನೀಡುವ ಕಾಲೇಜುಗಳ ಮಾಹಿತಿ ನೀಡಲಾಗಿದೆ.

<strong>Also Read: ಈ ಸ್ಟೇಟ್‌ನಲ್ಲಿ ಐಎಎಸ್ ಕೋರ್ಸ್ ಮಾಡಿದ್ರೆ ನೀವು ಪಕ್ಕಾ ಐಎಎಸ್ ಅಧಿಕಾರಿ ಆಗ್ತೀರಾ!</strong>Also Read: ಈ ಸ್ಟೇಟ್‌ನಲ್ಲಿ ಐಎಎಸ್ ಕೋರ್ಸ್ ಮಾಡಿದ್ರೆ ನೀವು ಪಕ್ಕಾ ಐಎಎಸ್ ಅಧಿಕಾರಿ ಆಗ್ತೀರಾ!

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ (ಎನ್‌ಐಡಿ)

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ (ಎನ್‌ಐಡಿ)

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ದೇಶದ ಪೇಮಸ್ ಶಿಕ್ಷಣ ಸಂಸ್ಥೆಯಾಗಿದೆ. ಈ ಶಿಕ್ಷಣ ಸಂಸ್ಥೆಯು ಡಿಸೈನ್ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ ಹಲವಾರು ಕೋರ್ಸ್ ಗಳನ್ನ ನೀಡುತ್ತಿದೆ. ಅಹಮದಾಬಾದ್, ಗಾಂಧಿನಗರ್ ಮತ್ತು ಬೆಂಗಳೂರು ನಗರಗಳಲ್ಲಿ ಈ ಶಿಕ್ಷಣ ಸಂಸ್ಥೆಯ ಸಬ್‌ ಬ್ರ್ಯಾಂಚ್ ಗಳಿವೆ. ಇಲ್ಲಿ ಡಿಸೈನ್ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳು ಇಲ್ಲಿ ಲಭ್ಯವಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಾಜಿ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಾಜಿ

ದೇಶದಾದ್ಯಂತ ಒಟ್ಟು 10 ಪ್ರಮುಖ ನಗರಗಳಲ್ಲಿ ಈ ಶಿಕ್ಷಣ ಸಂಸ್ಥೆಯ ಸಬ್‌ ಬ್ರ್ಯಾಂಚ್ ಗಳನ್ನ ನೀವು ನೋಡಬಹುದು. ಇಲ್ಲಿ ನೀವು ಸೀಟು ಪಡೆಯಬೇಕಾದ್ರೆ ಪ್ರತ್ಯೇಕ ಪ್ರವೇಶಾತಿ ಪರೀಕ್ಷೆಯನ್ನ ಎದುರಿಸಬೇಕು. ಫ್ಯಾಶನ್ ಹಾಗೂ ಅಪ್ಪಾರೆಲ್ ಡಿಸೈನ್ ಗೆ ಸಂಬಂಧಪಟ್ಟಂತೆ ಇಲ್ಲಿ ಕೋರ್ಸ್ ಗಳಿವೆ.

ಸಿಂಬೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಪುಣೆ
 

ಸಿಂಬೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಪುಣೆ

ಫೇಮಸ್ ಡಿಸೈನ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಪುಣೆಯ ಸಿಂಬೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಶಿಕ್ಷಣ ಸಂಸ್ಥೆಯು 1956 ರಲ್ಲಿ ಸ್ಥಾಪಿಸಲಾಗಿತ್ತು. ಕಮ್ಯುನಿಕೇಶನ್ ಡಿಸೈನ್, ಇಂಡಸ್ಟ್ರಿಯಲ್ ಡಿಸೈನ್, ಫ್ಯಾಶನ್ ಡಿಸೈನ್, ಟೆಕ್ಸ್ ಟೈಲ್ ಡಿಸೈನ್ ಸೇರಿದಂತೆ ಫೇಮಸ್ ಕೋರ್ಸ್ ಗಳು ಇಲ್ಲಿ ಲಭ್ಯವಿದ್ದು, ಇವೆಲ್ಲಾ ಪದವಿ ಕೋರ್ಸ್ ಗಳಾಗಿವೆ.

ಎಂಐಟಿ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ (ಎಂಐಟಿ ಐಡಿ), ಪುಣೆ

ಎಂಐಟಿ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ (ಎಂಐಟಿ ಐಡಿ), ಪುಣೆ

ಮಹಾರಾಷ್ಟ್ರ ಅಕಾಡೆಮಿ ಆಫ್ ಇಂಜಿನೀಯರಿಂಗ್ ಮತ್ತು ಎಜ್ಯುಕೇಶನ್ ರಿಸರ್ಚ್ ಸಂಸ್ಥೆಯು 2006 ರಂದು ಈ ಶಿಕ್ಷಣ ಸಂಸ್ಥೆಯನ್ನ ಸ್ಥಾಪಿಸಿತು. ಈ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳು ಲಭ್ಯವಿದೆ. ಇಂಡಸ್ಟ್ರಿಯಲ್ ಕೋರ್ಸ್, ಗ್ರಾಫಿಕ್ ಡಿಸೈನ್, ಹಾಗೂ ಕಮ್ಯುನಿಕೇಶನ್ ನಂತಹ ಫೇಮಸ್ ಕೋರ್ಸ್ ಗಳು ಇಲ್ಲಿ ಲಭ್ಯವಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ ಮತ್ತು ಡಿಸೈನ್ , ನವದೆಹಲಿ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ ಮತ್ತು ಡಿಸೈನ್ , ನವದೆಹಲಿ

ಕಿಂಗ್‌ಸ್ಟೋನ್ ಯೂನಿವರ್ಸಿಟಿ ಇನ್ ಲಂಡನ್ ಸಂಯೋಗದೊಂದಿಗೆ 2014 ರಂದು ಐಐಎಡಿ ಶಿಕ್ಷಣ ಸಂಸ್ಥೆಯನ್ನ ಸ್ಥಾಪಿಸಲಾಗಿದೆ. ಫ್ಯಾಶನ್ ಡಿಸೈನ್, ಕಮ್ಯುನಿಕೇಶನ್ ಡಿಸೈನ್ ಮತ್ತು ಇಂಟಿರೀಯರ್ ಆರ್ಕಿಟೆಕ್ಚರ್ ಮತ್ತು ಡಿಸೈನ್‌ಗೆ ಸಂಬಂಧಪಟ್ಟಂತೆ ಮೋಸ್ಟ್ ಫೇಮಸ್ ಕೋರ್ಸ್ ಗಳು ಇಲ್ಲಿ ಲಭ್ಯವಿದೆ.

ಡಿಪಾರ್ಟ್ ಮೆಂಟ್ ಆಫ್ ಡಿಸೈನ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ, ಗುವಾಹಟಿ

ಡಿಪಾರ್ಟ್ ಮೆಂಟ್ ಆಫ್ ಡಿಸೈನ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ, ಗುವಾಹಟಿ

ಟೆಕ್ನಾಲಾಜಿ ಇನ್ ಡಿಸೈನ್ ಅಪ್ಲಿಕೇಶನ್ ಹೆಚ್ಚಿಸುವ ಉದ್ದೇಶದಿಂದ ಐಐಟಿ ಗುವಾಹಟಿ, ಡಿಪಾರ್ಟ್ ಮೆಂಟ್ ಆಫ್ ಡಿಸೈನ್ ನ ಸ್ಥಾಪಿಸಿದೆ. ಈ ಶಿಕ್ಷಣ ಸಂಸ್ಥೆಯು ಡಿಸೈನ್ ಕೋರ್ಸ್ ಗೆ ಸಂಬಂಧಪಟ್ಟಂತೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಮಟ್ಟದ ಕೋರ್ಸ್ ಗಳನ್ನ ನೀಡುತ್ತಿದೆ ಮಾತ್ರವಲ್ಲದೇ ಇಲ್ಲಿ ಡಿಸೈನ್ ಸಬ್‌ಜೆಕ್ಟ್ ನಲ್ಲಿ ಪಿಹೆಚ್ ಡಿ ಕೋರ್ಸ್ ಕೂಡಾ ಲಭ್ಯವಿದೆ.

ಇಂಡಸ್ಟ್ರಿಯಲ್ ಡಿಸೈನ್ ಸೆಂಟರ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ, ಮುಂಬಯಿ

ಇಂಡಸ್ಟ್ರಿಯಲ್ ಡಿಸೈನ್ ಸೆಂಟರ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ, ಮುಂಬಯಿ

ಈ ಇಂಡಸ್ಟ್ರಿಯಲ್ ಡಿಸೈನ್ ಸೆಂಟರ್ 1969 ರಲ್ಲಿ ಸ್ಥಾಪನೆಯಾಗಿದೆ. ಇಲ್ಲೂ ಕೂಡಾ ಡಿಸೈನ್ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಮಟ್ಟದ ಕೋರ್ಸ್ ಗಳು ಲಭ್ಯವಿದೆ. ಇಂಡಸ್ಟ್ರಿಯಲ್ ಡಿಸೈನ್, ಆನಿಮೇಶನ್, ವಿಶ್ಯವಲ್ ಕಮ್ಯುನಿಕೇಶನ್, ಮೊಬಿಲಿಟಿ ಮತ್ತು ವೆಹಿಕಲ್ ಡಿಸೈನ್ ಹಾಗೂ ಇಂಟರಾಕ್ಷನ್ ಡಿಸೈನ್ ವಿಷಯಕ್ಕೆ ಸಂಬಂಧಪಟ್ಟಂತೆ ಇಲ್ಲಿನ ಕೋರ್ಸ್ ನಲ್ಲಿ ತಿಳಿಸಿಕೊಡಲಾಗುತ್ತದೆ.

ಸೃಷ್ಟಿ ಸ್ಕೂಲ್ ಆಫ್ ಆರ್ಟ್ಸ್, ಡಿಸೈನ್ ಮತ್ತು ಟೆಕ್ನಾಲಾಜಿ, ಬೆಂಗಳೂರು

ಸೃಷ್ಟಿ ಸ್ಕೂಲ್ ಆಫ್ ಆರ್ಟ್ಸ್, ಡಿಸೈನ್ ಮತ್ತು ಟೆಕ್ನಾಲಾಜಿ, ಬೆಂಗಳೂರು

1996 ರಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಿದೆ. ಇಲ್ಲಿನ ಟೆಕ್ನಿಕಲ್ ಅಪ್ಲಿಕೇಶನ್ ನಾಲೇಜ್ಡ್ ಇನ್ ಡಿಸೈನ್ ಸಬ್‌ಜೆಕ್ಟ್ ನಿಂದ ಈ ಶಿಕ್ಷಣ ಸಂಸ್ಥೆ ಫೇಮಸ್ ಆಗಿದೆ. ಅಷ್ಟೇ ಅಲ್ಲದೇ ಬಿಡೆಸ್, ಎಂಎ, ಎಂಡೆಸ್ ಮತ್ತು ಎಂಪ್ಲ್ಯಾನ್ ಕೋರ್ಸ್ ಗಳು ಇಲ್ಲಿ ಲಭ್ಯವಿದೆ.

ಪರ್ಲ್ ಅಕಾಡೆಮಿ ಆಫ್ ಫ್ಯಾಶನ್, ಬೆಂಗಳೂರು

ಪರ್ಲ್ ಅಕಾಡೆಮಿ ಆಫ್ ಫ್ಯಾಶನ್, ಬೆಂಗಳೂರು

ಫ್ಯಾಶನ್ ಡಿಸೈನ್ ಕೋರ್ಸ್ ನಿಂದಾಗಿ ಈ ಶಿಕ್ಷಣ ಸಂಸ್ಥೆ ಸಖತ್ ಫೇಮಸ್ ಆಗಿದೆ. ಇಲ್ಲಿನ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗಾಗಿ ಅಡ್ಮಿಶನ್ ಆಗಬೇಕಾದ್ರೆ ಈ ಶಿಕ್ಷಣ ಸಂಸ್ಥೆ ಪ್ರತ್ಯೇಕ ಪ್ರವೇಶಾತಿ ಪರೀಕ್ಷೆ ನಡೆಸುತ್ತದೆ. ಕಮ್ಯುನಿಕೇಶನ್ ಡಿಸೈನ್, ಫ್ಯಾಶನ್ ಸ್ಟೈಲಿಂಗ್ ಹಾಗೂ ಫ್ಯಾಶನ್ ಡಿಸೈನ್ ಸೇರಿದಂತೆ ಹಲವಾರು ಫೇಮಸ್ ಕೋರ್ಸ್ ಗಳು ಇಲ್ಲಿ ಲಭ್ಯವಿದೆ.

ಡಿಜೆ ಅಕಾಡೆಮಿ ಆಫ್ ಡಿಸೈನ್, ಕೋಯಂಬುತ್ತೂರ್

ಡಿಜೆ ಅಕಾಡೆಮಿ ಆಫ್ ಡಿಸೈನ್, ಕೋಯಂಬುತ್ತೂರ್

2004 ರಲ್ಲಿ ಈ ಖಾಸಾಗಿ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಿದೆ. ಈ ಶಿಕ್ಷಣ ಸಂಸ್ಥೆಯು ಕೂಡಾ ಪದವಿ ಹಾಗೂ ಸ್ನಾತಕೋತ್ತರ ಮಟ್ಟದ ಕೋರ್ಸ್ ಗಳು ಇಲ್ಲಿ ಲಭ್ಯವಿದೆ. ಇಲ್ಲಿ ಮೋಸ್ಟ್ ಫೇಮಸ್ ಕೋರ್ಸ್ ಗಳು ಎಂದ್ರೆ, ಇಂಡಸ್ಟ್ರಿಯಲ್ ಡಿಸೈನ್, ಇಂಟರಾಕ್ಷನ್ ಡಿಸೈನ್, ಆನಿಮೇಶನ್ ಫಿಲ್ಮ್ ಡಿಸೈನ್ ಮತ್ತು ಕಮ್ಯುನಿಕೇಶನ್ ಡಿಸೈನ್ ಇತ್ಯಾದಿ.

<strong>Also Read: ಬೆಂಗಳೂರಿನ ಬೆಸ್ಟ್ ಪ್ರಿ- ಸ್ಕೂಲ್‌ಗಳು... ಈ ಸ್ಕೂಲ್‌ಗಳಿಂದಲೇ ಮಕ್ಕಳ ಶಿಕ್ಷಣ ಪ್ರಾರಂಭಿಸಿ!</strong>Also Read: ಬೆಂಗಳೂರಿನ ಬೆಸ್ಟ್ ಪ್ರಿ- ಸ್ಕೂಲ್‌ಗಳು... ಈ ಸ್ಕೂಲ್‌ಗಳಿಂದಲೇ ಮಕ್ಕಳ ಶಿಕ್ಷಣ ಪ್ರಾರಂಭಿಸಿ!

For Quick Alerts
ALLOW NOTIFICATIONS  
For Daily Alerts

English summary
Be it interior or beauty products, design is visible in every corner of our life. The design of a product increases the sales because of its visual appeal. For this reason, many companies are queuing up candidates who possess designing skills which can be attained through some specialised courses.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X