ಕರ್ನಾಟಕ ರಾಜ್ಯದ 2019ರ ಟಾಪ್ 10 ಇಂಜಿನಿಯರಿಂಗ್ ಕಾಲೇಜುಗಳ ಪಟ್ಟಿ

ಪ್ರತಿ ವರ್ಷವೂ ಕರ್ನಾಟಕ ರಾಜ್ಯ ಶಿಕ್ಷಣ ಮಂಡಳಿಯು ಎಂಜಿನಿಯರಿಂಗ್ ಪದವಿಪೂರ್ವ ಶಿಕ್ಷಣ ಪ್ರವೇಶಾತಿಗೆ ಸಿ.ಇ.ಟಿ ಪರೀಕ್ಷೆಯನ್ನು ನಡೆಸುತ್ತದೆ. ಈಗಿನ ಬಹುತೇಕ ಐಟಿ ಮತ್ತು ನಾನ್ ಐಟಿ ಸಂಸ್ಥೆಗಳು ಎಂಜಿನಿಯರಿಂಗ್ ಪದವಿ ಹೊಂದಿರುವ ವಿದ್ಯಾರ್ಥಿಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳೂ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಸಿ.ಇ.ಟಿ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಕರ್ನಾಟಕ ಖಾಸಗಿ ವೈದ್ಯಕೀಯ ಮತ್ತು ಡೆಂಟಲ್ ಕಾಲೇಜುಗಳ ಪ್ರವೇಶಾತಿಗೆ ಸ್ವತಂತ್ರ ಕಾಮೆಡ್‍ಕೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಮಾನವ ಅಭಿವೃದ್ಧಿ ಇಲಾಖೆಯ ನ್ಯಾಷನಲ್ ಇನ್‍ಸ್ಟಿಟ್ಯೂಷನಲ್ ರ್ಯಾಂಕಿಂಗ್ ಆಧಾರದ ಮೇಲೆ ಕಾಲೇಜುಗಳ ಬೋಧನೆ, ಕಲಿಕೆ, ಸಂಶೋಧನೆ ಮತ್ತು ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳು ಕಾಲೇಜನ್ನು ಆಯ್ಕೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ 2020 ರಾಜ್ಯದ ಪ್ರಮುಖ 10 ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಇಲ್ಲಿದೆ.

ರಾಜ್ಯದ ಪ್ರಮುಖ 10 ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿ

ಕ್ರ.ಸಂಎನ್.ಐ.ಆರ್.ಎಫ್

ರ್ಯಾಂಕಿಂಗ್

ಕಾಲೇಜಿನ ಹೆಸರು
1 21 ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಸೂರತ್ಕಲ್
2 39 ಮಣಿಪಾಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ್
3 56 ಇಂಟರ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಇನ್‍ಫಾರ್ಮೇಶನ್ ಟೆಕ್ನಾಲಜಿ, ಬೆಂಗಳೂರು
4 58 ಆರ್. ವಿ ಕಾಲೇಜ್ ಆಫ್ ಎಂಜಿನಿಯರಿಂಗ್ , ಬೆಂಗಳೂರು
5 60 ಎಂ.ಎಸ್.ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಬೆಂಗಳೂರು
6 67 ಬಿ.ಎಂ.ಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್, ಬೆಂಗಳೂರು
7 78 ಸಿದ್ದಗಂಗಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು
8 87 ಪಿ.ಇ.ಎಸ್ ಯೂನಿವರ್ಸಿಟಿ, ಬೆಂಗಳೂರು
9 99 ನ್ಯೂ ಹಾರಿಜನ್ ಕಾಲೇಜ್ ಆಫ್ ಎಂಜಿನಿಯರಿಂಗ್, ಬೆಂಗಳೂರು
10 100 ಎನ್.ಐ.ಟಿ.ಟಿ.ಇ ಮೀನಾಕ್ಷಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು

1. ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಸೂರತ್ಕಲ್

1. ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಸೂರತ್ಕಲ್

ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು 1960ರಲ್ಲಿ ಸೂರತ್ಕಲ್‍ನಲ್ಲಿ ಸ್ಥಾಪಿತವಾಗಿದ್ದು, ಇದು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದಡಿ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಸಂಸ್ಥೆಯು ಎಂಜಿನಿಯರಿಂಗ್, ಸೈನ್ಸ್ ಮತ್ತು ಮ್ಯಾನೇಜ್ಮೆಂಟ್‍ಗೆ ಸಂಬಂಧಿಸಿದ ಪದವಿಪೂರ್ವ ಮತ್ತು ಪದವಿ ಕೋರ್ಸ್‍ಗಳನ್ನು ಹೊಂದಿದೆ. ಸಂಸ್ಥೆಯಲ್ಲಿ ಸುಮಾರು 14 ವಿಭಾಗಗಳಿದ್ದು, 11 ಬೆಂಬಲ ಕೇಂದ್ರಗಳನ್ನು ಹೊಂದಿದೆ. ಸುಮಾರು 200 ಸಿಬ್ಬಂದಿ ಮತ್ತು 300 ಬೆಂಬಲಿಗ ಸಿಬ್ಬಂದಿ ಸದಸ್ಯರು ಕೆಲಸ ನಿರ್ವಹಿಸುತ್ತಿದ್ದಾರೆ.

2. ಮಣಿಪಾಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ್:

2. ಮಣಿಪಾಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ್:

ಈ ಸಂಸ್ಥೆಯು 1957ರಲ್ಲಿ ಸ್ಥಾಪಿತವಾಗಿದ್ದು, ಮಣಿಪಾಲ್ ವಿಶ್ವವಿದ್ಯಾಲಯದಡಿ ಕಾರ್ಯನಿರ್ವಹಿಸುತ್ತಿದೆ. ವಿಶ್ವದ ಮೊದಲ ಸ್ವ-ಹಣಕಾಸು ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಹುತೇಕ ಎಂಜಿನಿಯರಿಂಗ್ ವಿಷಯಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಹೊಂದಿರುವುದರ ಜೊತೆಗೆ ಬಯೋಮೆಡಿಕಲ್ ವಿಭಾಗದಲ್ಲಿ ಎಂಜಿನಿಯರಿಂಗ್, ಎಂಜಿನಿಯರಿಂಗ್ ನಿರ್ವಹಣೆ, ಜೈವಿಕ ತಂತ್ರಜ್ಞಾನ ಮತ್ತು ಇನ್ನಿತರ ವಿಭಾಗದಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ ಕೋರ್ಸುಗಳನ್ನು ಹೊಂದಿದೆ.

 

 

3. ಇಂಟರ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ, ಬೆಂಗಳೂರು
 

3. ಇಂಟರ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ, ಬೆಂಗಳೂರು

ಈ ಸಂಸ್ಥೆಯು 1999ರಲ್ಲಿ ಸ್ಥಾಪಿತವಾಗಿದ್ದು, IIIಖಿ ಎಂದೇ ಕರೆಯಲಾಗುತ್ತದೆ. ಈ ಸಂಸ್ಥೆಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡುಗೆಯಾಗುವ ಶಿಕ್ಷಣ, ಸಂಶೋಧನೆ, ಉದ್ಯಮಕ್ಕೆ ಮತ್ತು ನಾವೀನ್ಯತೆಗೆ ಎಡೆಮಾಡಿಕೊಡುವ ಸದುದ್ದೇಶವನ್ನು ಹೊಂದಿದೆ. ಅಲ್ಲದೆ ಈ ಸಂಸ್ಥೆಯು ಐಟಿ ಕ್ಷೇತ್ರಕ್ಕೆ ಕೊಡುಗೆ ನೀಡುವ ಪ್ರಮುಖ ಉದ್ದೇಶದಿಂದ ಕರ್ನಾಟಕ ಸರ್ಕಾರ ಮತ್ತು ಐಟಿ ಉದ್ಯಮದಿಂದ ಜಂಟಿಯಾಗಿ ಹಣ ಪಡೆದು ಲಾಭರಹಿತ ಕಾರ್ಯನಿರ್ವಹಿಸುವಲ್ಲಿ ಜನಪ್ರಿಯಗೊಂಡಿದೆ.

 

 

4. ಆರ್. ವಿ. ಕಾಲೇಜ್ ಆಫ್ ಎಂಜಿನಿಯರಿಂಗ್, ಬೆಂಗಳೂರು:

4. ಆರ್. ವಿ. ಕಾಲೇಜ್ ಆಫ್ ಎಂಜಿನಿಯರಿಂಗ್, ಬೆಂಗಳೂರು:

ದೇಶದ ಮೊದಲ ಹತ್ತು ಸ್ವ-ಹಣಕಾಸು ಹೂಡಿಕೆಯ ಕಾಲೇಜುಗಳ ಪಟ್ಟಿಯಲ್ಲಿ ಒಂದಾದ ಈ ಸಂಸ್ಥೆಯನ್ನು 1963ರಲ್ಲಿ ಸ್ಥಾಪಿಸಲಾಗಿದೆ. ಕಲಿಕಾ ಪ್ರಕ್ರಿಯೆಯನ್ನು ಉತ್ತೇಜಿಸಲು ಮತ್ತು ಸಾಮಥ್ರ್ಯವುಳ್ಳ ಶಿಸ್ತುಬದ್ಧ ಎಂಜಿನಿಯರ್‍ಗಳನ್ನು ಹೊರತರುವಲ್ಲಿ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದೆ.

5. ಎಂ.ಎಸ್.ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು:

5. ಎಂ.ಎಸ್.ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು:

ದೇಶದಾದ್ಯಂತ ದೊಡ್ಡ ಹೆಸರು ಮಾಡಿರುವ ಎಂ.ಎಸ್.ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯನ್ನು 1962ರಲ್ಲಿ ಸ್ಥಾಪಿಸಲಾಗಿದ್ದು, ಭಾರತದ ಪ್ರಮುಖ ಶೈಕ್ಷಣಿಕ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ.

 

 

6. ಬಿ.ಎಂ.ಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್, ಬೆಂಗಳೂರು:

6. ಬಿ.ಎಂ.ಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್, ಬೆಂಗಳೂರು:

ಬೆಂಗಳೂರಿನ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‍ಮೆಂಟ್ ಕಾಲೇಜು ಇದಾಗಿದ್ದು, ಈ ಸಂಸ್ಥೆಯನ್ನು 1946ರಲ್ಲಿ ಸ್ಥಾಪಿಸಲಾಗಿದೆ. ಭಾರತದ ತಾಂತ್ರಿಕ ಶಿಕ್ಷಣವನ್ನು ಖಾಸಗಿ ವಲಯಕ್ಕೆ ತರುವ ಮೊದಲ ಪ್ರಯತ್ನಕ್ಕೆ ನಿಂತ ಸಂಸ್ಥೆ ಇದಾಗಿದೆ. ಅಲ್ಲದೇ ರಾಜ್ಯದ ಎಲ್ಲಾ ತಾಂತ್ರಿಕ ಕಾಲೇಜುಗಳಿಗೆ ಹೋಲಿಸಿದರೆ ಬಿ.ಎಂ.ಎಸ್ ಕಾಲೇಜು ಅತೀ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿರುವುದಲ್ಲದೇ, ಭಾರತದ ಇನ್ನಿತರ ರಾಜ್ಯಗಳ ಮತ್ತು ವಿದೇಶಿ ವಿದ್ಯಾರ್ಥಿಗಳ ಗಮನವನ್ನೂ ಸೆಳೆಯುತ್ತಿದೆ.

7. ಸಿದ್ದಗಂಗಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು:

7. ಸಿದ್ದಗಂಗಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು:

ಸಿದ್ದಗಂಗಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು 1963ರಲ್ಲಿ ತುಮಕೂರಿನಲ್ಲಿ ಸ್ಥಾಪಿಸಲಾಗಿದೆ. ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಡಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಎಂಜಿನಿಯರಿಂಗ್‍ನಿಂದ ಹಿಡಿದು ವಾಸ್ತುಶಿಲ್ಪದವರೆಗೂ ಶಿಕ್ಷಣ ಸೌಲಭ್ಯವಿದೆ. ಎಂಜಿನಿಯರಿಂಗ್ ಜೊತೆಗೆ ಸ್ನಾತಕೋತ್ತರ ಕಾರ್ಯಕ್ರಮಗಳು ಸಹ ಜನಪ್ರಿಯವಾಗಿದೆ.

 

 

8. ಪಿ.ಇ.ಎಸ್ ಯೂನಿವರ್ಸಿಟಿ, ಬೆಂಗಳೂರು:

8. ಪಿ.ಇ.ಎಸ್ ಯೂನಿವರ್ಸಿಟಿ, ಬೆಂಗಳೂರು:

ಈ ವಿಶ್ವವಿದ್ಯಾಲಯವನ್ನು 1972ರಲ್ಲಿ ಸ್ಥಾಪಿಸಲಾಗಿದ್ದು, ಪಿ.ಇ.ಎಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂದೇ ಕರೆಯಲಾಗಿದೆ. ಜನಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯವು ಶೈಕ್ಷಣಿಕ ಶ್ರೇಷ್ಠತೆ, ನಾಯಕತ್ವ ಗುಣಗಳು, ಪೋಷಣೆಯುಕ್ತ ಪರಿಸರ ಮತ್ತು ಉನ್ನತ ತಂತ್ರಜ್ಞಾನದ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದು ವಿದ್ಯಾರ್ಥಿಗಳ ಏಳಿಗೆಗೆ ಬುನಾದಿಯಾಗಿದೆ.

 

 

 

9. ನ್ಯೂ ಹಾರಿಜನ್ ಕಾಲೇಜ್ ಆಫ್ ಎಂಜಿನಿಯರಿಂಗ್, ಬೆಂಗಳೂರು

9. ನ್ಯೂ ಹಾರಿಜನ್ ಕಾಲೇಜ್ ಆಫ್ ಎಂಜಿನಿಯರಿಂಗ್, ಬೆಂಗಳೂರು

ಸ್ವಾಯುತ್ತ ಎಂಜಿನಿಯರಿಂಗ್ ಕಾಲೇಜು ಇದಾಗಿದ್ದು, 2001ರಲ್ಲಿ ಬೆಂಗಳೂರಿನಲ್ಲಿ ಆರಂಭವಾಗಿತು. ಇದು ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದೆ ಮತ್ತು ಯು.ಜಿ.ಸಿ ಹಾಗೂ ಎ.ಐ.ಸಿ.ಟಿ.ಇ ಇಂದ ಅಂಗೀಕರಿಸಲ್ಪಟ್ಟಿದೆ. ಮತ್ತೊಂದು ವಿಶೇಷವೆಂದರೆ ಎನ್.ಎ.ಎ.ಸ (NAAC) ಯಿಂದ 'A' ಗ್ರೇಡ್ ಮಾನ್ಯತೆಯನ್ನು ಪಡೆದುಕೊಂಡಿದೆ.

 

 

10. ಎನ್.ಐ.ಟಿ.ಟಿ.ಇ ಮೀನಾಕ್ಷಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು:

10. ಎನ್.ಐ.ಟಿ.ಟಿ.ಇ ಮೀನಾಕ್ಷಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು:

2001ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಡಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸ್ವಾಯುತ್ತ ಸಂಸ್ಥೆ. ಅಲ್ಲದೆ ಸ್ವಹಣಕಾಸು ಹೊಂದಿರುವ ಸಂಸ್ಥೆಗಳ ಪಟ್ಟಿಗೆ ಇದು ಸೇರ್ಪಡೆಯಾಗಿದೆ. ಇಲ್ಲಿ ನಿರ್ವಹಣಾ ಕಾರ್ಯಕ್ರಮಗಳನ್ನ ಒದಗಿಸುವ ಜೊತೆಗೆ ಸಿವಿಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಡಿಪ್ಲೋಮಾ ಮಾಡುವ ಅವಕಾಶವನ್ನು ಒದಗಿಸುತ್ತಿದೆ.

 

 

For Quick Alerts
ALLOW NOTIFICATIONS  
For Daily Alerts

English summary
Here is the list of top 10 engineering colleges list and brief information about the colleges. It is most useful for the people who have dream to study engineering.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X