ನೀವು ಮಾದರಿ ಶಿಕ್ಷಕರಾಗಬೇಕೇ... ದೇಶದ ಟಾಪ್ 10 ಎಂಎಡ್ ಕಾಲೇಜುಗಳ ಲಿಸ್ಟ್!

Posted By:

ಟೀಚಿಂಗ್ ಫೀಲ್ಡ್ ಯಾರಿಗೆ ಇಷ್ಟ ಆಗಲ್ಲ ಹೇಳಿ. ಪ್ರತಿಯೊಂದು ಮಗು ಕೂಡಾ ಶಾಲೆಗೆ ಹೋಗಲು

ಪ್ರಾರಂಭಿಸಿದ ವೇಳೆ ತಾನು ದೊಡ್ಡದಾದ ಮೇಲೆ ಟೀಚರ್ ಆಗಬೇಕೆಂದು ಬಯಸುತ್ತದೆ. ಅಷ್ಟೇ ಅಲ್ಲ ಪ್ರತೀ

ಜನರೇಶನಲ್ಲೂ ಇದೊಂದು ಗೌರವಾನಿತ್ವ ಹುದ್ದೆ ಎನಿಸಿಕೊಂಡಿದೆ. ವಿದ್ಯಾರ್ಥಿಗಳಿಗೆ ಜ್ಞಾನವನ್ನ ಧಾರೆ

ಎಳೆಯುವ ಕೆಲಸ ಶಿಕ್ಷಕರು ಮಾಡುತ್ತಾರೆ. ಮೊದಲೆಲ್ಲಾ ಗುರುಕುಲ ಸಿಸ್ಟಂ ಇತ್ತು ಆದ್ರೆ ಇದೀಗ ಎಲ್ಲೆಡೆ

ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿವೆ.

ಇದೀಗ ಮಾರ್ಡನ್ ಎಜ್ಯುಕೇಶನ್ ನಿಂದ ಟೀಚಿಂಗ್ ಪ್ರೊಫೆಶನಲ್ ವೃತ್ತಿಯಾಗಿದೆ. ಇನ್ನು ಟೀಚಿಂಗ್ ಹುದ್ದೆ

ಅಲಂಕರಿಸಿಕೊಳ್ಳಬೇಕಾದ್ರೂ ಅದಕ್ಕಾಗಿ ನೀವು ಕೂಡಾ ಪ್ರತ್ಯೇಕ ಶಿಕ್ಷಣ ಪಡೆಯಬೇಕಾಗಿದೆ. ಬಿಎಡ್ ಶಿಕ್ಷಣ

ಪಡೆದರೆ ನೀವು ಕೂಡಾ ಟೀಚಿಂಗ್ ವೃತ್ತಿ ಪ್ರಾರಂಭಿಸಬಹುದು. ಆದ್ರೆ ಇದೀಗ ಕಾಂಪಿಟೇಶನ್ ಜಾಸ್ತಿ

ಇರುವುದರಿಂದ ನೀವು ಟೀಚಿಂಗ್ ನಲ್ಲೂ ಸ್ನಾತಕೋತ್ತರ ಪದವಿ ಪಡೆದರೆ ಬೆಸ್ಟ್. ಅದಕ್ಕಾಗಿಯೇ ಅನೇಕ

ಕಾಲೇಜುಗಳು ನಿಮಗೆ ಎಂಎಡ್ ಕೋರ್ಸ್ ಗಳನ್ನು ಕೂಡಾ ಪರಿಚಯಿಸುತ್ತದೆ. ದೇಶದ ಟಾಪ್ ಬೆಸ್ಟ್ 10

ಕಾಲೇಜುಗಳ ಲಿಸ್ಟ್ ಇಲ್ಲಿದೆ.

ಡಿಪಾರ್ಟ್ ಮೆಂಟ್ ಆಫ್ ಎಜ್ಯುಕೇಶನ್, ಯೂನಿವರ್ಸಿಟಿ ಆಫ್ ದೆಹಲಿ, ನವ ದೆಹಲಿ:

ಇದು ಭಾರತದಲ್ಲಿ ಸ್ಥಾಪಿಸಲ್ಪಟ್ಟ ಮೊದಲ ಎಂಎಡ್ ಶಿಕ್ಷಣ ಸಂಸ್ಥೆ. ೧೯೪೭ರಲ್ಲಿ ಈ ಶಿಕ್ಷಣ ಸಂಸ್ಥೆ ಸ್ಥಾಪಿತವಾಯಿತು. ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳಿ ಇಂದು ಮಾದರಿ ಶಿಕ್ಷಕರಾಗಿದ್ದಾರೆ. ಈ ಶಿಕ್ಷಣ ಸಂಸ್ಥೆಯಲ್ಲಿ ಎಂಎಡ್ ಕೋರ್ಸ್ ಗೆ ಪ್ರತಿ ವರ್ಷಕ್ಕೆ 30,000 ರೂ ಶುಲ್ಕ ವಿಧಿಸಲಾಗಿದೆ

ಈ ಕಾಲೇಜಿನ ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

ಫಾಕಲ್ಟಿ ಆಫ್ ಎಜ್ಯುಕೇಶನ್, ಜಮಿಯಾ ಮಿಲಿಯಾ ಇಸ್ಲಾಮಿಯಾ ಯೂನಿವರ್ಸಿಟಿ, ಸೌತ್ ದೆಹಲಿ:

ಈ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳ ವ್ಯಕ್ತಿತ್ವ ಅಭಿವೃದ್ಧಿಗೆ ಹೆಚ್ಚು ಫೋಕಸ ನೀಡುತ್ತದೆ. ಅಷ್ಟೇ ಅಲ್ಲ ಎನ್‌ಎಸ್‌ಎಸ್ ಸೇರಿದಂತೆ ಇನ್ನಿತತ್ರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಈ ಶಿಕ್ಷಣ ಸಂಸ್ಥೆ ಪ್ರೋತ್ಸಾಹಿಸುತ್ತದೆ. ರಿಸರ್ಚ್ ಆಕ್ಟಿವಿಟೀಸ್ ಗೂ ಫೋಕಸ್ ನೀಡುತ್ತದೆ.

ಇನ್ನು ಈ ಶಿಕ್ಷಣ ಸಂಸ್ಥೆಯ ಮತ್ತೊಂದು ವಿಶೇಷವೆಂದರೆ, ಇಲ್ಲಿ ಇಂಗ್ಲೀಷನಲ್ಲಿ ಮಾತ್ರ ಶಿಕ್ಷಣ ನೀಡಲಾಗುವುದಿಲ್ಲ, ಬದಲಿಗೆ ಉರ್ದು ಹಾಗೂ ಹಿಂದಿ ಭಾಷೆಯಲ್ಲೂ ಕಲಿಸಿಕೊಡಲಾಗುವುದು.

ಈ ಕಾಲೇಜಿನ ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

 

ಯೂನಿವರ್ಸಿಟಿ ಸ್ಕೂಲ್ ಆಫ್ ಎಜ್ಯುಕೇಶನ್, ಜಿಜಿಎಸ್ಐಪಿಯು ಯೂನಿವರ್ಸಿಟಿ, ನವದೆಹಲಿ:

ಈ ಶಿಕ್ಷಣ ಸಂಸ್ಥೆಯ ಕೋರ್ಸ್ ಶುಲ್ಕ ತುಂಬಾ ಕಮ್ಮಿ ಇದೆ. ಪ್ರತೀ ವರ್ಷಕ್ಕೆ ಬರೀ 23,000 ರೂ. ಇಲ್ಲಿ ಬಿಎಡ್ ಕೋರ್ಸ್ ಕೂಡಾ ಇದೆ. 1998 ಮಾರ್ಚ್ 28 ರಂದು ಈ ಶಿಕ್ಷಣ ಸಂಸ್ಥೆ ಸ್ಥಾಪಿತವಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾರೆ.

ಈ ಕಾಲೇಜಿನ ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

ಡಿಪಾರ್ಟ್ ಮೆಂಟ್ ಆಫ್ ಎಜ್ಯುಕೇಶನ್, ಮಹರ್ಷಿ ದಯಾನಂದ್ ಯೂನಿವರ್ಸಿಟಿ, ರೋಹ್ತಕ್:

ಈ ಶಿಕ್ಷಣ ಸಂಸ್ಥೆಯಲ್ಲಿ ಶುಲ್ಕ ಹೀಗಿದೆ. ಪ್ರತಿ ವರ್ಷಕ್ಕೆ 15,000 ರೂ. ಈ ಶಿಕ್ಷಣ ಸಂಸ್ಥೆಯಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಉತ್ತಮ ಶಿಕ್ಷಕರನ್ನು ತಯಾರು ಮಾಡುವ ಉದ್ದೇಶವನ್ನ ಈ ಶಿಕ್ಷಣ ಸಂಸ್ಥೆ ಹೊಂದಿದೆ. ಅಷ್ಟೇ ಅಲ್ಲ ಈ ಶಿಕ್ಷಣ ಸಂಸ್ಥೆ ಅನೇಕ ಅವಾರ್ಡ್ ಗಳನ್ನು ತನ್ನದಾಗಿಸಿಕೊಂಡಿದೆ.ಈ ಕಾಲೇಜಿನ ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಡಿಪಾರ್ಟ್ ಮೆಂಟ್ ಆಫ್ ಎಜ್ಯುಕೇಶನ್, ಬೆಂಗಳೂರು ಯೂನಿವರ್ಸಿಟಿ, ಬೆಂಗಳೂರು:

ಈ ಶಿಕ್ಷಣ ಸಂಸ್ಥೆಯಲ್ಲಿ ಎಂಎಡ್ ಕೋರ್ಸ್ ಗೆ 50,000 ರೂ ಶುಲ್ಕ ವಿಧಿಸಲಾಗುವುದು. ಇಲ್ಲಿಯ ಲೈಬ್ರರಿ ವ್ಯವಸ್ಥೆಯು ಎಷ್ಟು ಚೆನ್ನಾಗಿದೆ ಎಂದ್ರೆ ನಿಮಗೆ ಗೊತ್ತಿಲ್ಲದೆನೇ ನೀವು ಓದುವ ಹವ್ಯಾಸ ರೂಢಿಸಿಕೊಳ್ಳುತ್ತೀರಿ. ಈ ಹವ್ಯಾಸ ನೀವು ಉತ್ತಮ ಟೀಚರ್ ಆಗಿ ರೂಪುಗೊಳ್ಳುವಲ್ಲಿ ಸಹಾಯಕವಾಗುತ್ತದೆ.ಈ ಕಾಲೇಜಿನ ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಫಾಕಲ್ಟಿ ಆಫ್ ಎಜ್ಯುಕೇಶನ್, ಬನಾರಸ್ ಹಿಂದೂ ಯೂನಿವರ್ಸಿಟಿ, ವಾರಣಾಸಿ:

ಈ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಎಜ್ಯುಕೇಶನ್ ವಿಚಾರದಲ್ಲಿ ಮಾಸ್ಟರ್ ಪ್ರೋಗ್ರಾಂನ್ನ ಪರಿಚಯಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕವಾಗಿ ಭಾರತದ ನೀತಿ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳಿ ಕೊಡುತ್ತದೆ. ಇದೊಂದು ತುಂಬಾ ಪವಿತ್ರವಾದ ಕೋರ್ಸ್ ಆಗಿದೆ.ಈ ಕಾಲೇಜಿನ ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿ, ನವದೆಹಲಿ:

ಇದೊಂದು ಡಿಸ್ಟೇಂಸ್ ಎಜ್ಯುಕೇಶನ್ ನೀಡುವ ಶಿಕ್ಷಣ ಸಂಸ್ಥೆಯಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಡಿಸ್ಟೇಂಸ್ ಎಜ್ಯುಕೇಶನ್ ಮೂಲಕ ಮಾಸ್ಟರ್ ಎಜ್ಯುಕೇಶನ್ ನೀಡಲಾಗುವುದು. ಹಾಗಾಗಿ ವಿದ್ಯಾರ್ಥಿಗಳು ಕೆಲಸ ಮಾಡಿಕೊಂಡೇ ಈ ಶಿಕ್ಷಣ ಸಂಸ್ಥೆಯಿಂದ ಪದವಿ ಪಡೆದುಕೊಳ್ಳಬಹುದು.

ಯಾರು ಈಗಾಗಲೇ ಬಿಎಡ್ ಮುಗಿಸಿ ಟೀಚಿಂಗ್ ಮಾಡುತ್ತಿರುತ್ತಾರೋ ಅವರು ತಮ್ಮ ಟೀಚಿಂಗ್ ಅಬಿಲಿಟಿ ಹೆಚ್ಚಿಸಿಕೊಳ್ಳಲು ಇಲ್ಲಿ ಶಿಕ್ಷಣ ಪಡೆಯಬಹುದಾಗಿದೆ

 

ಇನ್ಸಿಟಿಟ್ಯೂಟ್ ಆಫ್ ಅಡ್ವಾನ್ಸ್ ಡ್ ಸ್ಟಡಿ ಇನ್ ಎಜ್ಯುಕೇಶನ್, ಓಸ್ಮಾನಿಯಾ ಯೂನಿವರ್ಸಿಟಿ, ಹೈದರಾಬಾದ್

ನ್ಯಾಷನಲ್ ಕೌನ್ಸಿಲ್ ಆಫ್ ಟೀಚರ್ ಎಜ್ಯುಕೇಶನ್ ಸಂಸ್ಥೆಯಿಂದ ಅಪ್ರೂವ್ ಆಗಿರುವ ಶಿಕ್ಷಣ ಸಂಸ್ಥೆ ಇದು. ಈ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಕ್ವಾಲಿಟಿ ಶಿಕ್ಷಣ ನೀಡುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಟೀಚಿಂಗ್ ವಿಧಾನದ ಮೂಲಕ ಕಲಿಸಿಕೊಡಲಾಗುವುದು.

ಈ ಕಾಲೇಜಿನ ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

ಎ.ಡಬ್ಲ್ಯು ಹೆಚ್ ಕಾಲೇಜು ಆಫ್ ಎಜ್ಯುಕೇಶನ್, ಕೊಲ್ಕತ್ತಾ:

ಈ ಶಿಕ್ಷಣ ಸಂಸ್ಥೆ 1996ರಲ್ಲಿ ಸ್ಥಾಪಿತಗೊಂಡಿದೆ. ಈ ಕಾಲೇಜು ಕಟ್ಟಡ ನಿರ್ಮಾಣ ಶೈಲಿಯಿಂದಲೇ ಈ ಕಾಲೇಜು ಫೇಮಸ್ ಆಗಿದೆ. ಇನ್ನು ಇಲ್ಲಿ ಮೆರಿಟ್ ಆಧಾರದ ಮೇಲೆ 50% ಸೀಟು ಹಂಚಿಕೆಯಾಗುತ್ತದೆ. ವೆಲ್ ಫೇರ್ ಆಫ್ ದಿ ಹ್ಯಾಂಡಿಕ್ಯಾಪ್ಡ್ ಅಸೋಸಿಯೇಶನ್ ಈ ಕಾಲೇಜು ನಡೆಸುತ್ತಿದೆ. ಹಾಗಾಗಿ ಕಾಲೇಜು ಗಳಿಸಿದ ಆದಾಯದಲ್ಲಿ ಶೇ 50 ರಷ್ಟು ಚಾರಿಟಿ ಸಂಸ್ಥೆಗಳಿಗೆ ಹೋಗುತ್ತದೆ.

ಈ ಕಾಲೇಜಿನ ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

ಡಿಪಾರ್ಟ್ ಮೆಂಟ್ ಆಫ್ ಎಜ್ಯುಕೇಶನ್, ಯೂನಿವರ್ಸಿಟಿ ಆಫ್ ಮುಂಬಯಿ, ಮುಂಬಯಿ:

ಈ ಶಿಕ್ಷಣ ಸಂಸ್ಥೆ 1974ರಲ್ಲಿ ಸ್ಥಾಪಿತಗೊಂಡಿದೆ. ಭವಿಷ್ಯದಲ್ಲಿ ಉತ್ತಮ ಶಿಕ್ಷಕರನ್ನು ತಯಾರು ಮಾಡುತ್ತದೆ.ಈ ಶಿಕ್ಷಣ ಸಂಸ್ಥೆ. ಇಲ್ಲಿ ಎಂಎಡ್ ಮಾತ್ರವಲ್ಲದೆ ಡಾಕ್ಟರ್ ಆಫ್ ಫಿಲೋಸಫಿ ಇನ್ ಎಜ್ಯುಕೇಶನ್, ಮ್ಯಾನೇಜ್ ಮೆಂಟ್ ಆಫ್ ಎಜ್ಯುಕೇಶನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಇನ್ನಿತ್ತರ ಕೋರ್ಸ್ ಗಳನ್ನು ಕೂಡಾ ವಿದ್ಯಾರ್ಥಿಗಳಿಗೆ ಆಫರ್ ಮಾಡಲಾಗುತ್ತದೆ

ಈ ಕಾಲೇಜಿನ ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

English summary
One of the most noble professions that anyone can fathom, teaching, has existed since generations. What began as an age-old practise of passing concepts and ideas by word of mouth, soon changed its form and teaching began to be associated with the gurukula system

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia