2017-18 ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿ ಕೋರ್ಸುಗಳಿಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪಡೆಯಲು ತುಮಕೂರು ವಿಶ್ವವಿದ್ಯಾನಿಲಯ ಅವಕಾಶ ಕಲ್ಪಿಸಿದೆ.
ದಿನಾಂಕ: 25-07-2017 ರಂದು ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಥಮ ಸೆಮಿಸ್ಟರ್ ಪ್ರವೇಶಾತಿಗೆ ನೀಡುತ್ತಿದೆ.
ಅರ್ಹ ಅಭ್ಯರ್ಥಿಗಳು ತುಮಕುರು ವಿಶ್ವವಿದ್ಯಾನಿಲಯದ ಕಛೇರಿಯಿಂದ ಅರ್ಜಿಗಳನ್ನು ಪಡೆದು ದಿನಾಂಕ 05-08-2017 ರೊಳಗೆ ಪ್ರವೇಶ ಪಡೆಯಲು ಸೂಚಿಸಿದೆ.

ಸೂಚನೆ
- ಪ್ರವೇಶಾತಿಗಳು ವಿಶ್ವವಿದ್ಯಾಲಯ ಮಂಜೂರು ಮಾಡಿರುವ ವಿದ್ಯಾರ್ಥಿಗಳ ಪ್ರವೇಶ ಮಿತಿಗೆ ಒಳಪಟ್ಟಿರುತ್ತದೆ.
- ಪ್ರವೇಶ ಪಡೆದ ವಿದ್ಯಾರ್ಥಿಗಳ ಪಟ್ಟಿ ಹಾಗೂ ವಿಶ್ವವಿದ್ಯಾನಿಲಯಕ್ಕೆ ಪಾವತಿಸಿರುವ ಪ್ರವೇಶದ ಶುಲ್ಕದ ಚಲನ್ ಹಾಗೂ ಕಾಲೇಜುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಲು ಕೊನೆಯ ದಿನಾಂಕ 12-08-2017.
ಹಳೆಯ ವಿದ್ಯಾರ್ಥಿಗಳಿಗೆ ರೂ.1000/- ಗಳ ದಂಡ ಶುಲ್ಕದೊಂದಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಉಳಿಕೆ ಸೀಟುಗಳ ಪ್ರವೇಶಕ್ಕೆ ಅವಕಾಶ
ಸ್ನಾತಕೋತ್ತರ ಕೋರ್ಸ್ ಗಳಲ್ಲಿನ ಉಳಿಕೆ ಸೀಟುಗಳಿಗೆ ಆಗಸ್ಟ್ 5 ರೊಳಗೆ ಪ್ರವೇಶ ಪಡೆಯಲು ವಿಶ್ವವಿದ್ಯಾನಿಲಯ ಸೂಚಿಸಿದೆ.
ಗುಬ್ಬಿ, ಪಾವಗಡ, ಮಧುಗಿರಿ ಮತ್ತು ಕೊರಟಗೆರೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಲಭ್ಯವಿರು ಸೀಟುಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
| ಕಾಲೇಜುಗಳು | ವಿಷಯಗಳು |
| ಗುಬ್ಬಿ ಸರ್ಕಾರಿ ಕಾಲೇಜು | ಎಂ.ಎ ಕನ್ನಡ, ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತ್ರ |
| ಪಾವಗಡ ಸರ್ಕಾರಿ ಕಾಲೇಜು | ಇಂಗ್ಲಿಷ್, ಅರ್ಥಶಾಸ್ತ್ರ |
| ಮಧುಗಿರಿ ಸರ್ಕಾರಿ ಕಾಲೇಜು | ಎಂ.ಎ ಕನ್ನಡ |
| ಕೊರಟಗೆರೆ ಸರ್ಕಾರಿ ಕಾಲೇಜು | ಅರ್ಥಶಾಸ್ತ್ರ, ಎಂ.ಎಸ್ಸಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಪರಿಸರ ವಿಜ್ಞಾನ ಮತ್ತು ಸಮಾಜಶಾಸ್ತ್ರ |
ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ನೇರವಾಗಿ ತುಮಕೂರು ವಿಶ್ವವಿದ್ಯಾಲಯದ ಕಚೇರಿಗೆ ಭೇಟಿ ನೀಡಲು ಸೂಚಿಸಿದೆ ಮತ್ತು ವಿಶ್ವವಿದ್ಯಾನಿಲಯದ ವೆಬ್ಸೈಟ್ ಗಮನಿಸಬಹುದಾಗಿದೆ
ತುಮಕೂರು ವಿವಿ ವೆಬ್ಸೈಟ್ www.tumkuruniversity.ac.in


Click it and Unblock the Notifications











