ತುಮಕೂರು ವಿಶ್ವವಿದ್ಯಾನಿಲಯ 2019-20ನೇ ಸಾಲಿನ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ತುಮಕೂರು ವಿಶ್ವವಿದ್ಯಾನಿಲಯ ಮತ್ತು ಅದರ ವ್ಯಾಪ್ತಿಗೆ ಬರುವ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಅನ್ಯ ರಾಜ್ಯಗಳ ವಿಶ್ವವಿದ್ಯಾನಿಲಯಗಳಿಂದ ಸ್ನಾತಕ ಪದವಿಯಲ್ಲಿ ತೇರ್ಗಡೆ ಹೊಂದಿದ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವಿಶ್ವವಿದ್ಯಾನಿಲಯದಲ್ಲಿ ಲಭ್ಯವಿರುವ ಕೋರ್ಸ್‌ಗಳು, ಪಾವತಿಸಬೇಕಾದ ಅರ್ಜಿ ಶುಲ್ಕ ಮತ್ತು ಪ್ರಮುಖ ದಿನಾಂಕಗಳನ್ನು ತಿಳಿಯಲು ಮುಂದೆ ಓದಿ.

ತುಮಕೂರು  ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ಲಭ್ಯವಿರುವ ಕೋರ್ಸ್‌ಗಳ ವಿವರ:

ಕಲಾ ವಿಭಾಗ:

ಎಂ.ಎ ಕನ್ನಡ, ಇಂಗ್ಲಿಷ್, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಪಬ್ಲಿಕ್ ಅಡ್ಮಿನಿಸ್ಟ್ರೇಷನ್, ಸಮಾಜಶಾಸ್ತ್ರ, ಪತ್ರಿಕೋದ್ಯಮ, ಮಾಸ್ಟರ್ ಆಫ್ ಸೋಷಿಯಲ್ ವರ್ಕ್ (ಎಂ.ಎಸ್.ಡಬ್ಲ್ಯೂ) ಮತ್ತು ಪಿಜಿ ಡಿಪ್ಲೊಮಾ ಇನ್ ಡಿಸಾಸ್ಟರ್ ಮ್ಯಾನೇಜ್ಮೆಂಟ್.
ಹೊಸ ಕೋರ್ಸ್‌ಗಳು: ಫಂಕ್ಷನಲ್ ಇಂಗ್ಲೀಷ್, ಇಂಟರ್‌ನ್ಯಾಷನಲ್ ರಿಲೇಷನ್ಸ್,ದೃಶ್ಯ ಕಲಾ (ಎಂ.ವಿ.ಎ)

ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ:

ಎಂ.ಎಸ್ಸಿ. ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾವಯನ ರಸಾಯನಶಾಸ್ತ್ರ, ಜೀವ ರಸಾಯನಶಾಸ್ತ್ರ, ಗಣಿತಶಾಸ್ತ್ರ,ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ,ಜೈವಿಕ ತಂತ್ರಜ್ಞಾನ,ಪರಿಸರ ವಿಜ್ಞಾನ, ಮನಃಶಾಸ್ತ್ರ, ವಿದ್ಯುನ್ಮಾನ ಮಾಧ್ಯಮ, ಎಂ.ಎಸ್. ಸಂವಹನ,ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ,

ಹೊಸ ಕೋರ್ಸ್‌ಗಳು: ರಿಸರ್ಚ್ ಮೆತಡಾಲಜಿ,ಆಹಾರ ಮತ್ತು ಪೋಷಕಾಂಶಗಳು,ಮೈಕ್ರೋಬಯೋಲಜಿ,ಪಿ.ಜಿ ಡಿಪ್ಲೋಮಾ ಇನ್ ಕೊಕೋನಟ್ ಪ್ಲಾಂಟೇಷನ್ ಮ್ಯಾನೇಜ್ಮೆಂಟ್ ಅಂಡ್ ಪ್ರೊಸೆಸ್ಸಿಂಗ್,ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಅಂಡ್ ಸೇಫ್ಟಿ ಮ್ಯಾನೇಜ್ಮೆಂಟ್

ವಾಣಿಜ್ಯ ಮತ್ತು ನಿರ್ವಹಣೆ ವಿಭಾಗ:

ವಾಣಿಜ್ಯ ಶಾಸ್ತ್ರ,
ಹೊಸ ಕೋರ್ಸ್‌ಗಳು: ವಾಣಿಜ್ಯಶಾಸ್ತ್ರ (ಮಾಹಿತಿ ವ್ಯವಸ್ಥೆ), ಪ್ರವಾಸೋದ್ಯಮ ಮತ್ತು ಪ್ರವಾಸ ನಿರ್ವಹಣೆ, (ಎಂ.ಟಿ.ಟಿ.ಎಂ)

ಅರ್ಜಿ ಶುಲ್ಕ:

ಸಾಮಾನ್ಯ ಅಭ್ಯರ್ಥಿಗಳಿಗೆ ರೂ.300/-
ಎಸ್.ಸಿ/ಎಸ್.ಟಿ/ಪ್ರ-1ರ ಅಭ್ಯರ್ಥಿಗಳಿಗೆ ರೂ.150/-
ಒಂದಕ್ಕಿಂತ ಹೆಚ್ಚು ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪ್ರತ್ಯೇಕವಾಗಿ ಆನ್‌ಲೈನ್ ಮೂಲಕ ರೂ.300/-(ಎಸ್.ಸಿ/ಎಸ್.ಟಿ/ಪ್ರ-1ರ ಅಭ್ಯರ್ಥಿಗಳಿಗೆ ರೂ.150/-) ಪಾವತಿಸುವ ಮೂಲಕ ಪ್ರತ್ಯೇಕ ಅರ್ಜಿ ಸಲ್ಲಿಸುವುದು.

<strong>ಕನ್ನಡ ವಿಶ್ವವಿದ್ಯಾನಿಲಯ 2019-20ನೇ ಸಾಲಿನ ವಿವಿಧ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ</strong>ಕನ್ನಡ ವಿಶ್ವವಿದ್ಯಾನಿಲಯ 2019-20ನೇ ಸಾಲಿನ ವಿವಿಧ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

ಪ್ರಮುಖ ದಿನಾಂಕಗಳು :

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 17-6-2019
ಆನ್‌ಲೈನ್ ಮೂಲಕ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಂಬಂಧಸಿದ ವಿಭಾಗಗಳಿಗೆ ಸಲ್ಲಿಸಲು ಕೊನೆಯ ದಿನಾಂಕ: 15-07-2019
ಪ್ರಾವಿಷನಲ್ ಮೆರಿಟ್ ಲೀಸ್ಟ್ ಪ್ರಕಟಿಸುವ ದಿನಾಂಕ: 18-07-2019
ಆಕ್ಷೇಪ ಸಲ್ಲಿಸಲು ಕೊನೆಯ ದಿನಾಂಕ: 19-07-2019
ಅಂತಿಮ ಮೆರಿಟ್ ಲಿಸ್ಟ್ ಪ್ರಕಟಿಸುವ ದಿನಾಂಕ: 22-07-2019
ಎಂ.ಎಸ್ಸಿ ಕೋರ್ಸಿನ ಕೌನ್ಸಿಲಿಂಗ್ ನಡೆಯುವ ದಿನಾಂಕ: 23-07-2019
ಎಂ.ಎ. ಮತ್ತು ಎಂ.ಎಸ್.ಡ.ಬ್ಲ್ಯೂ ವಿಷಯಗಳಿಗೆ ಕೌನ್ಸಿಲಿಂಗ್ ನಡೆಯುವ ದಿನಾಂಕ: 24-07-2019
ಎಂ.ಕಾಂ, ಎಂ.ಕಾಂ -ಮಾಹಿತಿ ವ್ಯವಸ್ಥೆ ಮತ್ತು ಎಂ.ಟಿ.ಟಿ.ಎಂ. ಕೋರ್ಸ್‌ಗಳ ಕೌನ್ಸಿಲಿಂಗ್ ದಿನಾಂಕ: 25-07-2019 ಮತ್ತು 26-7-2019
ತರಗತಿಗಳು ಪ್ರಾರಂಭವಾಗುವ ದಿನಾಂಕ: 01-08-2019

ಹೆಚ್ಚಿನ ಮಾಹಿತಿಗಾಗಿ ತುಮಕೂರು ವಿಶ್ವವಿದ್ಯಾಲಯದ ವೆಬ್‌ಸೈಟ್‌ http://www.tumkuruniversity.ac.in/index.php?/home ಗಮನಿಸಿ. ಮತ್ತು ಅಭ್ಯರ್ಥಿಗಳು ಈ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ

ಕ್ಲಿಕ್ ಮಾಡಿ

<strong>ಕುವೆಂಪು ವಿಶ್ವವಿದ್ಯಾನಿಲಯ 2019-20ನೇ ಸಾಲಿನ ದೂರ ಶಿಕ್ಷಣ ಪ್ರವೇಶಾತಿಗೆ ಅರ್ಜಿ ಆಹ್ವಾನ</strong>ಕುವೆಂಪು ವಿಶ್ವವಿದ್ಯಾನಿಲಯ 2019-20ನೇ ಸಾಲಿನ ದೂರ ಶಿಕ್ಷಣ ಪ್ರವೇಶಾತಿಗೆ ಅರ್ಜಿ ಆಹ್ವಾನ

ತುಮಕೂರು ವಿಶ್ವವಿದ್ಯಾಲಯ :

2004 ರಲ್ಲಿ ಸ್ಥಾಪನೆಯಾದ ತುಮಕೂರು ವಿಶ್ವವಿದ್ಯಾಲಯವು ಅಂದಿನಿಂದ ಇಂದಿನವರೆಗೆ ಯಶಸ್ವಿಯಾಗಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಹಲವು ವಿವಿಧ ಕೋರ್ಸುಗಳಲ್ಲಿ ಶಿಕ್ಷಣ ನೀಡುತ್ತಾ ಬಂದಿದೆ. ಸೇವಸ್ತು ಮೇ ಜ್ಞಾನ ವಿಜ್ಞಾನಾಧಾರ ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭವಾದ ಈ ವಿಶ್ವವಿದ್ಯಾನಿಲಯವು ಜಾಗತೀಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಮಾನವ ಸಂಪನ್ಮೂಲವನ್ನು ಸಮಾಜಕ್ಕೆ ನೀಡುವ ಉದ್ದೇಶವನ್ನು ಹೊಂದಿದೆ.

For Quick Alerts
ALLOW NOTIFICATIONS  
For Daily Alerts

English summary
Tumkur university 2019-20 admission started and inviting applications for PG courses.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X