ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಗೆ ಅರ್ಜಿ ಆಹ್ವಾನ

Posted By:

ತುಮಕೂರು ವಿಶ್ವವಿದ್ಯಾನಿಲಯ ಮತ್ತು ಅದರ ವ್ಯಾಪ್ತಿಗೆ ಬರುವ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಪದವಿ ಪೂರೈಸಿರುವವರು ಮತ್ತು ಹೈದರಾಬಾದ್-ಕರ್ನಾಟಕ ಭಾಗದ ಪದವೀಧರರು ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಜುಲೈ 15 ರೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಕಲಾ ವಿಭಾಗ

ಎಂ.ಎ ಕನ್ನಡ, ಇಂಗ್ಲಿಷ್, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಪಬ್ಲಿಕ್ ಅಡ್ಮಿನಿಸ್ಟ್ರೇಷನ್, ಸಮಾಜಶಾಸ್ತ್ರ, ಪತ್ರಿಕೋದ್ಯಮ, ಮಾಸ್ಟರ್ ಆಫ್ ಸೋಷಿಯಲ್ ವರ್ಕ್ (ಎಂ.ಎಸ್.ಡಬ್ಲ್ಯೂ) ಮತ್ತು ಪಿಜಿ ಡಿಪ್ಲೊಮಾ ಇನ್ ಡಿಸಾಸ್ಟರ್ ಮ್ಯಾನೇಜ್ಮೆಂಟ್.

ತುಮಕೂರು ವಿಶ್ವವಿದ್ಯಾನಿಲಯ ಪಿಜಿ ಕೋರ್ಸುಗಳ ಪ್ರವೇಶಾತಿ

ವಿಜ್ಞಾನ ವಿಭಾಗ

ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಬಯೋಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಲೈಬ್ರರಿ ಅಂಡ್ ಇನ್ಫರ್ಮೇಷನ್ ಸೈನ್ಸ್, ಎನ್ವಿರಾನ್ಮೆಂಟಲ್ ಸೈನ್ಸ್, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಎಲೆಕ್ಟ್ರಾನಿಕ್ ಮೀಡಿಯಾ, ಸೈಕಾಲಜಿ, ಎಂ.ಎಸ್ ಕಮ್ಯೂನಿಕೇಷನ್, ಎಂಸಿಎ

ವಾಣಿಜ್ಯ ವಿಭಾಗ: ಎಂ.ಕಾಂ

ಈ ವರ್ಷ ಹೊಸದಾಗಿ ಫೆಮಿನಿಸ್ಟ್ ಕೌನ್ಸಲಿಂಗ್ ಅಂಡ್ ಲೈಫ್ ಸ್ಕಿಲ್ಸ್ ಮತ್ತು ಪಿಜಿ ಡಿಪ್ಲೊಮಾ ಇನ್ ವುಮೆನ್ ಸ್ಟಡೀಸ್ ಎಂಬ ಎರಡು ಕೋರ್ಸುಗಳನ್ನು ಪರಿಚಯಿಸುತ್ತಿದ್ದು, ಅವುಗಳ ಮಾಹಿತಿಯನ್ನು ವೆಬ್ಸೈಟ್ ನಲ್ಲಿ ಪ್ರಕಟಿಸುವುದಾಗಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಕೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಗಳನ್ನು ಮತ್ತು ಕೋರ್ಸುಗಳ ವಿವರವಿರುವ ಪ್ರಾಸ್ಪೆಕ್ಟಸ್ ಅನ್ನು ಶುಲ್ಕ ಪಾವತಿಸಿ ವಿಶ್ವವಿದ್ಯಾಲಯದಲ್ಲಿ ಪಡೆಯಬಹುದಾಗಿದೆ.

ಅರ್ಜಿ ಶುಲ್ಕ

 • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.400/-
 • ಎಸ್.ಸಿ/ಎಸ್.ಟಿ/ಪ್ರ-1ರ ಅಭ್ಯರ್ಥಿಗಳಿಗೆ ರೂ.200/-
 • ಒಂದಕ್ಕಿಂತ ಹೆಚ್ಚು ವಿಷಯಗಳಿಗೆ ಅರ್ಜಿ ಸಲ್ಲಿಸುವವರು ರೂ.400/-(ಎಸ್.ಸಿ/ಎಸ್.ಟಿ/ಪ್ರ-1ರ ಅಭ್ಯರ್ಥಿಗಳಿಗೆ ರೂ.200/-) ಶುಲ್ಕ ಪಾವತಿಸಿ ಪ್ರತ್ಯೇಕ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಅರ್ಜಿ ಸಲ್ಲಿಸುವ ವಿಳಾಸ

ಡಾ.ಪಿ.ಸದಾನಂದ ಮಯ್ಯ ಬ್ಲಾಕ್,
ತುಮಕೂರು ವಿಶ್ವವಿದ್ಯಾಲಯ,
ಬಿ.ಹೆಚ್.ರಸ್ತೆ, ತುಮಕೂರು-572103

ಪ್ರಮುಖ ದಿನಾಂಕಗಳು

 • ಅರ್ಜಿ ಮತ್ತು ಪ್ರಾಸ್ಪೆಕ್ಟಸ್ ನೀಡಲು ಆರಂಭದ ದಿನಾಂಕ: 05-07-2017
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-07-2017
 • ಎಂ.ಎಸ್.ಡಬ್ಲ್ಯೂ ಪ್ರವೇಶ ಪರೀಕ್ಷೆಯ ದಿನಾಂಕ: 17-07-2017
 • ಎಂ.ಎಸ್.ಡಬ್ಲ್ಯೂ ಪ್ರವೇಶ ಪರೀಕ್ಷೆ ಫಲಿತಾಂಶದ ದಿನಾಂಕ: 19-07-2017
 • ಮೆರಿಟ್ ಲಿಸ್ಟ್ ಪ್ರಕಟಿಸುವ ದಿನಾಂಕ: 21-07-2017
 • ಆಕ್ಷೇಪ ಸಲ್ಲಿಸಲು ಕೊನೆಯ ದಿನಾಂಕ: 24-07-2017
 • ವಿಜ್ಞಾನ ವಿಷಯಗಳಿಗೆ ಕೌನ್ಸಲಿಂಗ್ ನಡೆಯುವ ದಿನಾಂಕ: 26-07-2017
 • ಕಲಾ ಮತ್ತು ಎಂ.ಎಸ್.ಡ.ಬ್ಲ್ಯೂ ವಿಷಯಗಳಿಗೆ ಕೌನ್ಸಲಿಂಗ್ ನಡೆಯುವ ದಿನಾಂಕ: 27-07-2017
 • ವಾಣಿಜ್ಯ ವಿಷಯಕ್ಕೆ ಕೌನ್ಸಲಿಂಗ್ ನಡೆಯುವ ದಿನಾಂಕ: 28-07-2017
 • ತರಗತಿಗಳು ಪ್ರಾರಂಭವಾಗುವ ದಿನಾಂಕ: 01-08-2017

ಹೆಚ್ಚಿನ ಮಾಹಿತಿಗಾಗಿ ತುಮಕೂರು ವಿಶ್ವವಿದ್ಯಾಲಯದ ವೆಬ್ಸೈಟ್ www.tumkuruniversity.ac.in ಗಮನಿಸಿ

ತುಮಕೂರು ವಿಶ್ವವಿದ್ಯಾಲಯ

2004 ರಲ್ಲಿ ಸ್ಥಾಪನೆಯಾದ ತುಮಕೂರು ವಿಶ್ವವಿದ್ಯಾಲಯವು ಅಂದಿನಿಂದ ಇಂದಿನವರೆಗೆ ಯಶಸ್ವಿಯಾಗಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಹಲವು ವಿವಿಧ ಕೋರ್ಸುಗಳಲ್ಲಿ ಶಿಕ್ಷಣ ನೀಡುತ್ತಾ ಬಂದಿದೆ. ಸೇವಸ್ತು ಮೇ ಜ್ಞಾನ ವಿಜ್ಞಾನಾಧಾರ ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭವಾದ ಈ ವಿಶ್ವವಿದ್ಯಾನಿಲಯವು ಜಾಗತೀಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಮಾನವ ಸಂಪನ್ಮೂಲವನ್ನು ಸಮಾಜಕ್ಕೆ ನೀಡುವ ಉದ್ದೇಶವನ್ನು ಹೊಂದಿದೆ.

English summary
Applications are invited from the eligible candidates who have passed Bachelor's Degree from any University in Karnataka and who are eligible under Hyderabad-Karnataka reservation quota for admission to the following P.G Courses offered at the University, Constituent Colleges and affiliatedColleges.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia