UGC Online 123 UG PG Courses: ಯುಜಿಸಿ ಇಂದ ಸ್ವಯಂ ಪೋರ್ಟಲ್ ನಲ್ಲಿ 123 ಕೋರ್ಸ್ ಗಳು ಲಭ್ಯ

ಒಟ್ಟು 123 ಉಚಿತ ಆನ್‌ಲೈನ್ ಕೋರ್ಸ್ ಗಳು ಸ್ವಯಂ ಪೋರ್ಟಲ್ ನಲ್ಲಿ ಲಭ್ಯ

ವಿಶ್ವವಿದ್ಯಾಲಯ ಧನಸಹಾಯ ಆಯೋಗವು 2021 ನೇ ಸಾಲಿನ ಜುಲೈ ಸೆಷನ್‌ಗೆ ಸ್ವಯಂ ಪೋರ್ಟಲ್‌ನಲ್ಲಿ 123 ಯುಜಿ ಮತ್ತು ಪಿಜಿ ಕೋರ್ಸ್ ಗಳನ್ನು ಪ್ರಕಟಿಸಿದೆ. ಒಟ್ಟು 83 ಪದವಿ ಹಂತದ ಮತ್ತು 40 ಸ್ನಾತಕೋತ್ತರ ಪದವಿ ಕೋರ್ಸ್ ಗಳು, ನಾನ್‌-ಇಂಜಿನಿಯರಿಂಗ್ ಆನ್‌ಲೈನ್‌ ಕೋರ್ಸ್‌ಗಳನ್ನು ಜುಲೈ-ಅಕ್ಟೋಬರ್ ಸೆಷನ್‌ಗೆ ಬಿಡುಗಡೆ ಮಾಡಿದೆ.

ಪ್ರಸ್ತುತ ದಿನಗಳಲ್ಲಿ ಕೋವಿಡ್ ನಿಂದಾಗಿ ಉನ್ನತ ಶಿಕ್ಷಣ ಸಂಸ್ಥೆಗಳು ಮುಚ್ಚಲಾಗಿವೆ. ಹಾಗಾಗಿ ಆನ್‌ಲೈನ್ ಕಲಿಕೆಗೆ ಹೆಚ್ಚು ಬೇಡಿಕೆ ಇರುವುದರಿಂದ ವಿದ್ಯಾರ್ಥಿಗಳು ಸ್ವಯಂ ಪೋರ್ಟಲ್ ನಲ್ಲಿ ಈ ಕೋರ್ಸ್ ಗಳನ್ನು ಅಧ್ಯಯನ ಮಾಡಬಹುದಾಗಿದೆ.

ಈ ಎಲ್ಲಾ ನಾನ್‌ ಇಂಜಿನಿಯರಿಂಗ್ ಕೋರ್ಸ್ ಗಳನ್ನು ವಿದ್ಯಾರ್ಥಿಗಳು ಆನ್‌ಲೈನ್ ಮೂಲಕವೇ ಮಾಡಬಹುದಾಗಿದ್ದರು, ಉಚಿತವಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿರುತ್ತದೆ. ಆದರೆ ಕೋರ್ಸ್ ನ ಅಂತಿಮ ಮೌಲ್ಯಮಾಪನವನ್ನು ಆಂತರಿಕ ಮೌಲ್ಯಮಾಪನ ಮತ್ತು ಸೆಮಿಸ್ಟರ್ ಎಂಡ್ ಪರೀಕ್ಷೆಗಳ ಆಧಾರದ ಮೇಲೆ ಮಾಡಲಾಗುತ್ತದೆ. ಚರ್ಚೆಗಳು, ರಸಪ್ರಶ್ನೆ, ಕಾರ್ಯಯೋಜನೆಗಳು ಮತ್ತು ಸೆಷನಲ್ ಪರೀಕ್ಷೆಗಳ ಆಧಾರದ ಮೇಲೆ ಆಂತರಿಕ ಮೌಲ್ಯಮಾಪನ ಮಾಡಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್‌ swayam.gov.in ಗೆ ಭೇಟಿ ನೀಡಿ ಈ ಕೋರ್ಸ್ ಗಳ ಕಲಿಕೆಯನ್ನು ಮಾಡಬಹುದು ಎಂದು ಯುಜಿಸಿ ತಿಳಿಸಿದೆ. ಶಾಲೆ ಕಾಲೇಜುಗಳಿಗೆ ಕಲಿಕೆಗಾಗಿ ಹೋಗಲು ಸಾಧ್ಯವಾಗದವರು ಈ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಕಲಿಕೆಯನ್ನು ಮಾಡಬಹುದು. ಅಭ್ಯರ್ಥಿಗಳು ಯುಜಿಸಿಯ ಅಧಿಕೃತ ವೆಬ್‌ಸೈಟ್ ugc.ac.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ಯಾವೆಲ್ಲಾ ಯುಜಿ ಕೋರ್ಸ್ ಗಳನ್ನು ಮಾಡಬಹುದು ಎಂದು ಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಯಾವೆಲ್ಲಾ ಪಿಜಿ ಕೋರ್ಸ್ ಗಳನ್ನು ಮಾಡಬಹುದು ಎಂದು ಪಟ್ಟಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
UGC has announced 83 UG and 40 PG courses on its SWAYAM platform for the july session this year.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X