ಯಾವ ಎಂಬಿಎ ಸ್ಪೇಶಲೈಜೇಶನ್ ಬೆಸ್ಟ್ ನಿಮಗೆ ಗೊತ್ತಾ?

ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಟೀವ್ ಕೋರ್ಸ ಇದೀಗ ಎಲ್ಲಾ ವಿದ್ಯಾರ್ಥಿಗಳನ್ನ ಹೆಚ್ಚಾಗಿ ಅಟ್ರಾಕ್ಟ್ ಮಾಡುತ್ತಿದೆ. ಈ ಕೋರ್ಸ ಮಾಡಿದ್ದಲ್ಲಿ ಗೌರವಾನ್ವಿತ ಹುದ್ದೆಗಳನ್ನ ನೀವು ಅಲಂಕರಿಸಬಹುದು. ಎಂಬಿಎ ಕೋರ್ಸ ಮಾಡುವಾಗ ಎರಡು ವಿಷಯಗಳನ್ನ ವಿದ್ಯಾರ್ಥಿಗಳು ಗಮನದಲ್ಲಿಟ್ಟು ಕೊಳ್ಳಬೇಕು ಅವು ಯಾವುವು ವೆಂದರೆ ಒಂದು ಬೆಸ್ಟ್ ಸಂಸ್ಥೆಯಲ್ಲಿ ಕೋರ್ಸ ಮಾಡಬೇಕು ಎರಡನೆಯದು, ಎಂಬಿಎಯಲ್ಲಿ ಸ್ಪೇಶಲ್ ಸಬ್‍ಜೆಕ್ಟ್ ಆಯ್ಕೆ ಮಾಡಿಕೊಳ್ಳುವಾಗ ಹೆಚ್ಚು ಯೋಚಿಸಿ ಆಯ್ಕೆ ಮಾಡಬೇಕು.

ಯಾವ ಎಂಬಿಎ ಸ್ಪೇಶಲೈಜೇಶನ್ ಬೆಸ್ಟ್ ನಿಮಗೆ ಗೊತ್ತಾ?

ಇನ್ನು ಕೋರ್ಸ ಮಾತ್ರವಲ್ಲದೇ ನಾವು ಆಯ್ಕೆ ಮಾಡಿಕೊಳ್ಳುವ ಸ್ಪೇಶಲೈಜ್ ಸಬ್‍ಜೆಕ್ಟ್ ಕೂಡಾ ನಮ್ಮ ಕೆರಿಯರ್ ರೂಪಿಸುತ್ತದೆ. ಹಾಗಾಗಿ ಯಾವ ಸ್ಪೇಶಲೈಸೇಶನ್ ಬೆಸ್ಟ್ ಎಂದು ವಿದ್ಯಾರ್ಥಿಗಳು ತುಂಬಾ ಕಂಪ್ಯೂಸ್ ಆಗುತ್ತಾರೆ. ಆದ್ರೆ ಎಲ್ಲಾ ಸ್ಪೇಶಲೈಜೇಶನ್ ಕೂಡಾ ಒಂದೇ ತರಹ ಬೆಸ್ಟ್ ಆಗಿಯೇ ಇರುತ್ತದೆ. ಯಾವೆಲ್ಲಾ ಎಂಬಿಎ ಸ್ಪೇಶಲೈಜೇಶನ್ ಇದೆ ಅನ್ನೋ ಮಾಹಿತಿ ನಿಮಗೆ ನೀಡುತ್ತೇವೆ ಮುಂದಕ್ಕೆ ಓದಿಕೊಳ್ಳಿ

ALSO READ: ಕ್ಲಿಕ್ ಕ್ಲಿಕ್ ನಿಮಗೂ ಈ ಹವ್ಯಾಸವಿದೆಯಾ... ಟಾಪ್ ಐದು ಫೋಟೋಗ್ರಾಫಿ ಕೋರ್ಸಗಳು

ಎಂಬಿಎ ಇನ್ ಮಾರ್ಕೆಟಿಂಗ್:

ಮಾರ್ಕೆಟಿಂಗ್ ವಿಭಾಗ ಪ್ರತಿಯೊಂದು ಕಂಪನಿಗೂ ಪ್ರಾಫಿಟ್ ತಂದು ಕೊಡುವ ಪ್ರಮುಖ ವಿಭಾಗವಾಗಿದೆ. ಇದೇ ಕಾರಣಕ್ಕಾಗಿ ಹಲವಾರು ಕಾರ್ಪೋರೇಟ್ ಕಂಪನಿಗಳು, ಕಂಪನಿಗೆ ಆದಾಯ ತರಲು ಹಾಗೂ ಕಂಪನಿಯ ಉತ್ಪನ್ನವನ್ನ ಪ್ರಮೋಟ್ ಮಾಡಲು ಉತ್ತಮ ಮಾರ್ಕೆಟ್ ಸ್ಕಿಲ್ ಇರುವ ಉದ್ಯೋಗಿಗಳನ್ನ ಕಂಪನಿ ಆಯ್ಕೆ ಮಾಡುತ್ತದೆ.

ಎಂಬಿಎ ಇನ್ ಹೆಚ್‍ಆರ್:


ಯಾವುದೇ ಸಮಸ್ಯೆ. ತೊಂದರೆ ಇಲ್ಲದೇ ಕೆಲಸದ ಒತ್ತಡವನ್ನ ಹೇಗೆ ಮ್ಯಾನೇಜ್ ಮಾಡಿಕೊಳ್ಳಬಹುದು ಎಂಬುವುದನ್ನ ಹೆಚ್ ಸ್ಪೇಶಲೈಸ್ ವಿಭಾಗವು ತಿಳಿಸಿಕೊಡುತ್ತದೆ. ಈ ಸಬ್‍ಜೆಕ್ಟ್ ಅಲ್ಲಿ ಸ್ಪೇಶಲೈಸ್ ಮಾಡಿದವರಿಗೆ ಕಂಪನಿಯ ಉದ್ಯೋಗಿಗಳನ್ನ ಹೇಗೆ ಮ್ಯಾನೇಜ್ ಮಾಡುವುದು ಹಾಗೂ ಉದ್ಯೋಗಕ್ಕೆ ಸಂಬಂಧಪಟ್ಟ ಸಮಸ್ಯೆಯನ್ನ ಹೇಗೆ ಬಗೆಹರಿಸುವ ಸ್ಕಿಲ್ ಅವರಿಗೆ ತಿಳಿದಿದೆ.

ನೇಮಕಾತಿ, ಅಭ್ಯರ್ಥಿಗಳ ಆಯ್ಕೆ, ಟ್ರೈನಿಂಗ್, ವೇತನ, ರಜೆ ಮುಂತಾದ ಕಂಪನಿಗಳ ವ್ಯವಹಾರವನ್ನ ಇವರು ನೋಡಿಕೊಳ್ಳುತ್ತಾರೆ.

ಎಂಬಿಎ ಇನ್ ಫೈನಾನ್ಸ್:

ಈ ಕೋರ್ಸ ಮಾಡಿದ್ರೆ ನೀವು ಕೈ ತುಂಬಾ ಸಂಬಳ ಪಡೆಯಬಹುದು. ಈ ಕೋರ್ಸನಿಂದ ವಿದ್ಯಾರ್ಥಿಗಳಿಗೆ ಫೈನಾಂಶಿಯಲ್ ಥಿಯರೀಸ್, ಹಣಕಾಸು ವ್ಯವಹಾರ ಹಾಗೂ ಹಣಕಾಸು ಮತ್ತು ಬ್ಯುಸಿನೆಸ್‍ಗೆ ಸಂಬಂಧಪಟ್ಟ ಸಮಸ್ಯೆಗಳನ್ನ ಬಗೆಹರಿಸುವ ಸ್ಕಿಲ್ ಈ ಕೋರ್ಸ ಮಾಡಿದವರಿಗೆ ಇರುತ್ತದೆ.


ಎಂಬಿಎ ಇನ್ ಇಂರ್ಫೋಮೇಶನ್ ಟೆಕ್ನಾಲಾಜಿ:

ಈ ಸ್ಪೇಶಲೈಸೇಶನ್ ಕೋರ್ಸ ಮ್ಯಾನೇಜ್‍ಮೆಂಟ್ ಇಂಫೋರ್ಮೇಶನ್ ಸಿಸ್ಟಮ್ ಎಂದೇ ಫೇಮಸ್. ಐಟಿ ಬ್ಯಾಕ್‍ಗ್ರೌಂಡ್‍ನಿಂದಾಗಿ ಈ ಕೋರ್ಸ ಸಕ್ಸ್‍ಫುಲ್ ಸೈಶಲೈಜೇಶನ್ ಕೂಡಾ ಆಗಿದೆ. ಸರ್ವೀಸ್ ಸೆಕ್ಟರ್‍ಗಳಲ್ಲಿ ಈ ಕೋರ್ಸ ಮಾಡಿದವರಿಗೆ ಹಲವಾರು ಉದ್ಯೋಗವಕಾಶವಿದೆ.

ALSO READಬೆಂಗಳೂರಿನ ಬೆಸ್ಟ್ ಪ್ರಿ- ಸ್ಕೂಲ್‌ಗಳು... ಈ ಸ್ಕೂಲ್‌ಗಳಿಂದಲೇ ಮಕ್ಕಳ ಶಿಕ್ಷಣ ಪ್ರಾರಂಭಿಸಿ!

ಎಂಬಿಎ ಇನ್ ಆಪರೇಶನ್ ಮ್ಯಾನೇಜ್‍ಮೆಂಟ್:

ಇದೊಂದು ಯೂನಿಕ್ ಸ್ಪೇಶಲೈಸೇಶನ್ ಆಗಿದೆ. ಪ್ರೊಡಕ್ಷನ್ ಮ್ಯಾನೇಜ್‍ಮೆಂಟ್ ಬಗ್ಗೆ ಈ ಕೋರ್ಸನಲ್ಲಿ ತಿಳಿಸಿಕೊಡಲಾಗುತ್ತದೆ. ಈ ಸ್ಪೇಶಲೈಸೇಶನ್ ಕೋರ್ಸ ಮಾಡಿದವರಿಗೆ, ಡೈಲಿ ಆಪರೇಶನ್ ಆಫ್ ದಿ ಕಂಪನಿ ಬಗ್ಗೆ ಈ ಕೋರ್ಸನಲ್ಲಿ ನಿಮಗೆ ತಿಳಿಸಿಕೊಡಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

    English summary
    Master of Business Administration (MBA) has always attracted students who wanted to pursue higher education and bag the most prestigious jobs. While opting for a management course, the two things playing a significant role which decides how the a student's professional career will be. The first one is the institution and the second is the specialization in MBA.

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more