BCWD Hostel Application Karnataka 2021 : ಮೆಟ್ರಿಕ್ ನಂತರದ ಹಾಸ್ಟೆಲ್ ಪ್ರವೇಶಾತಿಗೆ ಅರ್ಜಿ ಆಹ್ವಾನ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ  ಮೆಟ್ರಿಕ್ ನಂತರದ ಹಾಸ್ಟೆಲ್ ಪ್ರವೇಶಾತಿಗೆ ಅರ್ಜಿ ಆಹ್ವಾನ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾ/ಪ.ಪಂ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ 2021-22ನೇ ಸಾಲಿಗೆ ಆನ್-ಲೈನ್ ಮುಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಇಲಾಖೆಯ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಬೇಕು. ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22:10:2021

ಅಭ್ಯರ್ಥಿಗಳಿಗೆ ಸೂಚನೆ :

1.ವಿದ್ಯಾರ್ಥಿಗಳು ಹಿಂದುಳಿದ ವರ್ಗಗಕ್ಕೆ ಸೇರಿದ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿರಬೇಕು.

2. ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯಮಿತಿ ಪ್ರವರ್ಗ-1 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ರೂ.2.50 ಲಕ್ಷ ಹಾಗೂ ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ- ರೂ.1.00 ಲಕ್ಷ ಒಳಗಿರಬೇಕು.

3.ವಿದ್ಯಾರ್ಥಿಗಳು ಕಡ್ಡಾಯವಾಗಿ ಆನ್‍ಲೈನ್‍ನಲ್ಲಿಯೇ ಅರ್ಜಿ ಸಲ್ಲಿಸಬೇಕು.

4. ಆನ್‍ಲೈನ್ ಅರ್ಜಿಯಲ್ಲಿ ಎಸ್.ಎಸ್.ಎಲ್.ಸಿ ರಿಜಿಸ್ಟರ್ ಸಂಖ್ಯೆ, ಪಾಸಾದ ವರ್ಷ, ಹುಟ್ಟಿದ ದಿನಾಂಕವನ್ನು ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿರುವಂತೆಯೇ ನಮೂದಿಸಬೇಕು.

5. ವಿದ್ಯಾರ್ಥಿಯು ಪ್ರವೇಶ ಪಡೆದಿರುವ ಕಾಲೇಜು, ತಾಲ್ಲೂಕು, ಜಿಲ್ಲೆ, ವಿಶ್ವವಿದ್ಯಾನಿಲಯ, ಬೋರ್ಡ್/ಮಂಡಳಿ, ಪ್ರವೇಶದ ವಿಧಾನ, ಕೋರ್ಸಿನ ವಿವರ, ಪ್ರವೇಶದ ವಿವರ ಹಾಗೂ ಹಿಂದಿನ ತರಗತಿ/ಕೋರ್ಸಿನಲ್ಲಿ ಪಡೆದ ಅಂಕಗಳ ವಿವರವನ್ನು ತಪ್ಪಿಲ್ಲದಂತೆ ನಮೂದಿಸಬೇಕು.

6. ಇದುವರೆಗೆ ಫಲಿತಾಂಶ ಪ್ರಕಟಗೊಳ್ಳದೇ ಇರುವ ಕೋರ್ಸುಗಳ ವಿದ್ಯಾರ್ಥಿಗಳು ಮಾತ್ರ ಆನ್ ಲೈನ್ ಅರ್ಜಿಯಲ್ಲಿ Complete Result Awaited ಬಟನ್ ಕ್ಲಿಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ (ಇಂತಹ ವಿದ್ಯಾರ್ಥಿಗಳು ಫಲಿತಾಂಶ ಬಂದ ತಕ್ಷಣವೇ ಅರ್ಜಿಯ ಇನ್ನೊಂದು ಪ್ರತಿಯೊಂದಿಗೆ ಅಂಕಪಟ್ಟಿಯನ್ನು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಛೇರಿಗೆ ತಲುಪಿಸಿ ಸ್ವೀಕೃತಿ ಪಡೆಯುವುದು. ಅಂಕಪಟ್ಟಿಯನ್ನು ಸಲ್ಲಿಸದೇ ಇದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು).

7. ವಿದ್ಯಾರ್ಥಿಯು ಪ್ರವೇಶ ಪಡೆದಿರುವ ಕಾಲೇಜಿನಿಂದ ಸ್ವಂತ ಸ್ಥಳಕ್ಕೆ ಕನಿಷ್ಠ 5 ಕಿ.ಮೀ ದೂರದ ವಿದ್ಯಾರ್ಥಿಗಳಾಗಿರಬೇಕು. ಕಾಲೇಜಿನಿಂದ ಸ್ವಂತ ಸ್ಥಳಕ್ಕೆ ಇರುವ ದೂರವನ್ನು ಕಿ.ಮೀ.ಗಳಲ್ಲಿ ನಮೂದಿಸಬೇಕು.

8. ವಿದ್ಯಾರ್ಥಿ ಪಡೆದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ ಸಂಖ್ಯೆಯನ್ನು ನಮೂದಿಸಿ, View ಬಟನ್ Click ಮಾಡಿ ನೀವು ಪಡೆದಿರುವ ಪ್ರಮಾಣ ಪತ್ರದಲ್ಲಿರುವ ಅಂಕಿ ಅಂಶಗಳಂತೆ ಇರುವುದನ್ನು ಖಾತರಿಪಡಿಸಿಕೊಳ್ಳುವುದು(ಆದಾಯ ಪ್ರಮಾಣ ಪತ್ರವನ್ನು ಉದ್ಯೋಗಕ್ಕಾಗಿ ಪಡೆದಿರುವುದನ್ನು ಸ್ವೀಕರಿಸುವುದಿಲ್ಲ). ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಶಿಕ್ಷಣಕ್ಕಾಗಿ ಪಡೆದಿರಬೇಕು.

9. ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಒಂದೇ ಪತ್ರದಲ್ಲಿ ನೀಡಿದ್ದಲ್ಲಿ, ಅರ್ಜಿಯಲ್ಲಿನ ಜಾತಿ ಅಥವಾ ಅದಾಯ ಕಲಂನ ಯಾವುದಾದರು ಒಂದರಲ್ಲಿ ಭರ್ತಿ ಮಾಡುವುದು.

10. ವಿದ್ಯಾರ್ಥಿಯ ಧರ್ಮ, ಜಾತಿ, ಪ್ರವರ್ಗ ಹಾಗೂ ಜಾತಿ&ಆದಾಯ ಪ್ರಮಾಣ ಪತ್ರ ಪಡೆದ ದಿನಾಂಕ ಹಾಗೂ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ, ಪೋಷಕರ ವೃತ್ತಿಯನ್ನು ಕಡ್ಡಾಯವಾಗಿ ನಮೂದಿಸಬೇಕು.

11. ವಿದ್ಯಾರ್ಥಿಯು ವಿಕಲಚೇತನ ಹಾಗೂ ಅಂಧ ವಿದ್ಯಾರ್ಥಿಗಳಾಗಿದ್ದಲ್ಲಿ, ಯೆಸ್ ಎಂದು ನಮೂದಿಸಬೇಕು.

12. ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಕಡ್ಡಾಯವಾಗಿ ಅವರ ಎಸ್‌ಎಸ್‌ಪಿ ಐಡಿ ಅನ್ನು ನಮೂದಿಸುವುದು.

13. ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಆಧಾರ್ ಸಂಖ್ಯೆ ಲಭ್ಯವಿಲ್ಲದಿದ್ದಲ್ಲಿ ಆಧಾರ್ ಕಾರ್ಡ್‍ಗಾಗಿ ಅರ್ಜಿಸಲ್ಲಿಸಿದ ನಂತರ ನೀಡುವ EID ಸಂಖ್ಯೆಯನ್ನು ನಮೂದಿಸುವುದು.

14. ವಿದ್ಯಾರ್ಥಿಯು ಪತ್ರ ವ್ಯವಹಾರಕ್ಕಾಗಿ ನೀಡುವ ವಿಳಾಸ ಹಾಗೂ ವಿದ್ಯಾರ್ಥಿಯ ಖಾಯಂ ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ವಿವರಗಳನ್ನು ನಮೂದಿಸಬೇಕು.

ಅರ್ಜಿ ಸಲ್ಲಿಸುವಾಗ ತಾಂತ್ರಿಕ ತೊಂದರೆಗಳಾದಲ್ಲಿ [email protected] ಗೆ ಇ-ಮೇಲ್ ಮುಖಾಂತರ ದಾಖಲೆಗಳೊಂದಿಗೆ ಸಂಪರ್ಕಿಸುವುದು ತಾಲ್ಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಹಾಗೂ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್ಸೈಟ್ backwardclasses.kar.nic.in ಗಮನಿಸಬಹುದು.

For Quick Alerts
ALLOW NOTIFICATIONS  
For Daily Alerts

English summary
Backward class welfare department invited applications for post metric hostels admission 2021-22.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X