ಕೃಷಿ ಇಲಾಖೆಯ ವಿವಿಧ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಜುಲೈ 29 , 30 ಮತ್ತು ಆಗಸ್ಟ್ 6 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿವೆ.

ಡೌನ್ಲೋಡ್ ಮಾಡಿಕೊಳ್ಳುವ ವಿಧಾನ
- ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ kea.kar.nic.in
- ಬಲಭಾಗದಲ್ಲಿ ಕಾಣುವ "Examination for recruitment of officers in department of agriculture" ಲಿಂಕ್ ಕ್ಲಿಕ್ ಮಾಡಿ
- ಡೌನ್ಲೋಡ್ ಹಾಲ್ ಟಿಕೇಟ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ಪ್ರವೇಶ ಪತ್ರ ಪಡೆಯಿರಿ
ವೇಳಾಪಟ್ಟಿ
| ವಿಷಯ | ದಿನಾಂಕ | ಸಮಯ | |
| ಸಹಾಯಕ ಕೃಷಿ ನಿರ್ದೇಶಕರು | 29-07-2017 | ಬೆ.10:00 ರಿಂದ ಮ.1:00 | ಮ.3:00 ರಿಂದ 4:30 |
| ಕೃಷಿ ಅಧಿಕಾರಿ | 30-07-2017 | ಬೆ.10:00 ರಿಂದ ಮ.1:00 | ಮ.3:00 ರಿಂದ 4:30 |
| ಸಹಾಯಕ ಕೃಷಿ ಅಧಿಕಾರಿ | 06-08-2017 | ಬೆ.10:00 ರಿಂದ ಮ.1:00 | ಮ.3:00 ರಿಂದ 4:30 |
ಪರೀಕ್ಷಾ ವಿವರ
ಪರೀಕ್ಷೆಯು ವಸ್ತು ನಿಷ್ಠ ಬಹು ಆಯ್ಕೆ ಮಾದರಿಯಲ್ಲಿದ್ದು, ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಅಭ್ಯರ್ಥಿಗಳು ಎರಡು ಪತ್ರಿಕೆಗಳಿಗೆ ಕಡ್ಡಾಯವಾಗಿ ಉತ್ತರಿಸತಕ್ಕದ್ದು.
ಮೊದಲ ಪತ್ರಿಕೆ 200 ಅಂಕಗಳನ್ನು ಒಳಗೊಂಡಿದ್ದರೆ, ಎರಡನೇ ಪತ್ರಿಕೆ 100 ಅಂಕಗಳನ್ನು ಒಳಗೊಂಡಿರುತ್ತದೆ. ಮೊದಲ ಪತ್ರಿಕೆಯು ನಿರ್ದಿಷ್ಟ ಪತ್ರಿಕೆಯಾಗಿದ್ದು ವಿಷಯಾಧರಿತ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಎರಡನೇ ಪತ್ರಿಕೆಯು ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಹೊಂದಿರುತ್ತದೆ.
ಅಭ್ಯರ್ಥಿಗಳು ಜುಲೈ 27 ರೊಳಗೆ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ.
ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ಅರ್ಹತೆಗೆ ಅನುಗುಣವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು.


Click it and Unblock the Notifications











