ಸಿಮ್ಯಾಟ್ 2018: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

Posted By:

ಎಐಸಿಟಿಇಯಿಂದ ಮಾನ್ಯತೆ ಪಡೆದ ಸ್ವಾಯತ್ತ ಕಾಲೇಜುಗಳಲ್ಲಿ ಎಂಬಿಎ ಮತ್ತು ಪಿಜಿಡಿಎಂ ಪದವಿ ಅಧ್ಯಯನಕ್ಕೆ ನಿಗದಿ ಮಾಡಲಾದ ಅರ್ಹತಾ ಪರೀಕ್ಷೆ ಸಿಮ್ಯಾಟ್ ಗೆ ಅರ್ಜಿ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡಲಾಗಿದೆ.

ಎನ್‌ಟಿಎ ಮೂಲಕ ವರ್ಷದಲ್ಲಿ ಎರಡು ಬಾರಿ ಜೆಇಇ ಮತ್ತು ನೀಟ್

ಈ ಹಿಂದಿನ ಅಧಿಸೂಚನೆಯಂತೆ 2018 ರ ಸಿಮ್ಯಾಟ್ ಪರೀಕ್ಷೆ ಅರ್ಜಿ ಸಲ್ಲಿಕೆ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನವಾಗಿತ್ತು. ನೂತನ ಅಧಿಸೂಚನೆಯಂತೆ ಡಿಸೆಂಬರ್ 25 ರವರೆಗೂ ಅರ್ಜಿ ಸಲ್ಲಿಸಬಹುದಾಗಿದೆ.

ಸಿಮ್ಯಾಟ್ 2018

ದೇಶದ 75 ಪರೀಕ್ಷಾ ಕೇಂದ್ರದಲ್ಲಿ ಏಕಕಾಲಕ್ಕೆ ನಡೆಯುವ ಆನ್ಲೈನ್ ಪರೀಕ್ಷೆ ಇದಾಗಿದ್ದು, 2013-14ನೇ ಸಾಲಿನಿಂದ ಇದನ್ನು ಸಂಘಟಿಸಲಾಗುತ್ತಿದೆ. ಇದು ರಾಷ್ಟ್ರಮಟ್ಟದ್ದು ಮತ್ತು ಎಲ್ಲಾ ಕಾಲೇಜುಗಳಿಗೆ ಒಂದೇ ಬಾರಿ ಪರೀಕ್ಷೆ ನಡೆಯುತ್ತದೆ.

ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳು ರಾಷ್ಟ್ರದ ಯಾವ ಭಾಗದಲ್ಲಿಯಾದರೂ ಅಧ್ಯಯನ ಮಾಡಲು ಅವಕಾಶವಿದೆ. ಇದಲ್ಲದೆ ರಾಜ್ಯವಾರು ಸೀಟು ಹಂಚಿಕೆ ನಡೆಯುತ್ತದೆ. ಹೀಗಾಗಿ ಯಾವುದೇ ರಾಜ್ಯದ ಅಭ್ಯರ್ಥಿ ತನ್ನ ರಾಜ್ಯದಲ್ಲಿ ಅಥವಾ ಅಥವಾ ರಾಷ್ಟ್ರದ ಬೇರೆ ಭಾಗದ್ಲ್ಲಲೂ ಪ್ರವೇಶ ಪಡೆಯಬಹುದು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-12-2017
ಪರೀಕ್ಷೆ ನಡೆಯುವ ದಿನಾಂಕ: 20-01-208

ಪರೀಕ್ಷೆಗೆ ಅರ್ಹತೆ

ಅಧಿಕೃತ ವಿವಿಯ ಯಾವುದೇ ವಿಭಾಗದಲ್ಲಿ ಪದವಿ ಪಡೆದವರು ಅಥವಾ ಅಂತಿಮ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹರು. ಇಲ್ಲಿ ಕನಿಷ್ಠ ಅಂಕಗಳ ಮಿತಿ ಇರುವುದಿಲ್ಲ. ಅಲ್ಲದೆ ಇದು ಸಂಪೂರ್ಣ ಆನ್‌ಲೈನ್ ಪರೀಕ್ಷೆ ಎಂಬುದು ವಿಶೇಷ.

ಪ್ರಶ್ನೆ ಪತ್ರಿಕೆ

ಪರೀಕ್ಷಾ ಸಮಯ 180 ನಿಮಿಷಗಳು (3 ಗಂಟೆ). ಪರೀಕ್ಷೆಯಲ್ಲಿ ಒಂದು ಪತ್ರಿಕೆ ಇದ್ದು, ಅದರಲ್ಲಿ ಕ್ವಾಂಟಿಟೇಟಿವ್ ಟೆಕ್ನಿಕ್ಸ್ ಅಂಡ್ ಡಾಟಾ ಇಂಟರ್‌ಪ್ರಿಟೇಷನ್, ಲಾಜಿಕಲ್ ರೀಸನಿಂಗ್, ಲ್ಯಾಂಗ್ವೇಜ್ ಕಾಂಪ್ರಹೆನ್ಷ್‌ನ್ ಮತ್ತು ಜನರಲ್ ಅವೇರನೆಸ್ ಎಂಬ ನಾಲ್ಕು ವಿಭಾಗಗಳು ಇವೆ. ಪ್ರತಿ ವಿಭಾಗದ್ಲ್ಲಲೂ 25 ಪ್ರಶ್ನೆಗಳು, ಪ್ರತಿ ಪ್ರಶ್ನೆಗೆ 4 ಅಂಕ. ಒಟ್ಟು 400 ಅಂಕಗಳ ಪ್ರಶ್ನೆ ಪತ್ರಿಕೆ ಉತ್ತರಿಸಬೇಕು.

ಮುಖ್ಯ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಆನ್‌ಲೈನ್‌ನಲ್ಲಿ ಪ್ರಾಯೋಗಿಕ ಮಾದರಿ ಪರೀಕ್ಷೆ ತೆಗೆದುಕೊಳ್ಳುವ ಅವಕಾಶವನ್ನು ಎಐಸಿಟಿಇ ಕಲ್ಪಿಸಿದೆ.

ಕರ್ನಾಟಕದ ಪರೀಕ್ಷಾ ಕೇಂದ್ರಗಳು

ಬೆಂಗಳೂರು, ಬೆಳಗಾವಿ, ದಾವಣಗೆರೆ, ಮಂಗಳೂರು, ಮೈಸೂರು, ಗುಲಬರ್ಗಾ, ಧಾರವಾಡ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
The last date to apply for the Common Management Admission Test (CMAT) 2018 has been extended to December 25. Earlier the deadline to apply was 15 December 2017.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia