ಏರ್ ಫೋರ್ಸ್ ನೇಮಕಾತಿ: ಎಎಫ್ ಸಿಎಟಿ 2018 ಅರ್ಜಿ ಆಹ್ವಾನ

Posted By:

ಎಎಫ್ ಸಿಎಟಿ 2018 (ಏರ್ ಫೋರ್ಸ್ ಕಾಮನ್ ಎಂಟ್ರನ್ಸ್ ಟೆಸ್ಟ್) ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ: ಪಿಜಿ ಕೋರ್ಸ್ ಪ್ರವೇಶಾತಿ ಪ್ರಾರಂಭ

ಭಾರತೀಯ ವಾಯುಪಡೆಯ ಮೂರು ಪ್ರಮುಖ ವಿಭಾಗಗಳಾದ ಫ್ಲೈಯಿಂಗ್ ಬ್ರಾಂಚ್, ಟೆಕ್ನಿಕಲ್ ಬ್ರಾಂಚ್ ಮತ್ತು ಗ್ರೌಂಡ್ ಡ್ಯೂಟಿ ಬ್ರಾಂಚ್ ಗೆ ನೇಮಕಾತಿ ಮಾಡಿಕೊಳ್ಳಲು ಈ ಪರೀಕ್ಷೆಯನ್ನು ಆಯೋಜಿಸಲಾಗುತ್ತದೆ.

ಕೆರಿಯರ್ ಟ್ರೆಂಡ್ಸ್ 2018: ಸ್ಪರ್ಧಾತ್ಮಕ ಪರೀಕ್ಷೆಗಳ ಪಟ್ಟಿ

ಏರ್ ಫೋರ್ಸ್ ನೇಮಕಾತಿ: ಎಎಫ್ ಸಿಎಟಿ 2018

ವಿದ್ಯಾರ್ಹತೆ

ಫ್ಲೈಯಿಂಗ್ ಬ್ರಾಂಚ್

ಪರೀಕ್ಷೆ ತೆಗೆದುಕೊಳ್ಳಲು ಬಯಸುವ ಅಭ್ಯರ್ಥಿಗಳು ಹನ್ನೆರಡನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾಗಿರಬೇಕು. ಫಿಸಿಕ್ಸ್ ಮತ್ತು ಮ್ಯಾಥೆಮ್ಯಾಟಿಕ್ಸ್ ವಿಭಾಗದಲ್ಲಿ ಶೇ.60 ಅಂಕಗಳನ್ನು ಪಡೆದಿರಬೇಕು.
ಅಥವಾ
ಬಿಇ/ಬಿ.ಟೆಕ್ ಪದವಿಯಲ್ಲಿ ಶೇ 60 ಅಂಕಗಳನ್ನು ಪಡೆದಿರಬೇಕು
ಅಥವಾ
ಅಸೋಸಿಯೇಟ್ ಮೆಂಬರ್ಶಿಪ್ ಆಫ್ ಇನ್ಸ್ಟಿಟ್ಯೂಟ್ ಇಂಜಿನೀರ್ಸ್ (ಇಂಡಿಯಾ)/ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ ದ ಎ ಮತ್ತು ಬಿ ಪರೀಕ್ಷೆಯಲ್ಲಿ ಶೇ.60 ಅಂಕಗಳನ್ನು ಪಡೆದಿರಬೇಕು .

ಎನ್ ಸಿ ಸಿ ಕೋಟ ಮೂಲಕ ಸೇರಬಯಸುವವರು ಎನ್ ಸಿ ಸಿ 'ಸಿ' ಸೆರ್ಟಿಫಿಕೇಟ್ ಹೊಂದಿರಬೇಕು.

ವಯೋಮಿತಿ: 20 ರಿಂದ 24 ವರ್ಷ

ಗ್ರೌಂಡ್ ಬ್ರಾಂಚ್ ಟೆಕ್ನಿಕಲ್

ಪರೀಕ್ಷೆ ತೆಗೆದುಕೊಳ್ಳಲು ಬಯಸುವ ಅಭ್ಯರ್ಥಿಗಳು ಹನ್ನೆರಡನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾಗಿರಬೇಕು. ಫಿಸಿಕ್ಸ್ ಮತ್ತು ಮ್ಯಾಥೆಮ್ಯಾಟಿಕ್ಸ್ ವಿಭಾಗದಲ್ಲಿ ಶೇ.60 ಅಂಕಗಳನ್ನು ಪಡೆದಿರಬೇಕು.
ಅಥವಾ
ಬಿಇ/ಬಿ.ಟೆಕ್ ಪದವಿಯಲ್ಲಿ ಶೇ 60 ಅಂಕಗಳನ್ನು ಪಡೆದಿರಬೇಕು
ಅಥವಾ
ಅಸೋಸಿಯೇಟ್ ಮೆಂಬರ್ಶಿಪ್ ಆಫ್ ಇನ್ಸ್ಟಿಟ್ಯೂಟ್ ಇಂಜಿನೀರ್ಸ್ (ಇಂಡಿಯಾ)/ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ ದ ಎ ಮತ್ತು ಬಿ ಪರೀಕ್ಷೆಯಲ್ಲಿ ಶೇ.60 ಅಂಕಗಳನ್ನು ಪಡೆದಿರಬೇಕು .

ವಯೋಮಿತಿ: 20 ರಿಂದ 26 ವರ್ಷ

ಗ್ರೌಂಡ್ ಬ್ರಾಂಚ್ ನಾನ್ ಟೆಕ್ನಿಕಲ್

ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದಾದರೂ ಪದವಿ ಪಡೆದಿರಬೇಕು.
ಅಥವಾ
ಅಸೋಸಿಯೇಟ್ ಮೆಂಬರ್ಶಿಪ್ ಆಫ್ ಇನ್ಸ್ಟಿಟ್ಯೂಟ್ ಇಂಜಿನೀರ್ಸ್ (ಇಂಡಿಯಾ)/ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ ದ ಎ ಮತ್ತು ಬಿ ಪರೀಕ್ಷೆಯಲ್ಲಿ ಶೇ.60 ಅಂಕಗಳನ್ನು ಪಡೆದಿರಬೇಕು .
ವಯೋಮಿತಿ: 20 ರಿಂದ 26 ವರ್ಷ

ಅಕೌಂಟ್ಸ್

ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಕಾಮ್ ಪದವಿ ಪಡೆದಿರಬೇಕು.

ಶಿಕ್ಷಣ

ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ/ಸ್ನಾತಕೋತ್ತರ ಪದವಿ ಗಳಿಸಿರಬೇಕು.
ವಯೋಮಿತಿ: 20 ರಿಂದ 26 ವರ್ಷ

ಮಿಟಿಯೊರೊಲೊಜಿ

ವಿಜ್ಞಾನ ವಿಷಯದಲ್ಲಿ ಅಭ್ಯರ್ಥಿಯು ಪದವಿ ಪಡೆದಿರಬೇಕು.

ವಯೋಮಿತಿ: 20 ರಿಂದ 26 ವರ್ಷ

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಶುಲ್ಕ: ರೂ.250/-

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-01-2018
  • ಪ್ರವೇಶಪತ್ರ ಪ್ರಕಟವಾಗುವ ದಿನಾಂಕ: 31-01-2018
  • ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ: 25-02-2018
  • ಫಲಿತಾಂಶ ಪ್ರಕಟಣೆ: ಏಪ್ರಿಲ್ 2018

ಪರೀಕ್ಷೆ ವಿಧಾನ

ಕಂಪ್ಯೂಟರ್ ಬೇಸ್ಡ್ ಪರೀಕ್ಷೆಯಾಗಿದ್ದು, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆಬ್ಜೆಕ್ಟಿವ್ ಮಾದರಿ ಪರೀಕ್ಷೆಯಾಗಿದ್ದು, ನೂರು ಅಂಕಗಳಿಗೆ ಇರುತ್ತದೆ.

ಈ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ಆಹ್ವಾನಿಸಲಾಗುತ್ತದೆ.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

English summary
AFCAT 2018 registrations are open now. AFCAT (Air Force Common Admission Test) is a recruitment examination organized by the Indian Air Force (IAF).

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia