Board Exams In April 2022 : ಯಾವೆಲ್ಲಾ ರಾಜ್ಯಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಬೋರ್ಡ್ ಪರೀಕ್ಷೆಗಳು ಆರಂಭ ?

2022ರ ಶೈಕ್ಷಣಿಕ ಅವಧಿಯ ವರ್ಷಾಂತ್ಯದ ಬೋರ್ಡ್ ಪರೀಕ್ಷೆಗಳು ಕೆಲವು ರಾಜ್ಯಗಳಲ್ಲಿ ಈಗಾಗಲೇ ಪ್ರಾರಂಭವಾಗಿದೆ. ಇನ್ನು ಕೆಲವು ರಾಜ್ಯಗಳಲ್ಲಿ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಏಪ್ರಿಲ್ ತಿಂಗಳಲ್ಲಿ ನಡೆಯಲಿವೆ.

ಯಾವೆಲ್ಲಾ ರಾಜ್ಯಗಳಲ್ಲಿ ಏಪ್ರಿಲ್ ನಲ್ಲಿ ಬೋರ್ಡ್ ಪರೀಕ್ಷೆಗಳು ನಡೆಯಲಿವೆ ಗೊತ್ತಾ ?

ಬೋರ್ಡ್ ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯದ ತಿರುವನ್ನು ನಿರ್ಧರಿಸುವಂತಹದ್ದಾಗಿರುತ್ತದೆ. ಅದೊಂದು ಮಹತ್ತರ ಘಟ್ಟ ಹಾಗಾಗಿ ವಿದ್ಯಾರ್ಥಿಗಳು ಹೆಚ್ಚು ಕಾಳಜಿಯುತವಾಗಿ ಪರೀಕ್ಷೆಗಳನ್ನು ಎದುರಿಸಬೇಕಿರುತ್ತದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಬೋರ್ಡ್ ಪರೀಕ್ಷೆಗಳು ಆರಂಭವಾಗಿವೆ. ಇನ್ನು ಕೆಲವೆಡೆ ಈ ಏಪ್ರಿಲ್ ತಿಂಗಳಿನಲ್ಲಿ 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳು ಆರಂಭವಾಗಲಿವೆ. ಈ ಭಾರಿ ಎಲ್ಲೆಡೆ ಆಫ್‌ಲೈನ್ ನಲ್ಲಿಯೇ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಯಾವೆಲ್ಲಾ ರಾಜ್ಯಗಳಲ್ಲಿ ಏಪ್ರಿಲ್ ನಲ್ಲಿ ಬೋರ್ಡ್ ಪರೀಕ್ಷೆಗಳು ನಡೆಯಲಿವೆ ಗೊತ್ತಾ ?

ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ಇನ್ನೂ ಅನೇಕ ರಾಜ್ಯಗಳು ಮಾರ್ಚ್‌ನಲ್ಲಿ ಬೋರ್ಡ್ ಪರೀಕ್ಷೆಗಳನ್ನು ಪ್ರಾರಂಭಿಸಿವೆ. ಆದಾಗ್ಯೂ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳು ಬೋರ್ಡ್ ಪರೀಕ್ಷೆಗಳನ್ನು ಏಪ್ರಿಲ್‌ನಲ್ಲಿ ನಡೆಸುತ್ತಿವೆ. ಏಪ್ರಿಲ್ ತಿಂಗಳಿನಲ್ಲಿ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ನಡೆಸುತ್ತಿರುವ ರಾಜ್ಯವಾರು ಪಟ್ಟಿಗಳನ್ನು ಇಲ್ಲಿ ನೀಡಲಾಗಿದೆ.

ಏಪ್ರಿಲ್ 2022 ರಲ್ಲಿ ಪ್ರಾರಂಭವಾಗಲಿರುವ ರಾಜ್ಯವಾರು ಬೋರ್ಡ್ ಪರೀಕ್ಷೆಗಳ ಪಟ್ಟಿ :

ಪಶ್ಚಿಮ ಬಂಗಾಳ :

ಪಶ್ಚಿಮ ಬಂಗಾಳ :

ಪಶ್ಚಿಮ ಬಂಗಾಳದ ಹೈಯರ್ ಸೆಕೆಂಡರಿ (HS) ಅಥವಾ 12ನೇ ತರಗತಿ ಪರೀಕ್ಷೆಯು ಏಪ್ರಿಲ್ 2 ರಿಂದ ಪ್ರಾರಂಭವಾಗಿದ್ದು, ಪರೀಕ್ಷೆಯು ಏಪ್ರಿಲ್ 27, 2022 ರಂದು ಮುಕ್ತಾಯಗೊಳ್ಳುತ್ತದೆ. ಮೊದಲ ದಿನ ಪ್ರಥಮ ಭಾಷೆಯ (ಬಂಗಾಳಿ (A), ಇಂಗ್ಲಿಷ್ (A) ಹಿಂದಿ (ಎ), ನೇಪಾಳಿ (ಎ), ಉರ್ದು, ಸಂತಾಲಿ, ಒಡಿಯಾ, ತೆಲುಗು, ಗುಜರಾತಿ, ಪಂಜಾಬಿ) ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಈ ವರ್ಷ ಎಲ್ಲಾ ವಿದ್ಯಾರ್ಥಿಗಳು ತಮ್ಮ ಶಾಲೆಗಳಿಂದ ಪರೀಕ್ಷೆಯನ್ನು ಬರೆಯುತ್ತಾರೆಯೇ ಹೊರತು ಪಶ್ಚಿಮ ಬಂಗಾಳ ಕೌನ್ಸಿಲ್ ಆಫ್ ಹೈಯರ್ ಸೆಕೆಂಡರಿ ಎಜುಕೇಶನ್ (WBCHSE) ಯೊಂದಿಗೆ ಸಂಯೋಜಿತವಾಗಿರುವ ಇತರ ಶಾಲೆಗಳಿಂದ ಬರೆಯಲು ಅನುಮತಿಯಿರುವುದಿಲ್ಲ.

ಆಂಧ್ರಪ್ರದೇಶ :

ಆಂಧ್ರಪ್ರದೇಶ :

ಆಂಧ್ರಪ್ರದೇಶದ ಮಾಧ್ಯಮಿಕ ಶಾಲಾ ಪ್ರಮಾಣಪತ್ರ ಪರೀಕ್ಷೆಯು ಏಪ್ರಿಲ್ 27 ರಿಂದ ಪ್ರಥಮ ಭಾಷೆಯ ಪತ್ರಿಕೆಯೊಂದಿಗೆ ಪ್ರಾರಂಭವಾಗಲಿದೆ ಮತ್ತು ಮೇ 9 ರಂದು OSSC ಮುಖ್ಯ ಭಾಷಾ ಪತ್ರಿಕೆ -2 (ಸಂಸ್ಕೃತ, ಅರೇಬಿಕ್ ಮತ್ತು ಪರ್ಷಿಯನ್) ಯೊಂದಿಗೆ ಕೊನೆಗೊಳ್ಳುತ್ತದೆ. AP SSC ಟೈಮ್ ಟೇಬಲ್ 2022 ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ವಿದ್ಯಾರ್ಥಿಯು ಆಂಧ್ರಪ್ರದೇಶದ ಪ್ರೌಢ ಶಿಕ್ಷಣ ಮಂಡಳಿಯ ಅಧಿಕೃತ ವೆಬ್‌ಸೈಟ್ - bse.ap.gov.in ಗೆ ಭೇಟಿ ನೀಡಬೇಕು.

ಕರ್ನಾಟಕ :
 

ಕರ್ನಾಟಕ :

ಕರ್ನಾಟಕ 12 ನೇ ತರಗತಿ ಅಥವಾ ಪದವಿ ಪೂರ್ವ (2 ನೇ ಪಿಯುಸಿ) ಅಂತಿಮ ಪರೀಕ್ಷೆಗಳು ಏಪ್ರಿಲ್ 22, 2022 ರಿಂದ ಪ್ರಾರಂಭವಾಗುತ್ತವೆ ಮತ್ತು ಮೇ 18, 2022 ರಂದು ಕೊನೆಗೊಳ್ಳುತ್ತವೆ. ಎಲ್ಲಾ ಪರೀಕ್ಷೆಗಳು ಬೆಳಿಗ್ಗೆ 10:15 ಕ್ಕೆ ಪ್ರಾರಂಭವಾಗುತ್ತವೆ ಮತ್ತು ಮಧ್ಯಾಹ್ನ 1:30 ಕ್ಕೆ ಕೊನೆಗೊಳ್ಳುತ್ತವೆ . ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ pue.kar.nic.in. ನಲ್ಲಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಲಭ್ಯವಿದೆ.

For Quick Alerts
ALLOW NOTIFICATIONS  
For Daily Alerts

English summary
Board exams 2022 : Here we are giving state wise list of class 10 and 12 exams scheduled in April month.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X