ಎ.ಪಿ.ಎಸ್. ಶಿಕ್ಷಣ ಸಂಸ್ಥೆಯಲ್ಲಿ ಸಿ.ಎ ತರಬೇತಿ ಕೇಂದ್ರ

Posted By:

ಬೆಂಗಳೂರಿನ ಪ್ರತಿಷ್ಠಿತ ಎ.ಪಿ.ಎಸ್. ಸಮೂಹ ಸಂಸ್ಥೆಯಲ್ಲಿ ಸಿ.ಎ. ಅಧ್ಯಯನದ 3 ಹಂತಗಳಾದ ಸಿ,ಪಿ,ಟಿ., ಐ.ಪಿ.ಸಿ ಮತ್ತು ಸಿ.ಎ. ತರಬೇತಿ ತರಗತಿಗಳನ್ನು ಆರಂಭಿಸಲಾಗಿದೆ. 

ದಿನಾಂಕ 28-03-2017 ರಂದು ಎ.ಪಿ.ಎಸ್. ಸಿ.ಎ. ತರಬೇತಿ ಕೇಂದ್ರವನ್ನು ಐ.ಸಿ.ಎ.ಐ.ನ ಮಾಜಿ ಅಧ್ಯಕ್ಷರಾದ ಶ್ರೀ ಕೆ. ರಘು ರವರು ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ಮಾಹಿತಿ ತಂತ್ರಜ್ಞಾನ ಸಚಿವರಾದ ಸನ್ಮಾನ್ಯ ಶ್ರೀ ಎಂ.ಆರ್.ಸೀತಾರಾಂರವರು ಭಾಗವಹಿಸಿದ್ದರು. ಐ.ಸಿ.ಎ.ಐ.ನ ದಕ್ಷಿಣ ಭಾರತದ ಪ್ರಾಂತೀಯ ಕೌನ್ಸಿಲ್ ನ ಛೇರ್ಮನ್ ಆಗಿರುವ ಶ್ರೀ. ಸಿ.ಎ. ಕೋತಾ ಆರ್. ಶ್ರೀನಿವಾಸ ರವರು ಹಾಗೂ ಶ್ರೀಮತಿ ಗೀತಾ, ಐ.ಸಿ.ಎ.ಐ.ನ ಬೆಂಗಳೂರು ವಿಭಾಗದ ಅಧ್ಯಕ್ಷರು ಗೌರವ ಅತಿಥಿಗಳಾಗಿ ಅಗಮಿಸಿದ್ದರು.

ಸಿ.ಎ ತರಬೇತಿ ಕೇಂದ್ರ ಆರಂಭ

ನವದೆಹಲಿಯ "ಭಾರತೀಯ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆ"ಯಿಂದ ಮಾನ್ಯತೆ ಪಡೆದ ಕೆಲವೇ ಕೆಲವು ಶ್ರೇಷ್ಠ ವಿದ್ಯಾಸಂಸ್ಠೆಗಳಲ್ಲಿ ಎ.ಪಿ.ಎಸ್ ಸಂಸ್ಥೆಯು ಒಂದಾಗಿದ್ದು, ಸಿ.ಎ. ಅಧ್ಯಯನದ 3 ಹಂತಗಳಾದ ಸಿ,ಪಿ,ಟಿ., ಐ.ಪಿ.ಸಿ ಮತ್ತು ಸಿ.ಎ. ಇವುಗಳ ತರಬೇತಿ ತರಗತಿಗಳನ್ನು ಆರಂಬಿಸಲು ನವದೆಹಲಿಯ ಐ.ಸಿ.ಎ.ಐ.ನಿಂದ ಅನುಮತಿ ಪಡೆತಿದೆ.

ಎ.ಪಿ.ಎಸ್. ಆಡಳಿತ ಮಂಡಲಿಯಲ್ಲಿ ಮೂವರು ಖ್ಯಾತ ಚಾರ್ಟೆಡ್ ಅಕೌಂಟೆಂಟ್ಸ್ ಇದ್ದು ಅವರ ಮಾರ್ಗದರ್ಶನದಲ್ಲಿ ಸಿ.ಎ. ತರಬೇತಿ ಕೇಂದ್ರವು 20,000 ಚದರ ವಿಸ್ತೀರ್ಣದ ಪ್ರತ್ಯೇಕ ಹಾಗೂ ಸುಸಜ್ಜಿತ ಆಧುನಿಕ ಕಟ್ಟಡದಲ್ಲಿ ಆರಂಭಗೊಂಡಿದೆ.

ಚಾರ್ಟೆಡ್ ಅಕೌಂಟೆಂಟ್ಸ್ (ಸಿ.ಎ)

ಪ್ರಸ್ತುತ ಭಾರತದಾದ್ಯಂತ 2.5 ಲಕ್ಷ ಚಾರ್ಟೆಡ್ ಅಕೌಂಟೆಂಟ್ಸ್ ಹಾಗೂ 8.5 ಲಕ್ಷ ಸಿ.ಎ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿದ್ದಾರೆ. ಸದ್ಯ ಭಾರತದ ಆರ್ಥಿಕ ಪರಿಸ್ಥಿತಿ ಸುದಾರಿಸುತ್ತಿದ್ದು, ಮೇಲ್ಮುಖವಾಗಿ ಬೆಳವಣಿಗೆ ಹೊಂದುತ್ತಿರುವ ಈ ಸಂದರ್ಭದಲ್ಲಿ ಚಾರ್ಟೆಡ್ ಅಕೌಂಟೆಂಟ್ಸ್ ಗಳ ಬೇಡಿಕೆ ಹೆಚ್ಚುತ್ತಿದೆ. ಹಾಗೂ ಸಿ.ಎ. ವ್ಯಾಸಂಗಕ್ಕೆ ಉಜ್ವಲ ಭವಿಷ್ಯವೂ ಇದೆ.

ಪ್ರಪಂಚದಲ್ಲಿ ಭಾರತೀಯ ಚಾರ್ಟೆಡ್ ಅಕೌಂಟೆಂಟ್ಸ್ ಗಳಿಗೆ ಭಾರೀ ಬೇಡಿಕೆ ಇದೆ. ಬೆಂಗಳೂರಿನಲ್ಲಿ 40,000 ವಿದ್ಯಾರ್ಥಿಗಳು ಸಿ.ಎ.ವ್ಯಾಸಂಗ ಮಾಡುತ್ತಿದ್ದು, ದಿನೇ ದಿನೇ ಸಿ.ಎ. ಮಾಡಬೇಕೆಂಬ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚುತ್ತಿದೆ.

ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಕೋರ್ಸ್ ಗಳು ದೀರ್ಘಾವದಿ ಹಾಗೂ ಹೆಚ್ಚು ಶುಲ್ಕಭರಿತವಾಗಿದ್ದು ಮುಂದೆ ಲಭ್ಯವಾಗಲಿರುವ ಉದ್ಯೋಗಾವಕಾಶಗಳ ಸಾಧ್ಯತೆಗಳು ಕಡಿಮೆಯಾಗುತ್ತಿದೆ. ಸಿ.ಎ.ಕೋರ್ಸ್, ಹೆಚ್ಚು ಖರ್ಚು ವೆಚ್ಚ ತಗಲುವ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದಂತೆ ಆಗಿರದೆ, ಇದು ಆರ್ಥಿಕವಾಗಿ ಸ್ವಾವಲಂಬಿಯಾಗಲು ಸಹಕಾರಿಯಾಗಿದೆ.

ಕಡಿಮೆ ಶುಲ್ಕ

ಸಿ.ಎ. ಕೋರ್ಸ್ ನ್ ದಾಖಲಾತಿ ಶುಲ್ಕ, ಪರೀಕ್ಷಾ ಶುಲ್ಕ, ಬೋಧನಾ ಶುಲ್ಕ, ಎಲ್ಲವೂ ಸೇರಿ ಹೆಚ್ಚೆಂದರೆ 1.00 ಲಕ್ಷ ಶುಲ್ಕ ಭರಿಸಬೇಕಾಗುತ್ತದೆ. ಜೊತೆಗೆ ಸಿ.ಎ. ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ 3 ವರ್ಷಗಳ ಅವಧಿಯಲ್ಲಿ 1.00 ಲಕ್ಷದವರೆಗೂ ಸ್ಟೈಫಂಡ್ ಸೌಲಬ್ಯವಿರುವುದರಿಂದ ಇದು ಪೋಷಕರಿಗೆ ಹೊರೆಯಾಗದು. ಹಾಗೂ ಬಡ ವಿದ್ಯಾರ್ಥಿಗಳು ಸಹ ಈ ಕೋರ್ಸನ್ನು ಮಾಡಿ ಉತ್ಕೃಷ್ಟ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ.

ಸಿ.ಎ ಕೋರ್ಸ್ ಪ್ರವೇಶ

ಬಿ.ಎ., ಬಿ.ಎಸ್ಸಿ ಪದವಿಯಲ್ಲಿ 60% ಹಾಗೂ ಬಿ.ಕಾಂ ಪದವಿಯಲ್ಲಿ 55% ಆಂಕಗಳಿಸಿರುವರು ಸಿ.ಪಿ.ಟಿ. ಪರೀಕ್ಷೆಯಿಂದ ರಿಯಾಯಿತಿ ಪಡೆದು ನೇರವಾಗಿ ಐ.ಪಿ.ಸಿ. ಪರೀಕ್ಷೆಗೆ ಪ್ರವೇಶ ಪಡೆಯಬಹುದಾಗಿದೆ. ಪದವಿಯಲ್ಲಿ 55% ಗಿಂತ ಕಡಿಮೆ ಅಂಕಗಳಿಸಿರುವರು ಸಿ.ಪಿ.ಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ಸಿ.ಎ. ಕೋರ್ಸನ್ನು ಮುಂದುವರಿಸಲು ಸಾಧ್ಯ.

ಚಾರ್ಟಡ್ ಅಕೌಂಟೆಂಟ್ ಆಗಿರುವವರು ಆರಂಭಿಕವಾಗಿ ಪಡೆಯುವ ಮಾಸಿಕ ಆದಾಯವು ಸರಾಸರಿ ರೂ.50,000 ದಿಂದ ರೂ.1.00 ಲಕ್ಷದವರೆಗೂ ಮೀರುತ್ತದೆ, ಹಾಗೂ ಶೀಘ್ರ ಪದೋನ್ನತಿಗೆ ವಿಪುಲ ಅವಕಾಶಗಳು ಇರುತ್ತವೆ.

ಸಿ.ಎ. ದಾಖಲೀಕರಣ ಹಾಗೂ ತರಬೇತಿ ಕೇಂದ್ರವು ನರಸಿಂಹ ರಾಜಾ ಕಾಲೋನಿಯಲ್ಲಿರುವ ಎ.ಪಿ.ಎಸ್. ವಾಣಿಜ್ಯ ದಾಖಲಾತಿ ಪ್ರಕ್ರಿಯೆಯು ಎ.ಪಿ.ಎಸ್. ವಾಣಿಜ್ಯ ಕಾಲೇಜಿನಲ್ಲಿಯೇ ನಡೆಯುತ್ತಿದೆ. ನುರಿತ ಹಾಗೂ ಅನುಭವಿ ಉಪನ್ಯಾಸಕರಿಂದ ಸಿ.ಎ. ಕೋರ್ಸನ 3 ಹಂತಗಳ ಬೋಧನೆ ಹಾಗೂ ತರಬೇತಿ ನೀಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಯು ಐ.ಸಿ.ಎ.ಐ.ನ ಬೆಂಗಳೂರು ಶಾಖೆಯ ಸಲಹೆ ಹಾಗೂ ಸೂಚನಾನುಸಾರ ನಡೆಯುತ್ತದೆ.

ಎ.ಪಿ.ಎಸ್ ಶಿಕ್ಷಣ ಸಂಸ್ಥೆ

ಪೂಜ್ಯ ಪ್ರೊ|| ಶ್ರೀ ಅನಂತಾಚಾರ್ ಈ ಸಂಸ್ಥೆಯ ಸ್ಥಾಪಕರಾಗಿದ್ದು ಆರ್ಥಿಕವಾಗಿ ಹಿಂದುಳಿದ ಹಾಗೂ ಸಾಮಾನ್ಯ ಮಟ್ಟದ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸೂಕ್ತ ಶಿಕ್ಷಣವನ್ನು ನೀಡಿ ಅವರೂ ಸಹ ಉನ್ನತ ಶ್ರೇಣಿಯಲ್ಲಿ ಅಂಕಗಳಿಸಿ ಮುಖ್ಯವಾಹಿನಿಗೆ ಬರುವಂತಾಗಲಿ ಎಂಬುದು ಅವರ ಪ್ರಮುಖ ಉದ್ದೇಶವಾಗಿತ್ತು. ಈಗಾಗಲೇ ನರ್ಸರಿಯಿಂದ ಪ್ರಾರಂಭವಾಗಿ ಪದವಿ ಹಾಗೂ ಉನ್ನತ ಶಿಕ್ಷಣವಾದ ಎಂ.ಕಾಂ, ಎಂ.ಎ., ಬಿ.ಇ., ಎಂ.ಇ., ಮೊದಲಾದ ವಿಭಾಗಗಳು ಯಶಸ್ವಿಯಾಗಿ ಎ.ಪಿ.ಎಸ್. ಸಮೂಹ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.

English summary
THE INSTITUTE OF CHARTERED ACCOUNTANTS OF INDIA NEW DELHI ACCRIDATED CA COACHING CENTER BEING INAGURATED AT APS.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia