ಸಿಎಟಿ 2017: 2.31 ಲಕ್ಷ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆ

ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಗಳ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌-ಐಐಎಂ) ಪ್ರವೇಶಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಕಾಮನ್‌ ಅಡ್ಮಿಷನ್‌ ಟೆಸ್ಟ್‌-ಕ್ಯಾಟ್‌)ಯನ್ನು ಈ ಬಾರಿ ಲಕ್ನೋವಿನ ಐಐಎಂ ಆಯೋಜಿಸಿದೆ.

ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಗಳ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌-ಐಐಎಂ) ಪ್ರವೇಶಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಕಾಮನ್‌ ಅಡ್ಮಿಷನ್‌ ಟೆಸ್ಟ್‌-ಕ್ಯಾಟ್‌)ಯನ್ನು ಈ ಬಾರಿ ಲಕ್ನೋವಿನ ಐಐಎಂ ಆಯೋಜಿಸಿದ್ದು, ನವೆಂಬರ್ ನಲ್ಲಿ ಪರೀಕ್ಷೆ ನಡೆಯಲಿದೆ.

ನವೆಂಬರ್ 26 ರಂದು ದೇಶಾದ್ಯಂತ 140 ಪರೀಕ್ಷಾ ಕೇಂದ್ರಗಳಲ್ಲಿ ಕ್ಯಾಟ್ ಪರೀಕ್ಷೆಗಳು ನಡೆಯಲಿದ್ದು, ಈ ಬಾರಿ 20000 ಸೀಟುಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಸಿಎಟಿ 2017

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿದಿದ್ದು ಅರ್ಜಿಗಳನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್ 27 ರಿಂದ ಸೆಪ್ಟೆಂಬರ್ 30 ರವರೆಗೂ ತಿದ್ದುಪಡಿಗೆ ಅವಕಾಶವಿದ್ದು, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ನಮೂದಿಸಿ ಅರ್ಜಿಗಳಲ್ಲಿ ಬದಲಾವಣೆ ಮಾಡಬಹುದು.

ಕೆಪಿಎಸ್ಸಿ: ಮುಖ್ಯ ಪರೀಕ್ಷೆ ಅರ್ಜಿ ಸಲ್ಲಿಕೆ ಪ್ರಾರಂಭಕೆಪಿಎಸ್ಸಿ: ಮುಖ್ಯ ಪರೀಕ್ಷೆ ಅರ್ಜಿ ಸಲ್ಲಿಕೆ ಪ್ರಾರಂಭ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅರ್ಜಿ ಸಲ್ಲಿಸದವರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ. ಕಳೆದ ವರ್ಷ 2,32,434 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರೆ ಈ ಬಾರಿ 2.31 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಒಟ್ಟು ಎರಡು ವಿಭಾಗಗಳಲ್ಲಿ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಲಾಗಿರುತ್ತದೆ. ಮೊದಲ ವಿಭಾಗದಲ್ಲಿ ಗುಣಾತ್ಮಕ ಸಾಮರ್ಥ್ಯ ಮತ್ತು ಮಾಹಿತಿ ವಿಶ್ಲೇಷಣೆ, ಇನ್ನೊಂದರಲ್ಲಿ ಮೌಖಿಕ ಸಾಮರ್ಥ್ಯ ಮತ್ತು ವಿಶ್ಲೇಷಣಾ ಸಾಮರ್ಥ್ಯದ ಪರೀಕ್ಷೆ ನಡೆಯುತ್ತದೆ.

ಆಯ್ಕೆ ವಿಧಾನ

ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ, ಗುಂಪು ಚರ್ಚೆ ಮತ್ತು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಅಲ್ಲಿ ಆಯ್ಕೆಯಾಗುವ ಅಭ್ಯರ್ಥಿಯು ದೇಶದ ಐಐಎಂ ಗಳಲ್ಲಿ ಸೀಟು ಪಡೆಯಬಹುದಾಗಿದೆ.

ಪ್ರಮುಖ ದಿನಾಂಕಗಳು

ಪ್ರವೇಶ ಪತ್ರ ಲಭ್ಯವಾಗುವ ದಿನಾಂಕ: ಅಕ್ಟೋಬರ್ 18, 2017
ಪರೀಕ್ಷೆ ನಡೆಯುವ ದಿನಾಂಕ: ನವೆಂಬರ್ 26, 2017

ಸಿಎಟಿ ಪರೀಕ್ಷೆ

ಸಿಎಟಿ ಅಥವಾ ಸಾಮಾನ್ಯ ಪ್ರವೇಶ ಪರೀಕ್ಷೆಯು ದೇಶದಲ್ಲಿ ನಡೆಯುವ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದೆನಿಸಿದೆ. ಪ್ರತಿಷ್ಠಿತ ಐಐಎಂಗಳು ಮತ್ತು ಎಫ್‌ಎಂಎಸ್, ಎಂಡಿಐ, ಎಸ್‌ಪಿ ಜೈನ್, ಐಐಟಿಗಳು ಸೇರಿದಂತೆ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾವಹಾರಿಕ (ಬಿಸಿನೆಸ್) ಪದವಿಗೆ ಪ್ರವೇಶ ಪಡೆಯಲು ಸಿಎಟಿ ಅರ್ಹತೆ ಕಡ್ಡಾಯ.

ಎಂಬಿಎ ಕಲಿಕೆಗೆ ಇದು ಪ್ರವೇಶ ಪರೀಕ್ಷೆ ಆಗಿರುವುದರಿಂದ ಗುಣಾತ್ಮಕ ಸಾಮರ್ಥ್ಯ, ವಿಶ್ಲೇಷಣೆ ಮತ್ತು ತಾರ್ಕಿಕ ಮನೋಭಾವ, ಮಾಹಿತಿ ವಿಶ್ಲೇಷಣೆ ಮತ್ತು ಮೌಖಿಕ ಸಂವಹನ ಕ್ಷೇತ್ರದಲ್ಲಿ ಅಭ್ಯರ್ಥಿ ದಕ್ಷನಾಗಿರಬೇಕಾಗುತ್ತದೆ. ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಕ್ಯಾಟ್ ಪರೀಕ್ಷೆ ಸಹಕಾರಿಯಾಗಲಿದೆ.

For Quick Alerts
ALLOW NOTIFICATIONS  
For Daily Alerts

English summary
The Common Admission Test (CAT) 2017 online registrations have been closed for admission to various management programmes in top IIMs across the nation. This year, approximately 2.31 lakh candidates have successfully registered.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X