CAT Exam 2021 Guidelines : ಕ್ಯಾಟ್ ಪರೀಕ್ಷಾ ದಿನದ ಮಾರ್ಗಸೂಚಿ ಪ್ರಕಟ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಅಹಮದಾಬಾದ್ ಸಾಮಾನ್ಯ ಪ್ರವೇಶ ಪರೀಕ್ಷೆ (CAT) 2021 ಅನ್ನು ನವೆಂಬರ್ 28ರ ಭಾನುವಾರದಂದು ನಡೆಸುತ್ತಿದೆ. ಸ್ನಾತಕೋತ್ತರ ನಿರ್ವಹಣೆ ಪ್ರವೇಶ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕ್ಯಾಟ್ ಪರೀಕ್ಷೆ : ಪರೀಕ್ಷಾ  ದಿನದ ಮಾರ್ಗಸೂಚಿ ಪ್ರಕಟ

CAT 2021 ಪರೀಕ್ಷೆಯನ್ನು ಮೂರು ಅವಧಿಗಳಲ್ಲಿ ನಡೆಸಲಾಗುವುದು. ಪರೀಕ್ಷಾ ದಿನದಂದು ಅಭ್ಯರ್ಥಿಗಳು ಕನಿಷ್ಟ 30 ನಿಮಿಷಗಳ ಮೊದಲು ಪರೀಕ್ಷಾ ಕೇಂದ್ರದಲ್ಲಿ ವರದಿ ಮಾಡಿಕೊಳ್ಳಬೇಕಾಗಿರುತ್ತದೆ. ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದಲ್ಲಿರುವ ಪರೀಕ್ಷಾ ಸಮಯ ಮತ್ತು ಇತರೆ ಮಾಹಿತಿಗಳನ್ನು ಪರೀಕ್ಷಾ ಕೇಂದ್ರದಲ್ಲಿ ವರದಿ ಮಾಡುವ/ಪ್ರವೇಶದ ಸಮಯದಲ್ಲಿ ಉಲ್ಲೇಖಿಸಬೇಕಿರುತ್ತದೆ.

ಕ್ಯಾಟ್ ಪರೀಕ್ಷೆಯ ಮುಂಜಾನೆ ಅಧಿವೇಶನವು 8:30 ರಿಂದ 10:30 ರವರೆಗೆ ನಡೆಯಲಿದ್ದು, ಪ್ರವೇಶಕ್ಕೆ 8:15ರ ವರೆಗೆ ಅವಕಾಶ ನೀಡಲಾಗಿರುತ್ತದೆ. ಮಧ್ಯಾಹ್ನದ ಅಧಿವೇಶನವು 12:30 ರಿಂದ ಪ್ರಾರಂಭವಾಗಿ 2:30ರ ವರೆಗೆ ನಡೆಯಲಿದ್ದು, ಪ್ರವೇಶಕ್ಕೆ 12:15ರ ವರೆಗೆ ಅವಕಾಶ ನೀಡಲಾಗಿರುತ್ತದೆ. ಕೊನೆಯ ಅಧಿವೇಶನವು ಸಂಜೆ 4:30 ರಿಂದ 6:30 ರವರೆಗೆ ನಡೆಯಲಿದ್ದು, ಸಂಜೆ 4:15 ರ ನಂತರ ಬರುವ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುವುದಿಲ್ಲ.

CAT 2021: ಪರೀಕ್ಷೆಗೆ ಹಾಜರಾಗುವವರಿಗೆ ಮಾರ್ಗಸೂಚಿಗಳು :

* A4 ಗಾತ್ರದ ಕಾಗದದ ಮೇಲೆ ಪ್ರವೇಶ ಪತ್ರವನ್ನು ಮುದ್ರಿಸಿ. ಅಭ್ಯರ್ಥಿಯ ಭಾವಚಿತ್ರ ಮತ್ತು ಸಹಿಯನ್ನು ಸ್ಪಷ್ಟವಾಗಿ ಮುದ್ರಿಸಿದ್ದರೆ ಮಾತ್ರ ಪ್ರವೇಶ ಪತ್ರಗಳು ಮಾನ್ಯವಾಗಿರುತ್ತವೆ. CAT ಪರೀಕ್ಷಾ ಕೇಂದ್ರದಲ್ಲಿ ಪರಿಶೀಲನೆಗಾಗಿ ಹಸ್ತಾಂತರಿಸುವ ಮೊದಲು ಪ್ರವೇಶ ಕಾರ್ಡ್‌ನಲ್ಲಿ ಒದಗಿಸಲಾದ ಜಾಗದಲ್ಲಿ ಭಾವಚಿತ್ರವನ್ನು ಅಂಟಿಸಿ.

* CAT ಅನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೋಡ್‌ನಲ್ಲಿ ನಡೆಸಲಾಗುವುದು. ಅಭ್ಯರ್ಥಿಗಳಿಗೆ ಪ್ರತಿ ವಿಭಾಗಕ್ಕೆ 40 ನಿಮಿಷಗಳ ಕಾಲವಕಾಶ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 53 ನಿಮಿಷ ಮತ್ತು 20 ಸೆಕೆಂಡುಗಳು ಸಮಯವನ್ನು ನಿಗದಿಪಡಿಸಲಾಗಿದೆ. ಹೇಳಲಾದ ಸಮಯವನ್ನು ಪೂರ್ಣಗೊಳಿಸಿದ ನಂತರ ಟೈಮರ್ ಶೂನ್ಯವನ್ನು ತಲುಪುತ್ತದೆ. ತದನಂತರ ಪರೀಕ್ಷೆಯು ಸ್ವಯಂ ಸಲ್ಲಿಸಲ್ಪಡುತ್ತದೆ.

* CAT 2021 ಪರೀಕ್ಷೆಯಲ್ಲಿನ ಕೆಲವು ಪ್ರಶ್ನೆಗಳು ಬಹು ಆಯ್ಕೆಯ ಪ್ರಶ್ನೆಗಳನ್ನು (MCQ) ಆಧರಿಸಿರುತ್ತವೆ. ಆದರೆ ಕೆಲವು MCQ ಅಲ್ಲದ ಪ್ರಶ್ನೆಗಳಾಗಿರುತ್ತದೆ.

* ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ವರದಿ ಮಾಡುವ ಸಮಯವನ್ನು ಎಸ್ಎಂಎಸ್ ಮತ್ತು ಇಮೇಲ್‌ ಮೂಲಕ ಸ್ವೀಕರಿಸುತ್ತಾರೆ ಮತ್ತು ಅದಕ್ಕೆ ಅನುಗುಣವಾಗಿ ಪರೀಕ್ಷಾ ಕೇಂದ್ರದಲ್ಲಿ ವರದಿ ಮಾಡಬೇಕಾಗುತ್ತದೆ.

* ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವಾಗ ಅಭ್ಯರ್ಥಿಗಳನ್ನು ಹ್ಯಾಂಡ್‌ಹೆಲ್ಡ್ ಮೆಟಲ್ ಡಿಟೆಕ್ಟರ್‌ಗಳೊಂದಿಗೆ ಪರೀಕ್ಷಿಸಲಾಗುತ್ತದೆ. ಅಭ್ಯರ್ಥಿಗಳು CAT 2021 ಪ್ರವೇಶ ಪತ್ರ, ಫೋಟೋ ಗುರುತಿನ ಚೀಟಿ, ಮಾಸ್ಕ್, ಸ್ಯಾನಿಟೈಸರ್, ಅಗತ್ಯವಿರುವ ವೈದ್ಯಕೀಯ ಪ್ರಮಾಣಪತ್ರ(ಗಳು) ಮತ್ತು ಸ್ಕ್ರೈಬ್ ಅಫಿಡವಿಟ್ (ಯಾವುದಾದರೂ ಇದ್ದರೆ) ಕೊಂಡೊಯ್ಯಲು ಮಾತ್ರ ಅನುಮತಿ ನೀಡಲಾಗಿರುತ್ತದೆ.

For Quick Alerts
ALLOW NOTIFICATIONS  
For Daily Alerts

English summary
CAT exam 2021 is on november 28. Here is the exam day guidelines in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X