ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು 10 ಮತ್ತು 12ನೇ ತರಗತಿಗಳ ಎರಡನೇ ಅವಧಿಯ ಬೋರ್ಡ್ ಪರೀಕ್ಷೆಗಳು ಏಪ್ರಿಲ್ 26ರಿಂದ ಆರಂಭಿಸಲಾಗುವುದು ಎಂದು ಹೇಳಿದೆ. ಈ ಭಾರಿಯ ಸಿಬಿಎಸ್ಇ ಬೋರ್ಡ್ ಪರೀಕ್ಷೆಗಳು ಆಫ್‌ಲೈನ್ ಮೂಲಕವೇ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಗಳು ಆಯಾ ಶಾಲಾ ಕಾಲೇಜುಗಳಲ್ಲಿಯೇ ಈ ಹಿಂದಿನ ವರ್ಷದಂತೆಯೇ ಪರೀಕ್ಷೆಗೆ ಹಾಜರಾಗಲಿದ್ದಾರೆ. ಇನ್ನು ಪ್ರಶ್ನೆ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಮಂಡಳಿ ಪ್ರಕಟಿಸಿದ್ದ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಅನುಗುಣವಾಗಿಯೇ ಪರೀಕ್ಷೆಗಳು ಜರುಗಲಿವೆ ಎಂದು ತಿಳಿದುಬಂದಿದೆ.
ದೇಶದಲ್ಲಿ ಕೊರೊನಾ ಸೋಂಕಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಿಬಿಎಸ್ಇ 10 ಮತ್ತು 12ನೇ ತರಗತಿಗಳ ಅಂತಿಮ ಪರೀಕ್ಷೆಗಳನ್ನು ಏಪ್ರಿಲ್ 26 ರಿಂದ ಆಯಾ ಶಾಲೆಗಳಲ್ಲಿಯೇ ಪ್ರಾರಂಭಿಸಿಲು ನಿರ್ಧರಿಸಲಾಗಿದೆ ಮತ್ತು ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮಂಡಳಿಯ ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ತಿಳಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ 2022 ವೇಳಾಪಟ್ಟಿ :
ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾರ್ಚ್ 28 ರಿಂದ ಏಪ್ರಿಲ್ 11,2022ರ ವರೆಗೆ ನಡೆಯಲಿದ್ದು, ಬೆಳಗ್ಗೆ 10.30 ರಿಂದ ಮಧ್ಯಾಹ್ನ 1:45ರ ತನಕ ಪರೀಕ್ಷೆ ನಡೆಯಲಿದೆ.
ಮಾರ್ಚ್ 28,2022ರ ಸೋಮವಾರದಂದು ಕನ್ನಡ, ತೆಲಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಶ್, ಇಂಗ್ಲೀಶ್ (ಎನ್‌ಸಿಇಆರ್‌ಟಿ), ಸಂಸ್ಕೃತ, ಮಾರ್ಚ್ 29,2022ರ ಮಂಗಳವಾರ ಯಾವುದೇ ಪರೀಕ್ಷೆ ಇರುವುದಿಲ್ಲ. ಮಾರ್ಚ್ 30,2022ರ ಬುಧವಾರದಂದು ದ್ವಿತೀಯ ಭಾಷೆ ಇಂಗ್ಲೀಶ್, ಕನ್ನಡ, ಮಾರ್ಚ್ 31,2022ರಂದು ಯಾವುದೇ ಪರೀಕ್ಷೆ ಇರುವುದಿಲ್ಲ. ಏಪ್ರಿಲ್ 1,2022ರಂದು ಎಲಿಮೆಂಟ್ಸ್ ಆಫ್ ಮೆಕಾನಿಕಲ್ & ಎಲೆಕ್ಟ್ರಿಕಲ್ ಇಂಜಿನಿಯರಿಂಗ್ -2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಏಪ್ರಿಲ್ 4,22022ರಂದು ಗಣಿತ, ಸಮಾಜ ಶಾಸ್ತ್ರ ಪರೀಕ್ಷೆ ನಡೆಯಲಿದೆ. ಏಪ್ರಿಲ್ 6,2022ರ ಬುಧವಾರ ಸಮಾಜ ವಿಜ್ಞಾನ ಪರೀಕ್ಷೆ ಇದೆ. ಏಪ್ರಿಲ್ 8,2022ರ ಶುಕ್ರವಾರದಂದು ಹಿಂದಿ, ಕನ್ನಡ, ಇಂಗ್ಲೀಶ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್. ಏಪ್ರಿಲ್ 11,2022ರ ಸೋಮವಾರ ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ/ ಹಿಂದೂಸ್ತಾನಿ ಸಂಗೀತ ಪರೀಕ್ಷೆಗಳು ನಡೆಯಲಿವೆ.
ದ್ವಿತೀಯ ಪಿಯುಸಿ ವಿಷಯವಾರು ಅಂತಿಮ ವೇಳಾಪಟ್ಟಿ :
2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಏಪ್ರಿಲ್ 16,2022 ರಿಂದ ಮೇ 6,2022ರ ವರೆಗೆ ನಡೆಸಲು ನಡೆಸಲು ತೀರ್ಮಾನಿಸಲಾಗಿದ್ದು, ಅಂತಿಮ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟ ಮಾಡಲಾಗಿದೆ.
ಏಪ್ರಿಲ್ 16,2022ರಂದು ಗಣಿತ, ಏಪ್ರಿಲ್ 18,2022ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ. ಏಪ್ರಿಲ್ 19,2022ರಂದು ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‌ನೆಸ್. ಏಪ್ರಿಲ್ 20,2022ರಂದು ಇತಿಹಾಸ, ಭೌತಶಾಸ್ತ್ರ, ಏಪ್ರಿಲ್ 21,2022ರಂದು ಉರ್ದು ಮತ್ತು ಸಂಸ್ಕೃತ, ಏಪ್ರಿಲ್ 22,2022ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಏಪ್ರಿಲ್ 23,2022ರಂದು ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಏಪ್ರಿಲ್ 25,2022ರಂದು ಅರ್ಥಶಾಸ್ತ್ರ, ಏಪ್ರಿಲ್ 26,2022ರಂದು ಹಿಂದಿ, ಏಪ್ರಿಲ್ 28,2022ರಂದು ಕನ್ನಡ, ಏಪ್ರಿಲ್ 30,2022ರಂದು ಸಮಾಜಶಾಸ್ತ್, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ. ಮೇ 2,2022ರಂದು ಭೋಗೋಳಶಾಸ್ತ್ರ, ಜೀವಶಾಸ್ತ್ರ, ಮೇ 4,2022ರಂದು ಇಂಗ್ಲೀಷ್ ಮತ್ತು ಮೇ 6,2022ರಂದು ಲೆಕ್ಕಶಾಸ್ತ್ರ, ಐಚ್ಚಿಕ ಕನ್ನಡ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ ವಿಷಯದ ಪರೀಕ್ಷೆಗಳು ನಡೆಯಲಿವೆ.