CBSE Class 10 And 12 Term 2 Exam Date : ಸಿಬಿಎಸ್ಇ 10 ಮತ್ತು 12ನೇ ತರಗತಿ ಟರ್ಮ್ 2 ವೇಳಾಪಟ್ಟಿ ರಿಲೀಸ್

ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (CBSE) 10ನೇ ಮತ್ತು 12 ನೇ ತರಗತಿಯ ಟರ್ಮ್ 2 ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ವೇಳಾಪಟ್ಟಿಯನ್ನು ವೀಕ್ಷಿಸಬಹುದು.

 
ಸಿಬಿಎಸ್ಇ 10 ಮತ್ತು 12ನೇ ತರಗತಿ ಟರ್ಮ್ 2 ಪರೀಕ್ಷೆ ವೇಳಾಪಟ್ಟಿ ಪ್ರಕಟ

ಸಿಬಿಎಸ್ಇ 10ನೇ ತರಗತಿ ಟರ್ಮ್‌ 2 ಬೋರ್ಡ್‌ ಪರೀಕ್ಷೆಯು ಏಪ್ರಿಲ್‌ 26 ರಿಂದ ಮೇ 24 ವರೆಗೆ ನಡೆಸಲಿದೆ. ಸಿಬಿಎಸ್ಇ 12ನೇ ತರಗತಿ ಟರ್ಮ್‌ 2 ಬೋರ್ಡ್‌ ಪರೀಕ್ಷೆಯು ಏಪ್ರಿಲ್‌ 26 ರಿಂದ ಜೂನ್‌ 15, 2022 ರವರೆಗೆ ನಡೆಯಲಿದೆ.

ಪ್ರಸಕ್ತ ಸಾಲಿನಲ್ಲಿ ಕೋವಿಡ್ ಕಾರಣದಿಂದಾಗಿ ಶಾಲೆಗಳು ಮುಚ್ಚಲ್ಪಟ್ಟಿದ್ದರಿಂದ ಸಿಬಿಎಸ್ಇ 10 ಮತ್ತು 12ನೇ ತರಗತಿಗಳ ಎಲ್ಲಾ ವಿಷಯಗಳಲ್ಲಿ ಎರಡು ಪರೀಕ್ಷೆಗಳ ನಡುವೆ ಹೆಚ್ಚಿನ ಅಂತರವನ್ನು ನೀಡಿದೆ. ಈ ಕುರಿತು ಮಂಡಳಿಯು "ಪರೀಕ್ಷೆಯ ನಡುವೆ ಅಂತರವು ಸ್ವಲ್ಪ ಕಡಿಮೆಯಿರುವ ಪರೀಕ್ಷೆಗಳನ್ನು ನಂತರದ ದಿನಾಂಕದಲ್ಲಿ ನಿಗದಿಪಡಿಸಲಾಗಿದೆ ಆದ್ದರಿಂದ ವಿದ್ಯಾರ್ಥಿಗಳು ಈ ಪರೀಕ್ಷೆಗಳ ತಯಾರಿಗಾಗಿ ಸಾಕಷ್ಟು ಸಮಯವನ್ನು ತೆಗೆದುಕೊಳ್ಳಬಹುದು" ಎಂದು ಹೇಳಿದೆ.

ಸಿಬಿಎಸ್‌ಇ ಟರ್ಮ್ 2 ವೇಳಾಪಟ್ಟಿಯನ್ನು ಸಿದ್ಧಪಡಿಸುವಾಗ ಜೆಇಇ ಮುಖ್ಯ ಪರೀಕ್ಷೆ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನಿಸಿಕೊಂಡು ದಿನಾಂಕಗಳನ್ನು ನಿರ್ಧರಿಸಲಾಗಿದೆ ಎಂದು ಸಿಬಿಎಸ್‌ಇ ತಿಳಿಸಿದೆ.

ಸಿಬಿಎಸ್ಇ ಇತರ 26 ದೇಶಗಳಲ್ಲಿ ಟರ್ಮ್ 2 ಬೋರ್ಡ್ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ, ಪರೀಕ್ಷೆಯನ್ನು ಎರಡು ಶಿಫ್ಟ್‌ಗಳಲ್ಲಿ ನಡೆಸುವುದು ಕಾರ್ಯಸಾಧ್ಯವಲ್ಲ ಆದ್ದರಿಂದ ಬೋರ್ಡ್ ಪರೀಕ್ಷೆಯ ಪ್ರಾರಂಭದ ಸಮಯವನ್ನು ಬೆಳಿಗ್ಗೆ 10:30 ಕ್ಕೆ ನಿಗದಿಪಡಿಸಲಾಗಿದೆ.

"ತಾಪಮಾನವು ಸ್ವಲ್ಪ ಹೆಚ್ಚಾಗಿರುತ್ತದೆ ಎಂಬ ವಾಸ್ತವದ ಹೊರತಾಗಿಯೂ, ಪರೀಕ್ಷೆಯ ಪ್ರಾರಂಭದ ಸಮಯವು ಬೆಳಿಗ್ಗೆ 10.30 ಕ್ಕೆ ಇರುತ್ತದೆ ಏಕೆಂದರೆ ಪರೀಕ್ಷೆಯನ್ನು ಮೊದಲೇ ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ ಕಾರಣ ಪರೀಕ್ಷೆಗಳನ್ನು 26 ದೇಶಗಳಲ್ಲಿ ನಡೆಸಲಾಗುವುದು ಹಾಗಾಗಿ ಭಾರತದಲ್ಲಿ ಎರಡು ಪಾಳಿಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ, "ಎಂದು CBSE ಹೇಳಿಕೆ ಸೇರಿಸಲಾಗಿದೆ.

 

ಸಿಬಿಎಸ್ಇ 10ನೇ ತರಗತಿ ಟರ್ಮ್ 2 ಪರೀಕ್ಷೆಯ ವೇಳಾಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಸಿಬಿಎಸ್ಇ 12ನೇ ತರಗತಿ ಟರ್ಮ್ 2 ಪರೀಕ್ಷೆಯ ವೇಳಾಪಟ್ಟಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
CBSE class 10 and class 12 term 2 exam date sheet released. Here is the details.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X