ಫಿಸಿಕ್ಸ್ ಎಕ್ಸಾಂನಲ್ಲಿ ಹೆಚ್ಚು ಅಂಕ ಸ್ಕೋರ್ ಮಾಡಲು ಈ ಟಾಪಿಕ್ ಓದಲು ಮರೆಯದಿರಿ

Written By: Nishmitha B

ನಮ್ಮ ಕೆರಿಯರ್ ಲೈಫ್ ನಿರ್ಧಾರವಾಗುವುದು ದ್ವಿತೀಯ ಪಿಯುಸಿ ಪರೀಕ್ಷೆ ಬಳಿಕ. ಈ ಹಂತದಲ್ಲಿ ನಾವು ಗಳಿಸಿದ ಅಂಕವು ನಮ್ಮ ಮುಂದಿನ ಜೀವನವನ್ನ ನಿರ್ಧರಿಸುತ್ತದೆ. ಈ ವರ್ಷ ಮಾರ್ಚ್ 5 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು ಎಪ್ರಿಲ್ 13ರಂದು ಕೊನೆಗೊಳ್ಳಲಿದೆ

ವಿಜ್ಞಾನ ವಿಭಾಗದಲ್ಲಿ ಇರುವ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ವಿಷಯದಲ್ಲಿ ಮಾರ್ಕ್ ಸ್ಕೋರ್ ಮಾಡುವುದು ಎಷ್ಟು ಅಗತ್ಯ ಎಂದು ಗೊತ್ತು. ಇನ್ನು ಫಿಸಿಕ್ಸ್ ಪತ್ರಿಕೆ ಉತ್ತರಿಸಲು ಕಾಂಫಿಡೆಂಟ್ ಕೂಡಾ ತುಂಬಾ ಅಗತ್ಯ ಎಂದು ವಿದ್ಯಾರ್ಥಿಗಳು ಒಪ್ಪಿಕೊಳ್ಳುತ್ತಾರೆ. ಯಾಕೆಂದ್ರೆ ಈ ಸಬ್‌ಜೆಕ್ಟ್ ನಲ್ಲಿ ನೇರವಾಗಿ ಪ್ರಶ್ನೆಗಳನ್ನ ಕೇಳಿರುತ್ತಾರೆ. ಇನ್ನು ಈ ಸಬ್‌ಜೆಕ್ಟ್ ಬಗ್ಗೆ ಹೇಳುವುದಾದರೆ ಹಳೆಯ ಪ್ರಶ್ನೆ ಪತ್ರಿಕೆಗಳನ್ನ ಒಮ್ಮೆ ಸ್ಟಡಿ ಮಾಡುವುದು ಉತ್ತಮ. ಆದ್ರೆ ವಿದ್ಯಾರ್ಥಿಗಳು ಈ ವಿಧಾನವನ್ನ ಕಡೆಗಣಿಸುತ್ತಾರೆ.

ನಾಳೆ ಸಿಬಿಎಸ್ಇ 12ನೇ ತರಗತಿಯ ವಿದ್ಯಾರ್ಥಿಗಳು ಫಿಸಿಕ್ಸ್ ಪರೀಕ್ಷೆ ಎದುರಿಸಲಿದ್ದಾರೆ. ಹಾಗಾಗಿ ಕೊನೆಯ ಕ್ಷಣದ ಸ್ಟಡಿಗಾಗಿ ನಿಮಗೆ ಇಲ್ಲಿ ಕೆಲವೊಂದು ಪ್ರಮುಖ ಟಾಪಿಕ್ ಗಳನ್ನ ನೀಡಲಾಗಿದ್ದು, ಇತ್ತ ಒಂದು ಬಾರಿ ಕಣ್ಣು ಹಾಯಿಸಿ ಅಷ್ಟೇ ಅಲ್ಲ ಸ್ಟಡಿ ಕೂಡಾ ಮಾಡಿ

ಯೂನಿಟ್ 1 (ಎಲೆಕ್ಟ್ರೋಸ್ಟಾಟಿಕ್ಸ್)

ದಿ ಕೊಲಂಬಸ್ ಲಾ ಇನ್ ವೆಕ್ಟರ್ ಫಾರ್ಮ್, ವಿದ್ಯುತ್ ಕ್ಷೇತ್ರದ ಗಾಸ್ ಪ್ರಮೇಯ, ವಿದ್ಯುತ್ ಸಂಭಾವ್ಯತೆ, ಕ್ಯಾಪಸಿಟನ್ಸ್ ಆಫ್ ಪಾರಲ್ಲೆಲ್ ಪ್ಲೇಟ್ ಈ ವಿಷಯಗಳ ಬಗ್ಗೆ ಹೆಚ್ಚು ಫೋಕಸ್ ಮಾಡಿ

ಯೂನಿಟ್ 2 ( ಕರೆಂಟ್ ಎಲೆಕ್ಸ್ರಿಸಿಟಿ)

ಕರೆಂಟ್ ಮತ್ತು ವೆಲೊಸಿಟಿ ಮಧ್ಯದ ಸಂಬಂಧ, ಡ್ರಿಫ್ಟ್ ವೆಲೊಸಿಟಿ, ಕಿರ್ಚಾಫ್ಸ್ ಲಾ, ನಿರೋಧಕಗಳ ಸಮಾನಾಂತರ ಸಂಪರ್ಕಗಳು, ಸಂಭಾವ್ಯ ಮಾಪಕ ಇವು ಪ್ರಮುಖ ಟಾಪಿಕ್ ಆಗಿವೆ

ಯೂನಿಟ್ 3: (ಪ್ರಸಕ್ತ ಮತ್ತು ಕಾಂತತ್ವದ ಕಾಂತೀಯ ಪರಿಣಾಮಗಳು)

ದಿ ಅಪ್ಲಿಕೇಶನ್ ಆಫ್ ಬಯೋಟ್ - ಸಾವರ್ಟ್ ಲಾ, ಅನ್ವಯದೊಂದಿಗೆ ಆಂಪಿಯರ್ನ ಲಾ, ಸೈಕ್ಲೋಟ್ರಾನ್, ಚಲಿಸುವ ಸುರುಳಿ-ಗಾಲ್ವನೋಮೀಟರ್, ಕಾಂತೀಯ ದ್ವಿಧ್ರುವಿ ಕ್ಷಣ, ಆಯಸ್ಕಾಂತೀಯ ವಸ್ತುಗಳ ಗುಣಗಳು, ಕಾಂತೀಯ ದ್ವಿಧ್ರುವಿ ಮೇಲೆ ಟಾರ್ಕ್ ಮುಂತಾದ ವಿಷಯದತ್ತ ಹೆಚ್ಚು ಫೋಕಸ್ ಮಾಡಿ

ಯೂನಿಟ್ 4: ( ಎಲೆಕ್ಟ್ರೋಮ್ಯಾಗ್ನೆಟಿಕ್ ಇಂಡಕ್ಷನ್ ಮತ್ತು ಆಲ್ಟರ್ನೇಟಿಂಗ್ ಕರೆಂಟ್)

ಮ್ಯೂಚುಯಲ್ ಇಂಡಕ್ಷನ್ ಮತ್ತು ಸ್ವಯಂ ಇಂಡಕ್ಷನ್, ಆರ್‌ಎಮ್‌ಎಸ್ ಹಾಗೂ ಪೀಕ್ ವಾಲ್ಯು ಆಫ್ ಕರೆಂಟ್‌ ಮಧ್ಯೆಯ ಸಂಬಂಧ, ಎಲ್‌ಸಿಆರ್ ಸರ್ಕ್ಯೂಟ್ ಸೀರಿಸ್‌ನಲ್ಲಿ ರೆಸೋನೆನ್ಸ್

ಯೂನಿಟ್ 5: ( ಎಲೆಕ್ಟ್ರೋಮ್ಯಾಗ್ನೇಟಿಕ್ ವೇವ್ಸ್ )

ವಿದ್ಯುತ್ಕಾಂತೀಯ ಸ್ಪೆಕ್ಟ್ರಮ್ , ಸ್ಥಳಾಂತರದ ಪ್ರವಾಹದ ಮೂಲ ಪರಿಕಲ್ಪನೆಗಳು ಮತ್ತು ಇಎಮ್ ತರಂಗಗಳ ಗುಣಲಕ್ಷಣಗಳು

ಯೂನಿಟ್ 6 : ( ಆಪ್ಟಿಕ್ಸ್)

ಒಟ್ಟು ಆಂತರಿಕ ಪ್ರತಿಬಿಂಬ, ಲೆನ್ಸ್ಮೇಕರ್ನ ಫಾರ್ಮುಲ, ಮೈಕ್ರೋಸ್ಕೋಪ್ ಮತ್ತು ಆಸ್ಟ್ರೀನೊಮಿಕಲ್ ತೆಲೆಸ್ಕೋಪ್ಸ್, ರೆಫ್ರೇಕ್ಟೀವ್ ಇಂಡೆಕ್ಸ್ ಆಫ್ ಆ ಪ್ರಿಸಮ್, ಸ್ಕಾಟೆರಿಂಗ್ ಆಫ್ ಲೈಟ್ ಮತ್ತು ಧ್ರುವೀಕರಣ

ಯೂನಿಟ್ 7: ಡ್ಯುಯಲ್ ನೇಚರ್ ಆಫ್ ರೇಡಿಯೇಶನ್ ಹಾಗೂ ಮ್ಯಾಟರ್

ವಿಕಿರಣದ ಉಭಯ ಸ್ವಭಾವ, ದ್ಯುತಿವಿದ್ಯುತ್ ಪರಿಣಾಮ, ಹರ್ಟ್ಜ್ ಮತ್ತು ಲಿನಾರ್ಡ್ ಅವಲೋಕನಗಳು, ಐನ್ ಸ್ಟೀನ್ ನ ದ್ಯುತಿವಿದ್ಯುತ್ ಪರಿಣಾಮ ಈ ಟಾಪಿಕ್ ಬಗ್ಗೆ ಪ್ರಶ್ನೆಗಳನ್ನ ನಿರೀಕ್ಷಿಸಲಾಗಿದೆ

ಯೂನಿಟ್ 8 : (ಪರಮಾಣುಗಳು ಮತ್ತು ನ್ಯೂಕ್ಲಿಯಿ)

ಬೋಹ್ರ್ ಮಾದರಿ, ಹೈಡ್ರೋಜನ್ ಸ್ಪೆಕ್ಟ್ರಮ್, ಆಲ್ಫಾ-ಕಣದ ಸ್ಕ್ಯಾಟರಿಂಗ್ ಪ್ರಯೋಗ, ಮಾಸ್ ಡಿಫೆಕ್ಟ್, ಪರಮಾಣು ವಿದಳನ ಮತ್ತು ಪರಮಾಣು ಸಮ್ಮಿಳನ

ಯೂನಿಟ್ 9 : ( ವಿದ್ಯುನ್ಮಾನ ಸಾಧನಗಳು)

ವಾಹಕಗಳಲ್ಲಿನ ಎನರ್ಜಿ ಬ್ಯಾಂಡ್‌ಗಳು, ಜಂಕ್ಷನ್ ಟ್ರಾನ್ಸಿಸ್ಟರ್, ರಿಕ್ಟಿಫೈಯರ್ ತರಹ ಇರುವ ಡಯೋಡ್, ಸೆಮಿಕಂಡಕ್ಟರ್ ಡಯೋಡ್

ಯೂನಿಟ್ 10: (ಕಮ್ಯುನಿಕೇಶನ್ ಸಿಸ್ಟೆಮ್)

ಸಂವಹನ ವ್ಯವಸ್ಥೆಯ ಮೂಲ ಪರಿಕಲ್ಪನೆಗಳು, ಸಮನ್ವಯತೆಯ ವಿಧಗಳು, ವಾತಾವರಣ ಮತ್ತು ಸಮನ್ವಯತೆ ಸೂಚ್ಯಂಕದಲ್ಲಿರುವ ವಿದ್ಯುತ್ಕಾಂತೀಯ ಅಲೆಗಳ ಪ್ರಸರಣ

English summary
When the CBSE Class 12 students are all set to take the Physics paper on March 7, they might be juggling with the study notes at this moment. Spare a few minutes with us as we furnish the most important topics you need to revise on this last day

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia