ಎನ್ ಇ ಟಿ ಪರೀಕ್ಷೆ: ಆಗಸ್ಟ್ 11 ರಿಂದ ಅರ್ಜಿ ಸಲ್ಲಿಸಲು ಅವಕಾಶ

ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಒಂದು ತಿಂಗಳ ಅವಕಾಶ ನೀಡಲಾಗಿದ್ದು, ಎನ್ ಇ ಟಿ ಪರೀಕ್ಷೆಯ ಸಂಪೂರ್ಣ ವಿವರಗಳನ್ನು ದಿನಾಂಕ 04-08-2017 ರಂದು ಸಿಬಿಎಸ್ಇ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

ಉಪನ್ಯಾಸಕರ ಅರ್ಹತಾ ಪರೀಕ್ಷೆ ಯುಜಿಸಿ ನೆಟ್-2017 ನೇ ಸಾಲಿನ ಪರೀಕ್ಷೆಗೆ ಸಂಬಂಧಿಸಿದಂತೆ ಸಿಬಿಎಸ್ಇ ನೂತನ ಅಧಿಸೂಚನೆಯನ್ನು ಹೊರಡಿಸಿದೆ.

ಇಷ್ಟು ದಿನ ಕಾದು ಕೂತ ಎನ್ಇಟಿ ಆಕಾಂಕ್ಷಿಗಳ ಗೊಂದಲಕ್ಕೆ ಕೊನೆಗೂ ಸಿಬಿಎಸ್ಇ ತೆರೆಎಳೆದಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ) ಪ್ರತಿವರ್ಷದಂತೆ ಈ ವರ್ಷವು ನಡೆಸುವ ಜವಾಬ್ದಾರಿ ಹೊತ್ತಿದೆ.

ಈ ಬಾರಿಯ ಎನ್ಇಟಿ ಪರೀಕ್ಷೆಯು ನವೆಂಬರ್ 05 (ಭಾನುವಾರ) ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ನವೆಂಬರ್ 5ಕ್ಕೆ ಎನ್ಇಟಿ ಪರೀಕ್ಷೆ

ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಒಂದು ತಿಂಗಳ ಅವಕಾಶ ನೀಡಲಾಗಿದ್ದು, ಎನ್ ಇ ಟಿ ಪರೀಕ್ಷೆಯ ಸಂಪೂರ್ಣ ವಿವರಗಳನ್ನು ದಿನಾಂಕ 04-08-2017 ರಂದು ಸಿಬಿಎಸ್ಇ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:11-08-2017
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-09-2017
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 12-09-2017

ಆಧಾರ್ ಕಾರ್ಡ್ ಕಡ್ಡಾಯ

ಈ ಬಾರಿಯ ಎನ್ ಇ ಟಿ ಪರೀಕ್ಷಾರ್ಥಿಗಳು ಆಧಾರ್ ಕಾರ್ಡ್ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಪರೀಕ್ಷೆಗೆ ಮಾತ್ರವಲ್ಲದೇ ಆನ್-ಲೈನ್ ಅರ್ಜಿ ತುಂಬಲು ಕೂಡ ಆಧಾರ್ ಸಂಖ್ಯೆ ನಮೂದಿಸುವಂತೆ ಸೂಚಿಸಿದೆ.

ಎನ್ ಇ ಟಿ ಪರೀಕ್ಷೆ

ಸರ್ಕಾರಿ, ಅನುದಾನಿತ ಪದವಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತಾ ಪರೀಕ್ಷೆ ಎನ್‌ಇಟಿ ಅಥವಾ ಎಸ್‌ಎಲ್‌ಇಟಿ ತೇರ್ಗಡೆಯಾಗಿರಬೇಕು. ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮೂಲಕ ವರ್ಷಕ್ಕೆ ಎರಡು ಬಾರಿ ಎನ್‌ಇಟಿ ನಡೆಯುತ್ತದೆ. ಅಲ್ಲದೆ ಕೆಲ ರಾಜ್ಯಗಳು ವರ್ಷ, ಎರಡು ವರ್ಷಕ್ಕೊಮ್ಮೆ ಎಸ್‌ಎಲ್‌ಇಟಿ (ಸ್ಲೆಟ್‌) ನಡೆಸುತ್ತವೆ. ಆರು ತಿಂಗಳಿಗೊಮ್ಮೆ ನಡೆಯುವ ಎನ್‌ಇಟಿಯನ್ನು ದೇಶದಾದ್ಯಂತ ಸರಾಸರಿ 7 ಲಕ್ಷ ಅಭ್ಯರ್ಥಿಗಳು ಬರೆಯುತ್ತಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಸ್ಲೆಟ್‌ ಪರೀಕ್ಷೆಗೂ ಲಕ್ಷಾಂತರ ಅಭ್ಯರ್ಥಿಗಳು ಹಾಜರಾಗುತ್ತಿದ್ದಾರೆ.

ಎನ್ಇಟಿ ಪರೀಕ್ಷಾ ವಿಧಾನ

ಎನ್ಇಟಿ ಪರೀಕ್ಷೆಯು ಒಟ್ಟು ಮೂರು ಪತ್ರಿಕೆಗಳನ್ನು ಒಳಗೊಂಡಿದ್ದು 350 ಅಂಕಗಳಿಗೆ ನಡೆಸಲಾಗುವುದು. ಮೊದಲ ಪತ್ರಿಕೆ 60 ಪ್ರಶ್ನೆಗಳನ್ನೊಳಗೊಂಡಿದ್ದು 50 ಪ್ರಶ್ನೆಗಳಿಗೆ ಅಭ್ಯರ್ಥಿಯು ಉತ್ತರಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗುತ್ತದೆ. ಈ ಪತ್ರಿಕೆಯು ಸಾಮಾನ್ಯ ಪತ್ರಿಕೆಯಾಗಿದ್ದು ಲಾಜಿಕ್, ರೀಸನಿಂಗ್, ಮೆಂಟಲ್ ಎಬಿಲಿಟಿ ಸೇರಿದಂತೆ ಹತ್ತು ವಿವಿಧ ವಿಷಯಗಳ ಬಗ್ಗೆ ಕೇಳಲಾಗುವುದು. ಎರಡನೇ ಪತ್ರಿಕೆಯು 50 ಪ್ರಶ್ನೆಗಳನ್ನು ಒಳಗೊಂಡಿದ್ದು ಇದು ವಿಷಯಾಧರಿತ ಪತ್ರಿಕೆಯಾಗಿರುತ್ತದೆ.ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗುತ್ತದೆ. ಮೂರನೇ ಪತ್ರಿಕೆಯು 75 ಪ್ರಶ್ನೆಗಳನ್ನು ಒಳಗೊಂಡಿದ್ದು ಇದು ವಿಷಯಾಧರಿತ ಪತ್ರಿಕೆಯಾಗಿರುತ್ತದೆ.ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗುತ್ತದೆ.

ತೇರ್ಗಡೆ ವಿಧಾನ

ಯುಜಿಸಿ ನಿಯಮಾವಳಿಯಂತೆ ಶೇಕಡವಾರಿನ (ಕಟ್ ಆಫ್ ಪರ್ಸೆಂಟೇಜ್) ಮೂಲಕ ಅಭ್ಯರ್ಥಿಗಳ ಫಲಿತಾಂಶ ಘೋಷಿಸಲಾಗುತ್ತದೆ.

ಹೆಚ್ಚಿನ ವಿವರಗಳಿಗಾಗಿ cbsenet.nic.in ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
The CBSE has released a notification regarding the National Eligibility Test (NET) November 2017. According to it the official notification regarding the exam will be released on August 4.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X