ಶೀಘ್ರದಲ್ಲಿ ಸಿಬಿಎಸ್ಇ ಸಿಟಿಇಟಿ ಆನ್-ಲೈನ್ ಅರ್ಜಿ ಪ್ರಕ್ರಿಯೆ

Posted By:

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ) ಸೆಂಟ್ರಲ್ ಟೀಚರ್ಸ್ ಎಲಿಜಿಬಿಲಿಟಿ ಟೆಸ್ಟ್ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದು, ಮಾರ್ಚ್ ಅಂತ್ಯದಲ್ಲಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರದ ಆಡಳಿತಕ್ಕೆ ಒಳಪಟ್ಟ (ಕೆ.ವಿ.ಎಸ್, ಎನ್.ವಿ.ಎಸ್ ಇತ್ಯಾದಿ) ಹಾಗೂ ಕೇಂದ್ರಾಡಳಿತ ಪ್ರದೇಶದ ಶಾಲೆಗಳ ಹಾಗೂ ಅನುದಾನ ರಹಿತ ಶಾಲೆಗಳ ಶಿಕ್ಷಕರ ನೇಮಕಕ್ಕೆ ಇದು ಅರ್ಹತಾ ಪರೀಕ್ಷೆಯಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ

ಆನ್-ಲೈನ್ ಅರ್ಜಿ ಪ್ರಕ್ರಿಯೆ

ಪರೀಕ್ಷಾ ವಿಧಾನ

ಈ ಪರೀಕ್ಷೆಯು ಎರಡು ವಿಭಾಗಗಳಲ್ಲಿ ನಡೆಯಲಿದ್ದು, 1 ರಿಂದ 7 ನೇ ತರಗತಿ ಬೋಧಿಸುವವರಿಗೆ ಪ್ರೈಮರಿ ಹಂತದ ಮತ್ತು 6 ರಿಂದ 8 ನೇ ತರಗತಿಯವರೆಗೆ ಬೋಧಿಸಲಿಚ್ಚಿಸುವವರು ಎಲಿಮೆಂಟರಿ ಹಂತದ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. 

ಶೈಕ್ಷಣಿಕ ಅರ್ಹತೆಗಳು

  • ಪ್ರೈಮರಿ ಹಂತದ ಪರೀಕ್ಷೆ ತೆಗೆದುಕೊಳ್ಳುವವರು ದ್ವಿತೀಯ ಪಿಯುಸಿಯಲ್ಲಿ ಶೇ.50 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ 2 ವರ್ಷಗಳ ಡಿಪ್ಲೊಮಾ ಪಡೆದಿರಬೇಕು.
  • ಅಂತಿಮ ವರ್ಷದ ಪರೀಕ್ಷೆಯನ್ನು ಪೂರ್ಣಗೊಳಿಸಿ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ನಾಲ್ಕು ವರ್ಷಗಳ ಪದವಿ (ಬಿ.ಎಡ್) ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು, ದ್ವಿತೀಯ ಪಿಯುಸಿ ನಂತರ ಶಿಕ್ಷಣದಲ್ಲಿ ಡಿಪ್ಲೊಮಾ ಮಾಡುತ್ತಿರುವವರು, ಪದವಿಯ ನಂತರ ಪ್ರಾಥಮಿಕ ಶಿಕ್ಷಣದಲ್ಲಿ ಡಿಪ್ಲೊಮಾ ಮಾಡಿದವರು ಕೂಡ ಅರ್ಜಿ ಸಲ್ಲಿಸಬಹುದು.
  • ಎಲಿಮೆಂಟರಿ ಹಂತದ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿ ಪದವಿ ಪಡೆದಿರಬೇಕು ಇಲ್ಲವೇ ಅಂತಿಮ ವರ್ಷದ ಪರೀಕ್ಷೆಯನ್ನು ಎದುರಿಸುತ್ತಿರಬೇಕು. ಶೇ.50 ರಷ್ಟು ಅಂಕಗಳೊಂದಿಗೆ ಪದವಿ ಪಡೆದು ಪ್ರಥಮ ವರ್ಷದ ಬಿ.ಇಡಿ ಅಭ್ಯಸಿಸುತ್ತಿರುವವರು, ದ್ವಿತೀಯ ಪಿಯುಸಿಯಲ್ಲಿ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿ ನಾಲ್ಕು ವರ್ಷದ ಎಲಿಮೆಂಟರಿ ಎಜುಕೇಷನ್ನಲ್ಲಿ ಪದವಿ ಪಡೆದಿರುವವರು ಅಥವಾ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು, ಅಥವಾ ನಾಲ್ಕು ವರ್ಷದ ಬಿಎ ಬಿ.ಇಡಿ/ಬಿಎಸ್ಸಿ ಬಿ.ಇಡಿ ಪಡೆದವರು ಅಥವಾ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಕೂಡ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿಗಳನ್ನು ಸಿ.ಟಿ.ಇ.ಟಿ ವೆಬ್ಸೈಟ್ ಮೂಲಕ ಸಲ್ಲಿಸಲು ಮಾತ್ರ ಅವಕಾಶ

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ http://ctet.nic.in ಗಮನಿಸಿ

English summary
cbse ctet examination online application process will be on end of the month

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia