ಸಿಬಿಎಸ್ಇ: ಜನವರಿಯಲ್ಲಿ 10 ಮತ್ತು 12 ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಗಳು

Posted By:

2018 ರ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್ಇ) 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳು ಜನವರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಸಿಬಿಎಸ್ಇ ಮಾನ್ಯತೆ ಪಡೆದಿರುವ ಕೆಲವು ಶಾಲೆಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಸಲು ವೇಳಾಪಟ್ಟಿ ಬಿಡುಗಡೆ ಮಾಡಿದ್ದು, 2018 ರ ಜನವರಿ 16 ರಿಂದ ಆರಂಭವಾಗಿ ಫೆಬ್ರವರಿವರೆಗೂ ಪರೀಕ್ಷೆಗಳು ನಡೆಯಲಿವೆ.

ನೀಟ್ 2018: ಮೇ 10 ರಂದು ನಡೆಯುವ ಸಾಧ್ಯತೆ

ಸಿಬಿಎಸ್ಇ ಜನವರಿಯಲ್ಲಿ ಪ್ರಾಯೋಗಿಕ ಪರೀಕ್ಷೆಗಳು

ಈ ಕುರಿತು ಸಂಬಂಧಪಟ್ಟ ಶಾಲೆಗಳಿಗೆ ವೇಳಾಪಟ್ಟಿ ರವಾನಿಸಲಾಗಿದ್ದು, ಫೆಬ್ರವರಿ ಒಳಗೆ ವಿದ್ಯಾರ್ಥಿಗಳಿಗೆ ನೀಡಲಾದ ಅಂಕಗಳನ್ನು ಅಪ್ಲೋಡ್ ಮಾಡುವಂತೆ ಶಾಲೆಗಳಿಗೆ ಸಿಬಿಎಸ್ಇ ಸೂಚಿಸಿದೆ.

ಈ ಮಧ್ಯೆ ಬೋರ್ಡ್ ಪರೀಕ್ಷೆಗೆ ಸಂಬಂಧಿಸಿದಂತೆ ಸಿಬಿಎಸ್ಇ ವೇಳಾಪಟ್ಟಿ ಬಿಡುಗಡೆ ಮಾಡಿಲ್ಲ. ಕೆಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಚುನಾವಣೆ ದಿನಾಂಕ ಘೋಷಣೆಯಾದ ನಂತರ ಸಿಬಿಎಸ್ಇ ಪರೀಕ್ಷಾ ದಿನಾಂಕ ನಿರ್ಧರಿಸಲಿದೆ. ಡಿಸೆಂಬರ್ ಅಂತ್ಯಕ್ಕೆ ಅಂತಿಮ ವೇಳಾಪಟ್ಟಿ ಹೊರಬೀಳುವ ಸಾಧ್ಯತೆ ಇದೆ

ಈ ಬಾರಿ ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ ಮತ್ತು ಕರ್ನಾಟಕ ರಾಜ್ಯಗಳ ಚುನಾವಣೆ ಇರುವುದರಿಂದ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ವ್ಯತ್ಯಾಸವಾಗಲಿದೆ. ಕಳೆದ ಬಾರಿ ಕೂಡ ಗೋವಾ, ಪಂಜಾಬ್, ಉತ್ತರ ಪ್ರದೇಶ, ಮಣಿಪುರ ಮತ್ತು ಉತ್ತರಾಖಂಡದ 5 ರಾಜ್ಯಗಳಲ್ಲಿ ಚುನಾವಣೆ ನಡೆದ ಕಾರಣ ಸಿಬಿಎಸ್ಇ ಬೋರ್ಡ್ ಪರೀಕ್ಷೆ 9 ದಿನಗಳ ವಿಳಂಬವಾಗಬೇಕಾಯಿತು. ಪರೀಕ್ಷೆ ತಡವಾಗಿ ಆರಂಭವಾಗಿ ಬೇಗ ಮುಗಿಯಲಿದೆ ಎಂದು ಮಂಡಳಿ ತಿಳಿಸಿದೆ. 45 ರಿಂದ 50 ದಿನದೊಳಗೆ ಎಲ್ಲ ಪರೀಕ್ಷೆಗಳನ್ನು ಮುಗಿಸಲಾಗುವುದು ಎಂದು ಹೇಳಿದೆ.

10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಅಳೆಯಲು, ಸಿಬಿಎಸ್ಇ ಮಂಡಳಿ ಪರೀಕ್ಷೆಯು ಇಂಟರ್ನಲ್ ಅಥವಾ ಪ್ರಾಕ್ಟಿಕಲ್ ಪರೀಕ್ಷೆ ಹಾಗೂ ಎಕ್ಸಟರ್ನಲ್ ಅಥವಾ ಥಿಯರಿ ಪರೀಕ್ಷೆಗಳನ್ನು ನಡೆಸುತ್ತದೆ.

ಸಬ್ಜೆಕ್ಟ್ ಗಳ ಸ್ವರೂಪದ ಆಧಾರದಲ್ಲಿ ಥಿಯರಿ ಹಾಗೂ ಪ್ರಾಕ್ಟಿಕಲ್ಸ್ ನಲ್ಲಿ ಪರೀಕ್ಷೆಗಳನ್ನು ಆಯೋಜಿಸಲಾಗುತ್ತದೆ ಹಾಗೂ ಪಠ್ಯಕ್ರಮದಲ್ಲಿ ಸೂಚಿಸಿದಂತೆ ಮಾರ್ಕ್ಸ್ ಅಥವಾ ಗ್ರೇಡ್ ನೀಡಲಾಗುತ್ತದೆ.

English summary
The Central Board of Secondary Examination (CBSE) has shared the schedule for practicals and internal assessment with the affiliated schools, the practicals for class 12 and 10 board examinations for 2018 are said to start from January 16, 2018.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia