CISCE Class 10 And 12 Exam Time Table : ಸೆಮಿಸ್ಟರ್ 1ರ ಪರಿಷ್ಕೃತ ವೇಳಾಪಟ್ಟಿ ರಿಲೀಸ್

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಐಸಿಎಸ್ಇ 10ನೇ ತರಗತಿ ಮತ್ತು ಐಎಸ್‌ಸಿ 12ನೇ ತರಗತಿಯ ವಾರ್ಷಿಕ ಪರೀಕ್ಷೆಗಳ ಸೆಮಿಸ್ಟರ್ 1ರ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಸಿಐಎಸ್‌ಸಿಇ 10 ಮತ್ತು 12ನೇ ತರಗತಿ ಪರೀಕ್ಷಾ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಐಸಿಎಸ್ಇ 10 ನೇ ತರಗತಿಯ ಸೆಮಿಸ್ಟರ್ 1ರ ಪರೀಕ್ಷೆಗಳು ನವೆಂಬರ್ 29 ಮತ್ತು ಡಿಸೆಂಬರ್ 16 ರ ನಡುವೆ ನಡೆಯಲಿದೆ. ಐಎಸ್‌ಸಿ12 ನೇ ತರಗತಿಯ ಸೆಮಿಸ್ಟರ್ 1ರ ಪರೀಕ್ಷೆಗಳನ್ನು ನವೆಂಬರ್ 22 ರಿಂದ ಡಿಸೆಂಬರ್ 20 ರವರೆಗೆ ನಡೆಸಲಿದೆ. ಐಸಿಎಸ್ಇ ಮತ್ತು ಐಎಸ್‌ಸಿ 10 ಮತ್ತು 12ನೇ ತರಗತಿಯ ಸೆಮಿಸ್ಟರ್ 1ರ ಪರೀಕ್ಷೆಗಳು ನವೆಂಬರ್ 15 ರಿಂದ ಪ್ರಾರಂಭವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಐಸಿಎಸ್‌ಇ ಮತ್ತು ಐಎಸ್‌ಸಿ ಪರೀಕ್ಷೆಗಳನ್ನು ವಿದ್ಯಾರ್ಥಿಗಳ ಆಯಾ ಶಾಲೆಗಳಲ್ಲಿ ಆಫ್‌ಲೈನ್‌ ಮೂಲಕ ನಡೆಸಲಾಗುತ್ತದೆ. 10ನೇ ತರಗತಿಯ ಪರೀಕ್ಷೆಗಳು ಬೆಳಿಗ್ಗೆ 11 ರಿಂದ ಮತ್ತು 12ನೇ ತರಗತಿಯ ಎಲ್ಲಾ ಪತ್ರಿಕೆಗಳನ್ನು ಮಧ್ಯಾಹ್ನ 2 ಗಂಟೆಯಿಂದ ನಡೆಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರ ಪುಸ್ತಕಗಳನ್ನು ಪರೀಕ್ಷೆಗೆ 10 ನಿಮಿಷಗಳ ಮುಂಚಿತವಾಗಿ ಒದಗಿಸಲಾಗುತ್ತದೆ.

ಐಸಿಎಸ್‌ಇ 10ನೇ ತರಗತಿಯ ಇಂಗ್ಲಿಷ್, ಅರ್ಥಶಾಸ್ತ್ರ ಮತ್ತು ಜೀವಶಾಸ್ತ್ರ ಒಳಗೊಂಡ ಪರೀಕ್ಷೆಯು ಒಂದು ಗಂಟೆ ಅವಧಿಯವರೆಗೆ ನಡೆಯಲಿವೆ. ಗಣಿತ ಮತ್ತು ಹಿಂದಿ ಸೇರಿದಂತೆ ಇತರ ಕೆಲವು ಪೇಪರ್‌ಗಳು ಒಂದು ಗಂಟೆ 30 ನಿಮಿಷಗಳ ಕಾಲ ನಡೆಯಲಿವೆ. ಐಎಸ್‌ಸಿ 12 ನೇ ತರಗತಿಯ ಎಲ್ಲಾ ಪೇಪರ್‌ಗಳನ್ನು ಒಂದು ಗಂಟೆ 30 ನಿಮಿಷಗಳ ಅವಧಿಯವರೆಗೆ ನಡೆಸಲಾಗುತ್ತದೆ.

ಸಿಐಎಸ್‌ಸಿಇ 2022ನೇ ಸಾಲಿಗೆ ಬೋರ್ಡ್ ಪರೀಕ್ಷೆಗಳನ್ನು ವಿಭಿನ್ನ ವಿಧಾನದಲ್ಲಿ ನಡೆಸಲು ಯೋಜನೆ ನಡೆಸಿದೆ. ಶೈಕ್ಷಣಿಕ ಅವಧಿಯನ್ನು ಎರಡು ಸೆಮಿಸ್ಟರ್‌ಗಳಾಗಿ ವಿಂಗಡಿಸಲಾಗಿದೆ, ಪ್ರತಿ ಸೆಮಿಸ್ಟರ್‌ನಲ್ಲಿ ಸರಿಸುಮಾರು 50 ಪ್ರತಿಶತದಷ್ಟು ಪಠ್ಯಕ್ರಮವನ್ನು ಒಳಗೊಂಡಿದೆ ಎಂದು ಬೋರ್ಡ್ ಈಗಾಗಲೇ ಹೇಳಿತ್ತು.

ಕೋವಿಡ್-19 ಕಾರಣದಿಂದಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಉಂಟಾಗುವ ಅಡಚಣೆಯ ದೃಷ್ಟಿಯಿಂದ ಮಂಡಳಿಯು ICSE ಮತ್ತು ISC ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಪಠ್ಯಕ್ರಮವನ್ನು ಕಡಿಮೆ ಮಾಡಿದೆ.

ಅಭ್ಯರ್ಥಿಗಳು ಅಧಿಕೃತ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
CISCE released ICSE class 10 and ISC class 12 semester 1 revised exam dates. Here is the details.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X