ಕಾನೂನು ಅಧ್ಯಯನಕ್ಕಾಗಿ ನಡೆಯುವ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ 2021(ಕ್ಲಾಟ್)ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ನಾಳೆಯಿಂದ ಅರ್ಜಿಯನ್ನು ಸಲ್ಲಿಸಬಹುದು.
ದೇಶದ ಪ್ರತಿಷ್ಠಿತ 22 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ (ಎನ್ಎಲ್ಯು) 5 ವರ್ಷದ ಇಂಟಿಗ್ರೇಟೆಡ್ ಕಾನೂನು ಪದವಿ ಮತ್ತು ಸ್ನಾತಕೋತ್ತರ ಪದವಿ (ಎಲ್ಎಲ್ಎಂ) ಕೋರ್ಸ್ಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 31,2021 ಕೊನೆಯ ದಿನವಾಗಿರುತ್ತದೆ. ಕ್ಲಾಟ್ 2021 ಪರೀಕ್ಷೆಯು ಮೇ 9,2021ರಂದು ನಡೆಯಲಿದೆ.
ವಿದ್ಯಾರ್ಹತೆ:
ಯು ಜಿ ಕೋರ್ಸ್ ಗೆ ಪ್ರವೇಶ ಪಡೆಯಲು ಅಭ್ಯರ್ಥಿಗಳು ಹನ್ನೆರಡನೇ ತರಗತಿ ಉತ್ತೀರ್ಣರಾಗಿರಬೇಕು. ಪಿ ಜಿ ಕೋರ್ಸಿಗೆ ಅಭ್ಯರ್ಥಿಗಳು ಎಲ್ ಎಲ್ ಬಿ/ಐದು ವರ್ಷದ ಇಂಟಿಗ್ರೇಟೆಡ್ ಎಲ್ ಎಲ್ ಬಿ (ಹಾನರ್ಸ್) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಕ್ಲಾಟ್ ಪರೀಕ್ಷೆಗೆ ಯಾವುದೇ ವಯಸ್ಸಿನ ಮಿತಿ ಇಲ್ಲ.
ಅರ್ಜಿ ಶುಲ್ಕ:
ಕ್ಲಾಟ್ 2021 ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 4,000/-ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ. ಪ.ಜಾ,ಪ.ಪಂ, ಓಬಿಸಿ ಮತ್ತು ಬಿಪಿಎಲ್ ಅಭ್ಯರ್ಥಿಗಳು 3,500/-ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ.
ಸೀಟು ಹಂಚಿಕೆ:
ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳ ಸೀಟು ಹಂಚಿಕೆ ನಡೆಯುತ್ತದೆ. ಮುಖ್ಯವಾಗಿ ವಿದ್ಯಾರ್ಥಿಗಳು ಈ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಮೇಲೆ ತಮ್ಮದೇ ಆದ ಕಾನೂನು ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://consortiumofnlus.ac.in/ ಗೆ ಭೇಟಿ ನೀಡಿ.