CLAT 2022 - 2023 Exam Dates : ಕ್ಲ್ಯಾಟ್ ಪರೀಕ್ಷಾ ದಿನಾಂಕಗಳು ರಿಲೀಸ್

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು 2022 ಮತ್ತು 2023ನೇ ಸಾಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಗಳ (CLAT) ದಿನಾಂಕಗಳನ್ನು ಪ್ರಕಟ ಮಾಡಿದೆ. CLAT/ಕ್ಲ್ಯಾಟ್ 2022 ಪರೀಕ್ಷೆಯನ್ನು ಮೇ 8 ರಂದು ಮತ್ತು CLAT/ಕ್ಲ್ಯಾಟ್ 2023 ಪರೀಕ್ಷೆಯನ್ನು ಡಿಸೆಂಬರ್ 18 ರಂದು ನಡೆಸುವುದಾಗಿ ಹೇಳಿದೆ.

 
ಕ್ಲ್ಯಾಟ್ 2022-2023 ಪರೀಕ್ಷಾ ದಿನಾಂಕಗಳು ಪ್ರಕಟ

ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆ ಇದಾಗಿದ್ದು, ದೇಶದ ಪ್ರತಿಷ್ಠಿತ 22 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ (ಎನ್ಎಲ್ಯು) 5 ವರ್ಷದ LLB ಮತ್ತು LLM ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಪ್ರಸಕ್ತ ಸಾಲಿನಲ್ಲಿ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (CLAT) ಪೆನ್-ಪೇಪರ್ ಮೋಡ್ ನಲ್ಲಿ ಅಂದರೆ ಆಫ್‌ಲೈನ್ ಮೋಡ್‌ನಲ್ಲಿ ನಡೆಯಲಿದೆ. CLAT ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರಬೇಕು.

CLAT ಎರಡು ಗಂಟೆಗಳ ಸುದೀರ್ಘ ಪರೀಕ್ಷೆಯಾಗಿದ್ದು, ಒಟ್ಟು 150 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪದವಿಪೂರ್ವ ಮತ್ತು ಸ್ನಾತಕೋತ್ತರ ಹಂತದ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 40 ಅಂಕಗಳನ್ನು ಪಡೆಯಬೇಕಿರುತ್ತದೆ. . ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳಿಗೆ ಕಟ್-ಆಫ್ ನಿಯಮಗಳ ಪ್ರಕಾರ ಶೇಕಡಾ 35 ಅಂಕಗಳನ್ನು ಪಡೆಯಬೇಕಿರುತ್ತದೆ.

ಒಕ್ಕೂಟವು 2022ನೇ ಸಾಲಿಗೆ ಎರಡು ಪರೀಕ್ಷೆಗಳನ್ನು ನಿಗದಿಪಡಿಸಿದೆ. ಇದರಿಂದಾಗಿ CLAT/ಕ್ಲ್ಯಾಟ್ ಕೌನ್ಸೆಲಿಂಗ್ ಶುಲ್ಕವನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 50,000/- ರಿಂದ 30,0000/- ರೂಗಳು ಮತ್ತು ಮೀಸಲಾತಿಯುಳ್ಳ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಶುಲ್ಕವನ್ನು 20,000/- ರೂ ಗೆ ಇಳಿಕೆ ಮಾಡಲಾಗಿದೆ.

"CLAT/ಕ್ಲ್ಯಾಟ್-2022 ಪರೀಕ್ಷೆಯು ಮೇ 8, 2022 ರಂದು ಮತ್ತು CLAT-2023 ಪರೀಕ್ಷೆಯು ಡಿಸೆಂಬರ್ 18, 2022 ರಂದು ನಡೆಸಲು ಒಕ್ಕೂಟವು ನಿರ್ಧರಿಸಿದೆ. ಆದ್ದರಿಂದ 2022 ರಲ್ಲಿ ಒಂದು ವರ್ಷದಲ್ಲಿ ಎರಡು CLAT ಪರೀಕ್ಷೆಗಳನ್ನು ನಡೆಸಲಾಗುವುದು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಶುಲ್ಕವನ್ನು 50,000/- ರಿಂದ ರೂ.30,000/- ಗೆ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಓಬಿಸಿ/ಆರ್ಥಿಕವಾಗಿ ಹಿಂದುಳಿದ/ಅಂಗವಿಕಲ ಮತ್ತು ಇತರ ಮೀಸಲಾತಿಯುಳ್ಳ ವಿದ್ಯಾರ್ಥಿಗಳಿಗೆ Rs.20,000/- ರೂ ಗೆ ಇಳಿಸಲು ಒಕ್ಕೂಟವು ನಿರ್ಧರಿಸಿತು." ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

 

ಕ್ಲ್ಯಾಟ್ ಪರೀಕ್ಷೆಯ ಅರ್ಜಿಗೆ ಸಂಬಂಧಿಸಿದಂತೆ ಅರ್ಜಿ ನಮೂನೆಯನ್ನು ಶೀಘ್ರದಲ್ಲೇ ಅಧಿಕೃತ ವೆಬ್‌ಸೈಟ್ https://consortiumofnlus.ac.in/ ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
The Consortium of National Law Universities has announced the Common Law Admission Test (CLAT) dates for the 2022 and 2023 exams.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X