ಕಾಮೆಡ್ ಕೆ 2018: ಅರ್ಜಿ ಸಲ್ಲಿಕೆ ಪ್ರಾರಂಭ

ಕರ್ನಾಟಕದಲ್ಲಿರುವ ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ ಶಿಕ್ಷಣ ತೆಗೆದುಕೊಳ್ಳುವವರಿಗಾಗಿ ಕಾಮೆಡ್ ಕೆ ಪ್ರವೇಶ ಪರೀಕ್ಷೆ ನಡೆಸಲಾಗುವುದು. 181 ಕಾಲೇಜುಗಳ 20,000 ಸೀಟುಗಳನ್ನು ಮೆರಿಟ್ ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು.

ಕರ್ನಾಟಕದಲ್ಲಿರುವ ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ ಶಿಕ್ಷಣ ತೆಗೆದುಕೊಳ್ಳುವವರಿಗಾಗಿ ನಡೆಸುವ ಕಾಮೆಡ್ ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ.

ಪಿಯುಸಿ ನಂತರ ಖಾಸಗಿ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಸೇರ ಬಯಸುವವರು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದ್ದು, ಏಪ್ರಿಲ್ 19 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಕಾಮೆಡ್ ಕೆ 2018

ಈ ಬಾರಿ ಪರೀಕ್ಷೆಯು ಮೇ 13 ರಂದು ನಡೆಯಲಿದ್ದು, ಒಟ್ಟು 290 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವುದು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 16-01-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-04-2018
ಪ್ರವೇಶ ಪತ್ರ ಪ್ರಕಟಿಸುವ ದಿನಾಂಕ: 04-05-2018
ಪ್ರವೇಶ ಪತ್ರ ಡೌನ್ಲೋಡ್ ಮಾಡಲು ಕೊನೆಯ ದಿನಾಂಕ: 12-05-2018
ಪರೀಕ್ಷೆ ನಡೆಯುವ ದಿನಾಂಕ: 13-05-2018

ಪರೀಕ್ಷೆ ತೆಗೆದುಕೊಳ್ಳಲು ಬೇಕಾದ ಅರ್ಹತೆ

ಭಾರತೀಯ ಅಭ್ಯರ್ಥಿಗಳು ಈ ಪರೀಕ್ಷೆಗೆ ಅರ್ಹರಾಗಿರುತ್ತಾರೆ

ಇಂಜಿನಿಯರಿಂಗ್ ಬಯಸುವವರು

  1. ರಾಜ್ಯ ಅಥವಾ ಕೇಂದ್ರ ಶಿಕ್ಷಣ ಪ್ರಾಧಿಕಾರದಿಂದ ಮಾನ್ಯತೆ ಪಡೆದ ಪಿಯುಸಿ ಅಥವಾ ಅದಕ್ಕೆ ಸಮಾನ ಶಿಕ್ಷಣ ಪಡೆದವರು ಅರ್ಹರಾಗಿರುತ್ತಾರೆ. ಹನ್ನೆರಡನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ವಿಷಯಗಳನ್ನು ಕಡ್ಡಾಯವಾಗಿ ಓದಿರಬೇಕು.
  2. ಹನ್ನೆರಡನೇ ತರಗತಿಯಲ್ಲಿ ಸಾಮಾನ್ಯ ಅಭ್ಯರ್ಥಿಗಳು ಶೇ.45 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಎಸ್.ಸಿ/ಎಸ್.ಟಿ/ಒಬಿಸಿ ಗೆ ಒಳಪಡುವವರು ಶೇ.40 ಅಂಕಗಳನ್ನು ಪಡೆದಿರಬೇಕು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ವಿಷಯಗಳ ಅಂಕಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುವುದು.
  3. ಡಿಪ್ಲೋಮ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಪ್ರವೇಶ ಇರುವುದಿಲ್ಲ.

ವಾಸ್ತುಶಿಲ್ಪಶಾಸ್ತ್ರ ಕೋರ್ಸು ಬಯಸುವವರು

  1. ರಾಜ್ಯ ಅಥವಾ ಕೇಂದ್ರ ಶಿಕ್ಷಣ ಪ್ರಾಧಿಕಾರದಿಂದ ಮಾನ್ಯತೆ ಪಡೆದ ಪಿಯುಸಿ ಅಥವಾ ಅದಕ್ಕೆ ಸಮಾನ ಶಿಕ್ಷಣ ಪಡೆದವರು ಅರ್ಹರಾಗಿರುತ್ತಾರೆ. ಹನ್ನೆರಡನೇ ತರಗತಿಯಲ್ಲಿ ಗಣಿತ ವಿಷಯ ಕಡ್ಡಾಯವಾಗಿ ಓದಿರಬೇಕು ಅಥವಾ ಡಿಪ್ಲೋಮ ಪದವಿಯಲ್ಲಿ ಕನಿಷ್ಠ ಶೇ.50 ಅಂಕಗಳನ್ನೂ ಪಡೆದಿರಬೇಕು. (ಎಸ್.ಸಿ/ಎಸ್.ಟಿ/ಒಬಿಸಿ ಗೆ ಒಳಪಡುವವರು ಶೇ.45)
  2. ಸಾಮಾನ್ಯ ಮತ್ತು ಎಸ್.ಸಿ/ಎಸ್.ಟಿ/ಒಬಿಸಿ ಗೆ ಒಳಪಡುವ ಅಭ್ಯರ್ಥಿಗಳು ನವದೆಹಲಿಯ ಆರ್ಕಿಟೆಕ್ಚರ್ ಮಂಡಳಿಯಿಂದ ಆಯೋಜಿಸುವ ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ (NATA) ದಲ್ಲಿ 200 ಕ್ಕೆ ಕನಿಷ್ಠ 80 ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿರಬೇಕಾಗುತ್ತದೆ.
  3. ವಾಸ್ತುಶಿಲ್ಪಶಾಸ್ತ್ರ ಕೋರ್ಸು ಸೇರ ಬಯಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಪ್ರವೇಶ ಪರೀಕ್ಷೆಗಳು ಇರುವುದಿಲ್ಲ.
  4. ವಾಸ್ತುಶಿಲ್ಪಶಾಸ್ತ್ರ ಕೋರ್ಸು ಸೇರ ಬಯಸುವವರು ವೆಬ್ಸೈಟ್ ನಲ್ಲಿ ಲಭ್ಯವಿರುವ ಪ್ರತ್ಯೇಕ ಫಾರ್ಮ್ ತುಂಬಬೇಕು.

ಸೂಚನೆ

1. ದಾಖಲಾತಿಗೆ ಅರ್ಹರಾದ ಅಭ್ಯರ್ಥಿಗಳಿಗಷ್ಟೇ ರ್ಯಾಂಕ್ ಕಾರ್ಡ್ ನೀಡಲಾಗುವುದು
2. ಕೋರ್ಸುಗಳು ಎಐಸಿಟಿಇ/ ವಿಟಿಯು ನಿಯಮಾನುಸಾರ ಇರುವುದು.

ಕಾಮೆಡ್ ಕೆ ಎಂದರೆ

ಕರ್ನಾಟಕ ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಎಂಜಿನಿಯರ್‌ ಕಾಲೇಜುಗಳ ಸಂಘ (ಕಾಮೆಡ್‌-ಕೆ), ರಾಜ್ಯದಲ್ಲಿರುವ 181 ಕ್ಕೂ ಹೆಚ್ಚಿನ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಕರ್ನಾಟಕ ಖಾಸಗಿ ವೈದ್ಯಕೀಯ, ದಂತವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಸಂಘ (ಕಾಮೆಡ್-ಕೆ) ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುತ್ತದೆ.

ಈ ಹಿಂದೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೂ ಇದೇ ಸಂದರ್ಭದಲ್ಲಿ ಪ್ರವೇಶ ಪರೀಕ್ಷೆ ನಡೆಯುತ್ತಿತ್ತು. ಆದರೆ, ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ಕಡ್ಡಾಯ ಮಾಡಿರುವುದರಿಂದ ಕಾಮೆಡ್‌-ಕೆ ಪರೀಕ್ಷೆ ನಡೆಸುತ್ತಿಲ್ಲ. ಕಾಮೆಡ್‌-ಕೆ ಪರೀಕ್ಷೆ ಸಂಪೂರ್ಣ ಕಂಪ್ಯೂಟರೀಕೃತವಾಗಿ ನಡೆಯುತ್ತದೆ. ದೇಶದಾದ್ಯಂತ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಆಯಾ ರಾಜ್ಯದ ವಿದ್ಯಾರ್ಥಿಗಳು ಅಲ್ಲಿಯೇ ಪರೀಕ್ಷೆ ಬರೆಯಬಹುದು.

ಕರ್ನಾಟಕದಲ್ಲಿರುವ ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ ಶಿಕ್ಷಣ ತೆಗೆದುಕೊಳ್ಳುವವರಿಗಾಗಿ ಕಾಮೆಡ್ ಕೆ ಪ್ರವೇಶ ಪರೀಕ್ಷೆ ನಡೆಸಲಾಗುವುದು. 181 ಕಾಲೇಜುಗಳ 20,000 ಸೀಟುಗಳನ್ನು ಮೆರಿಟ್ ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು.

ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌ www.comedk.org ವೀಕ್ಷಿಸಿ

For Quick Alerts
ALLOW NOTIFICATIONS  
For Daily Alerts

English summary
COMEDK UGET 2018 Application Form has been released on 16th January 2018. The exam is managed by the Consortium of Medical, Engineering and Dental of Karnataka (COMEDK).
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X