COMEDK UGET 2022 Registration : ಕಾಮೆಡ್‌ಕೆ ಯುಜಿಇಟಿ 2022 ಪರೀಕ್ಷೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ (COMEDK) ಯುಜಿಇಟಿ, ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನದ ಸದಸ್ಯ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸಲಾಗುವ ಆನ್‌ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆ ಇದಾಗಿದೆ. ಈ ಪ್ರವೇಶ ಪರೀಕ್ಷೆಯು ಜೂನ್ 19,2022ರಂದುನಡೆಯಲಿದ್ದು, ನೊಂದಣಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿರುತ್ತದೆ. ಇದೀಗ ಅರ್ಜಿ ಸಲ್ಲಿಕೆಯ ಅವಧಿಯನ್ನು ಮೇ 14ರ ವರೆಗೆ ವಿಸ್ತರಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಈ ಕೂಡಲೇ ನೊಂದಾಯಿಸಿಕೊಳ್ಳಬಹುದು.

ಕಾಮೆಡ್‌ಕೆ ಯುಜಿಇಟಿ 2022 ಪರೀಕ್ಷೆಗೆ ಅರ್ಜಿ ಆಹ್ವಾನ

ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನ ಟ್ರಸ್ಟ್‌ಗೆ ಸಂಯೋಜಿತವಾಗಿರುವ ಕಾಲೇಜುಗಳು ಮತ್ತು COMEDK UGET ಸದಸ್ಯ ಸಂಸ್ಥೆಗಳು ಅಥವಾ Uni-GAUGE-E ಅಡಿಯಲ್ಲಿ ಭಾಗವಹಿಸುವ ಕಾಲೇಜುಗಳು ಪ್ರವೇಶ ಪರೀಕ್ಷೆಯನ್ನು ಪರಿಗಣಿಸುತ್ತವೆ. COMEDK UGET ಪರೀಕ್ಷೆಯನ್ನು ಜೂನ್ 19 ರಂದು ನಿಗದಿಪಡಿಸಲಾಗಿದ್ದು, COMEDK ಅರ್ಜಿ ನಮೂನೆ ಸಲ್ಲಿಕೆಗೆ ಮತ್ತು ಆನ್‌ಲೈನ್ ಶುಲ್ಕ ಪಾವತಿಗಳಿಗೆ ಮೇ 14,2022 ರಂದು ಕೊನೆಯ ದಿನಾಂಕವಾಗಿದೆ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು. ಅರ್ಜಿ ತಿದ್ದುಪಡಿಗೆ ಮೇ 17 ರಿಂದ 19ರ ವರೆಗೆ ಕಾಲಾವಕಾಶ ನೀಡಲಾಗಿರುತ್ತದೆ.

ಕಾಮೆಡ್‌-ಕೆ - Uni-GAUGE, ಭಾರತದಲ್ಲಿ ಎರಡನೇ ಅತಿದೊಡ್ಡ ಬಹು-ವಿವಿಗಳ ಖಾಸಗಿ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾಗಿದೆ. 180 ಶಿಕ್ಷಣ ಸಂಸ್ಥೆಗಳು ಮತ್ತು 30 ಕ್ಕೂ ಹೆಚ್ಚು ವಿವಿಗಳು ಈ ಪರೀಕ್ಷೆಯ ಸ್ಕೋರ್‌ ಅನ್ನು ಪ್ರವೇಶಾತಿಗೆ ಪರಿಗಣಿಸುತ್ತವೆ. ಕರ್ನಾಟಕದ 190 ಇಂಜಿನಿಯರಿಂಗ್ ಕಾಲೇಜುಗಳಲ್ಲಿ 20 ಸಾವಿರ ಇಂಜಿನಿಯರಿಂಗ್‌ ಸೀಟುಗಳನ್ನು ಕಾಮೆಡ್‌ಕೆ ಪ್ರವೇಶ ಪರೀಕ್ಷೆ ಸ್ಕೋರ್‌ ಮೂಲಕ ನೀಡಲಾಗುತ್ತದೆ.

ಕಾಮೆಡ್‌ಕೆ ಯುಜಿಇಟಿ 2022 ಪರೀಕ್ಷೆಗೆ ಅರ್ಜಿ ಆಹ್ವಾನ

ಪರೀಕ್ಷಾ ಮಾದರಿ :

COMEDK UGET-2022ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)ಇದಾಗಿದ್ದು, ಆನ್‌ಲೈನ್ ಮೋಡ್‌ನಲ್ಲಿ ಮಾತ್ರ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕಾಮೆಡ್‌ಕೆ ನ ಸದಸ್ಯ ಸಂಸ್ಥೆಗಳಲ್ಲಿ ಬಿಇ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಯಸುವ ಎಲ್ಲಾ ಅಭ್ಯರ್ಥಿಗಳಿಗೆ ಈ ಪರೀಕ್ಷೆ ಕಡ್ಡಾಯವಾಗಿದೆ.

ಪ್ರವೇಶ ಪರೀಕ್ಷೆಯು 10+2 /11 ನೇ ಮತ್ತು 12 ನೇ ಎಸ್‌ಟಿಡಿ / 1 ನೇ ಮತ್ತು 2 ನೇ ಪಿಯುಸಿಯ ಪ್ರಸ್ತುತ ಪಠ್ಯಕ್ರಮವನ್ನು ಒಳಗೊಂಡಿರುತ್ತದೆ. 180 ಬಹು ಆಯ್ಕೆ ಪ್ರಶ್ನೆಗಳು ಅಂದರೆ ಪ್ರತಿ ವಿಷಯಕ್ಕೆ 60 ಪ್ರಶ್ನೆಗಳು-ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಇರುತ್ತದೆ. ಪ್ರತಿ ಸರಿಯಾದ ಉತ್ತರಕ್ಕೆ ಒಂದು ಅಂಕವನ್ನು ನೀಡಲಾಗುತ್ತದೆ ಮತ್ತು ಪ್ರತಿ ತಪ್ಪು ಉತ್ತರಕ್ಕೆ ಯಾವುದೇ ಋಣಾತ್ಮಕ ಅಂಕಗಳು ಇರುವುದಿಲ್ಲ. ಒಟ್ಟಾರೆ 3 ಗಂಟೆ ಅವಧಿಯ ಪರೀಕ್ಷೆ ಇದಾಗಿದೆ.

ಕಾಮೆಡ್‌ಕೆ ಯುಜಿಇಟಿ 2022 ಪರೀಕ್ಷೆಗೆ ಅರ್ಜಿ ಆಹ್ವಾನ

COMEDK UGET 2022 ಅರ್ಜಿ ಸಲ್ಲಿಸುವುದು ಹೇಗೆ ? :

ಸ್ಟೆಪ್ 1 : ಅಧಿಕೃತ ವೆಬ್‌ಸೈಟ್‌ comedk.org. ಗೆ ಭೇಟಿ ನೀಡಿ
ಸ್ಟೆಪ್ 2 : ಹೋಂ ಪೇಜ್ ನಲ್ಲಿ 'COMEDK UGET 2022 ನೋಂದಣಿ' ಲಿಂಕ್ ಅನ್ನು ಕ್ಲಿಕ್ ಮಾಡಿ.
ಸ್ಟೆಪ್ 3 : ನೋಂದಣಿ/ಲಾಗಿನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 4 : ಬಳಕೆದಾರರು ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ.
ಸ್ಟೆಪ್ 5 : COMEDK UGET ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಸ್ಟೆಪ್ 6 : ಅರ್ಜಿ ನಮೂನೆಗೆ ಅಗತ್ಯವಾದ ಪರೀಕ್ಷಾ ಶುಲ್ಕವನ್ನು ಪಾವತಿಸಿ.
ಸ್ಟೆಪ್ 7 : ಫಾರ್ಮ್ ಅನ್ನು ಸಲ್ಲಿಸಿದ ನಂತರ ಡೌನ್‌ಲೋಡ್ ಮಾಡಿ ಪ್ರಿಂಟೌಟ್‌ ತೆಗೆದುಕೊಳ್ಳಿ

ಅಭ್ಯರ್ಥಿಗಳು ನೇರವಾಗಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
Consortium of medical, engineering and dental colleges of karnataka has extended online registration process for the COMEDK UGET 2022.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X