ಡಿಪ್ಲೊಮಾಧಾರಕರಿಗೆ 2017-18ನೇ ಸಾಲಿನ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೂಚನೆ ಹೊರಡಿಸಿದೆ.
2012-13ನೇ ಸಾಲಿನಿಂದ ಡಿಪ್ಲೊಮಾಧಾರಕರಿಗೆ ಲ್ಯಾಟರಲ್ ಪ್ರವೇಶ ಯೋಜನೆಯಡಿಯಲ್ಲಿ ಹಗಲು ಮತ್ತು ಸಂಜೆ ಇಂಜಿನಿಯರಿಂಗ್ ಕಾಲೇಜುಗಳಿಗೆ 2ನೇ ವರ್ಷದ ಅಥವಾ 3 ನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಆದೇಶ ನೀಡಿದೆ.
ಈ ಆದೇಶದನ್ವಯ ಡಿಪ್ಲೊಮಾಧಾರಕರಿಂದ 2017ನೇ ಸಾಲಿಗೆ 2ನೇ ವರ್ಷದ ಅಥವಾ 3ನೇ ಸೆಮಿಸ್ಟರ್ ನ ಇಂಜಿನಿಯರಿಂಗ್ ಕೋರ್ಸುಗಳಿಗೆ ಲ್ಯಾಟರಲ್ ಪ್ರವೇಶ ಯೋಜನೆಯಡಿಯಲ್ಲಿ ಹಗಲು ಮತ್ತು ಸಂಜೆ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು, ಈ ಕೋರ್ಸ್ ಗಳ ಪ್ರವೇಶಕ್ಕೆ ಅರ್ಹತೆ ಪಡೆಯಲು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ 2017 ರ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗಬೇಕು. ವಾಸ್ತಶಿಲ್ಪ ಪ್ರವೇಶಕ್ಕೆ ಕೌನ್ಸಿಲ್ ಆಫ್ ಆರ್ಕಿಟಿಕ್ವರ್ ನವರು ನಡೆಸುವ NATA ಪರೀಕ್ಷೆಗೆ ಹಾಜರಾಗಿ ಅರ್ಹ ಅಂಕಗಳನ್ನು ಗಳಿಸಬೇಕು ಮತ್ತು ಕಡ್ಡಾಯವಾಗಿ ಆನ್-ಲೈನ್ ಮೂಲಕ ಅರ್ಜಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು
- ಆನ್-ಲೈನ್ ಮೂಲಕ ಅರ್ಜಿಸಲ್ಲಿಸಲು ಪ್ರಾರಂಭಿಕ ದಿನ: 17-05-2017 ಸಂಜೆ 4:00 ರಿಂದ
- ಆನ್-ಲೈನ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ: 01-06-2017 ಸಂಜೆ 5:30 ರವರೆಗೆ
- ಬ್ಯಾಂಕುಗಳಲ್ಲಿ ಶುಲ್ಕ ಪಾವತಿ ಮಾಡಲು ಕೊನೆಯ ದಿನ: 02-06-2017 (ಬ್ಯಾಂಕ್ ವೇಳೆಯಲ್ಲಿ)
- ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳವ ದಿನಾಂಕ: 20-06-2017 ರ ನಂತರ
ಸೂಚನೆ
- ಬ್ಯಾಂಕಿನಿಂದ ಶುಲ್ಕ ಪಾವತಿಸಿದ ಬಗ್ಗೆ ಖಚಿತ ಮಾಹಿತಿ ಬಂದ ನಂತರವೇ ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು.
- ಅಭ್ಯರ್ಥಿಗಳು ಆನ್-ಲೈನ್ ಮೂಲಕ ಡಿಪ್ಲೊಮಾ ಸಿಇಟಿ-2017ಕ್ಕೆ ದಾಖಲಿಸಿದ ಎಲ್ಲಾ ಮಾಹಿತಿಗಳನ್ನು ಅಂತಿಮ ಎಂದು ಪರಿಗಣಿಸಲಾಗುವುದು ಮತ್ತು ಈ ಮಾಹಿತಿಯೇ ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ಆಧಾರವಾಗಿರುತ್ತದೆ ಹಾಗೂ ಯಾವುದೇ ಕಾರಣಕ್ಕೂ ದಾಖಲಿಸಿದ ಮಾಹಿತಿಯನ್ನು ಬದಲಾಯಿಸಲು ಅವಕಾಶವಿರುವುದಿಲ್ಲ.
ಡಿಪ್ಲೊಮಾ ಸಿಇಟಿ-2017 ರ ಅರ್ಜಿ ನಮೂನೆಯಲ್ಲಿ ಜಾತಿ/ವರ್ಗ ಮತ್ತು ವಾರ್ಷಿಕ ಆದಾಯದ ಬಗ್ಗೆ ಒದಗಿಸಿರುವ ಮಾಹಿತಿಯು ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡುವುದಕ್ಕೆ/ ಸೀಟು ಆಯ್ಕೆ ಮಾಡುವುದಕ್ಕೆ ಪರಿಗಣಿಸಲಾಗುವುದು ಮತ್ತು ಯಾವುದೇ ಕಾರಣಕ್ಕು ಬದಲಾಯಿಸಲು ಅವಕಾಶವಿರುವುದಿಲ್ಲ.
2017ರ ಡಿಪ್ಲೊಮಾ ಪ್ರವೇಶ ಪರೀಕ್ಷೆಯ ವೇಳಾಪಟ್ಟಿ
| ದಿನಾಂಕ | ಸಮಯ | ವಿಷಯ | ಅಂಕಗಳು |
| 02-07-2017 | ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ | ಆಯಾ ವಿಷಯಗಳಿಗೆ | 180 |
| ಮಧ್ಯಾಹ್ನ 3:00 ರಿಂದ 4:00 ಗಂಟೆಯವರೆಗೆ | ಕನ್ನಡ ಭಾಷಾ ಪರೀಕ್ಷೆ (ಹೊರನಾಡು ಮತ್ತ ಗಡಿನಾಡು ಕನ್ನಡಿಗರಿಗೆ) | 50 |
ಹೆಚ್ಚಿನ ಮಾಹಿತಿಗಾಗಿ ಪ್ರಾಧಿಕಾರದ ವೆಬ್ಸೈಟ್ kea.kar.nic.in ಗಮನಿಸಿ


Click it and Unblock the Notifications











