ದ್ವಿತೀಯ ಪಿಯುಸಿ: ಪರೀಕ್ಷಾ ಶುಲ್ಕ ಸಂದಾಯ ಮಾಡಲು ದಿನಾಂಕ ವಿಸ್ತರಣೆ

Posted By:

2018 ರ ಮಾರ್ಚ್ ನಲ್ಲಿ ನಡೆಸಲಾಗುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಿಗೆ ರಿಪೀಟರ್ ಅಭ್ಯರ್ಥಿಗಳು ಪರೀಕ್ಷಾ ಶುಲ್ಕ ಸಂದಾಯ ಮಾಡಲು ದಿನಾಂಕ ವಿಸ್ತರಿಸಲಾಗಿದೆ.

ಈ ಹಿಂದೆ ದಿನಾಂಕ 26-10-2017 ರವರೆಗೂ ಮಾತ್ರ ದಂಡಶುಲ್ಕ ಸಹಿತ ಪರೀಕ್ಷಾ ಶುಲ್ಕ ಕಟ್ಟಲು ಅವಕಾಶ ಕಲ್ಪಿಸಲಾಗಿತ್ತು.

ಇದನ್ನು ಗಮನಿಸಿ: ದ್ವಿತೀಯ ಪಿಯುಸಿ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ

ಪರೀಕ್ಷಾ ಶುಲ್ಕ ಸಂದಾಯ ಮಾಡಲು ದಿನಾಂಕ ವಿಸ್ತರಣೆ

ನಿಗದಿತ ದಿನಾಂಕದೊಳಗೆ ಪರೀಕ್ಷಾ ಶುಲ್ಕ ಪಾವತಿಸದ ವಿದ್ಯಾರ್ಥಿಗಳು ಹಾಗು ವಿದ್ಯಾರ್ಥಿಗಳ ಪೋಷಕರು ಸದರಿ ಪರೀಕ್ಷೆಗೆ ಪರೀಕ್ಷಾ ಶುಲ್ಕ ಸಂದಾಯ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕೋರಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿನಾಂಕ ವನ್ನು ವಿಸ್ತರಿಸಲಾಗಿದೆ.

ಸದರಿ ಪರೀಕ್ಷೆಗಳಿಗೆ ಪರೀಕ್ಷಾ ಶುಲ್ಕ ಸಂದಾಯ ಮಾಡಲು ದಿನಾಂಕ 31-10-2017 ರವರೆಗೆ ದಂಡ ಶುಲ್ಕ ಮತ್ತು ವಿಶೇಷ ದಂಡ ಶುಲ್ಕ ರೂ.1360/- ಹಾಗು ಸಲ್ಲುವ ಪರೀಕ್ಷಾ ಶುಲ್ಕಗಳೊಂದಿಗೆ ವಿಶೇಷ ಕಾಲಾವಕಾಶ ಕಲ್ಪಿಸಿ ಕೊಡಲಾಗಿದೆ.

ರಿಪೇಟರ್ಸ್ ಜೊತೆಗೆ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಂಡು ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೂ 31-10-2017 ಕೊನೆಯ ದಿನವಾಗಿದೆ.

ಶುಲ್ಕದ ವಿವರ

ಪುನರಾವರ್ತಿತ (ರಿಪೀಟರ್ಸ್)
ದಂಡ ಶುಲ್ಕ ರೂ.360/- + ವಿಶೇಷ ಶುಲ್ಕ ರೂ.1000/- ಸೇರಿ ಒಟ್ಟು ರೂ.1360/-

ಖಾಸಗಿ ಅಭ್ಯರ್ಥಿಗಳಿಗೆ
ದಂಡ ಶುಲ್ಕ ರೂ.360/- + ವಿಶೇಷ ಶುಲ್ಕ ರೂ.500/- ಸೇರಿ ಒಟ್ಟು ರೂ.860/-

ಪ್ರಮುಖ ದಿನಾಂಕಗಳು

  • ದಂಡ ಸಹಿತ ಪರೀಕ್ಷಾ ಶುಲ್ಕ ಪಾವತಿಸುವ ಕಡೆಯ ದಿನಾಂಕ: 31-10-2017
  • ಅಭ್ಯರ್ಥಿಗಳ ಶುಲ್ಕವನ್ನು ಖಜಾನೆಗೆ ಸಂದಾಯ ಮಾಡುವ ದಿನಾಂಕ: 02-11-2017
  • ಅರ್ಜಿಗಳನ್ನು ಉಪನಿರ್ದೇಶಕರ ಕಚೇರಿಗೆ ಸಲ್ಲಿಸುವ ದಿನಾಂಕ: 04-11-2017
  • ಸ್ವೀಕರಿಸಿದ ಅರ್ಜಿಗಳನ್ನು ಕೇಂದ್ರ ಕಚೇರಿಗೆ ತಲುಪಿಸುವ ದಿನಾಂಕ: 07-11-2017

ಸದರಿ ಪರೀಕ್ಷೆಗಳಿಗೆ ರಿಪೀಟರ್ ಅಭ್ಯರ್ಥಿಗಳು ಪರೀಕ್ಷಾ ಶುಲ್ಕ ಸಲ್ಲಿಸಲು ಇದೆ ಕೊನೆಯ ಅವಕಾಶವಾಗಿದ್ದು, ಈ ಕಾಲಾವಕಾಶವನ್ನು ಯಾವುದೇ ಕಾರಣಕ್ಕೆ ಮುಂದೂಡಲಾಗುವುದಿಲ್ಲ ಎಂದು ಸೂಚಿಸಲಾಗಿದೆ.

English summary
Date Extension for Enrollment of repeaters and Private Candidates for 2017-18 2nd PUC Annual Exam upto 31/10/2017

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia