ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) 2017'ರ ಪ್ರವೇಶ ಪತ್ರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಭ್ಯ ಇದೆ. ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಿಂದ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಮೇ ತಿಂಗಳಲ್ಲಿ ಸಿಇಟಿ ಪರೀಕ್ಷೆಗಳು ನಡೆಯಲಿದ್ದು ಪ್ರವೇಶ ಪತ್ರಗಳನ್ನು ಏಪ್ರಿಲ್ 26 ರ ಒಳಗೆ ಡೌನ್ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ.
ಡೌನ್ಲೋಡ್ ಮಾಡಿಕೊಳ್ಳುವ ವಿಧಾನ
- ಕರ್ನಾಟಕ ಪರೀಕ್ಷಾ ಪ್ರಾಧಿಕಾರ 'ಕೆಇಎ' ವೆಬ್ಸೈಟ್ ಗೆ ಭೇಟಿ ನೀಡಿ
- ಬಲಭಾಗದಲ್ಲಿ ಕಾಣುವ ಸಿಇಟಿ 2017 ಕ್ಲಿಕ್ ಮಾಡಿ
- 'CET-2017 Download Hall Ticket' ಕ್ಲಿಕ್ ಮಾಡಿ
- ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸಿ
- ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಿ

ಕೊನೆಯ ದಿನ
ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಏಪ್ರಿಲ್ 26, 2017 ಕೊನೆಯ ದಿನವಾಗಿರುತ್ತದೆ. ಅಭ್ಯರ್ಥಿಗಳು ಏಪ್ರಿಲ್ 26 ರ ಒಳಗಾಗಿ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಸೂಚಿಸಿದೆ.
ಕೆಇಎ ವೆಬ್ಸೈಟ್ ವಿಳಾಸ kea.kar.nic.in
ಸಿ ಇ ಟಿ 2017
ಈ ಬಾರಿಯ ಸಿಇಟಿ ಕೇವಲ ತಾಂತ್ರಿಕ ಶಿಕ್ಷಣ ಮತ್ತು ಕೃಷಿ ವಿಜ್ಞಾನಗಳಿಗಷ್ಟೇ ನಡೆಯಲಿದೆ.
ಇದನ್ನು ಗಮನಿಸಿ: ಕೆಸಿಇಟಿ ಪರೀಕ್ಷಾ ವಿಧಾನ, ವೇಳಾಪಟ್ಟಿ ಮತ್ತು ಪಠ್ಯಕ್ರಮ
ಪರೀಕ್ಷೆ ನಡೆಯುವ ದಿನಾಂಕಗಳು
ಮೇ 02 , 2017
ಮೇ 03 , 2017
ಮೇ 2ರಂದು ಬೆಳಗ್ಗೆ ಜೀವಶಾಸ್ತ್ರ ನಡೆದರೆ, ಮಧ್ಯಾಹ್ನದ ಬಳಿಕ ಗಣಿತ ಪರೀಕ್ಷೆ ನಡೆಯಲಿದೆ. ಮೇ 3ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿದೆ. ಈ ನಾಲ್ಕು ವಿಷಯಗಳಿಗೆ 60 ಅಂಕಗಳನ್ನು ನಿಗದಿಪಡಿಸಲಾಗಿದೆ.
ಪರೀಕ್ಷೆಗಳು ನಡೆಯುವ ಸಮಯ
ಬೆಳಗ್ಗೆ 10.30ರಿಂದ 11.50ರವರೆಗೆ ನಡೆದರೆ, ಮಧ್ಯಾಹ್ನದ ಪರೀಕ್ಷೆಗಳು 2.30ರಿಂದ 3.50ರವರೆಗೆ ನಡೆಯಲಿದೆ. ಹೊರನಾಡು, ಗಡಿನಾಡು ಕನ್ನಡಿಗರಿಗೆ 50 ಅಂಕಗಳಿಗೆ ಮಾತ್ರ ನಡೆಯುವ ಕನ್ನಡ ಭಾಷಾ ಪರೀಕ್ಷೆ ಮೇ 4ರಂದು ಬೆಳಗ್ಗೆ 11.30ರಿಂದ 12.30ರವರೆಗೆ ನಡೆಯಲಿದೆ.
ಕೆ ಸಿ ಇ ಟಿ ಎಂದರೇನು ?
ಪಿ ಯು ಸಿ ನಂತರದ ವೃತ್ತಿಪರ ಕೋರ್ಸ್ಗೆ ಸೇರುವ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯೇ ಕೆಸಿಇಟಿ. ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ -2017 ಅನ್ನು, 2017 -18 ನೇ ಶೈಕ್ಷಣಿಕ ವರ್ಷಕ್ಕೆ ಸಂಭಂದಿಸಿದಂತೆ ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ/ ವಿಶ್ವವಿದ್ಯಾಲಯ/ ಖಾಸಗಿ ಅನುದಾನಿತ/ ಖಾಸಗಿ ಅನುದಾನರಹಿತ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿರುವ ವೃತ್ತಿಪರ ಕೋರ್ಸುಗಳಿಗೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಹಾಗೂ ಜಮ್ಮು ಮತ್ತು ಕಾಶ್ಮೀರದಿಂದ ವಲಸೆ ಬಂದಿರುವವರ ಮಕ್ಕಳಿಗೆ ಪ್ರವೇಶ ನೀಡುವುದಕ್ಕೆ ಸಂಭಂದಿಸಿದಂತೆ ಅರ್ಹತೆ/ ಮೆರಿಟ್ ಅನ್ನು ನಿರ್ಧರಿಸುವ ಉದ್ದೇಶದಿಂದ ನಡೆಸಲಾಗುತ್ತದೆ.
ಇದನ್ನು ಗಮನಿಸಿ: ಕೆಸಿಇಟಿ ಪರೀಕ್ಷೆ ಪೂರ್ವ ತಯಾರಿ ಹೀಗಿರಲಿ


Click it and Unblock the Notifications











