ಗೇಟ್ ಪರೀಕ್ಷೆ 2018 ಅರ್ಜಿ ಸಲ್ಲಿಕೆ ಪ್ರಾರಂಭ

ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆ ಇದಾಗಿದ್ದು, ಸೆಪ್ಟೆಂಬರ್‌ 1ರಿಂದ ಅಕ್ಟೋಬರ್‌ 5ರ ತನಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಹಾಗೂ ದೇಶದ ಏಳು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಗಳು ಜಂಟಿಯಾಗಿ ನಡೆಸುವ 2018ನೇ ಸಾಲಿನ 'ಗ್ರ್ಯಾಜುಯೇಟ್‌ ಆಪ್ಟಿಟ್ಯೂಡ್‌ ಟೆಸ್ಟ್‌ ಇನ್‌ ಎಂಜಿನಿಯರಿಂಗ್‌'ಗೆ (ಗೇಟ್‌) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆ ಇದಾಗಿದ್ದು, ಸೆಪ್ಟೆಂಬರ್‌ 1ರಿಂದ ಅಕ್ಟೋಬರ್‌ 5ರ ತನಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ವಿದ್ಯಾರ್ಹತೆ

ಬಿಇ, ಬಿಟೆಕ್‌, ಬಿಫಾರ್ಮ, ಬಿಎಸ್‌, ಎಂಎಸ್ಸಿ, ಎಂಸಿಎ, ಎಂಇ, ಎಂಟೆಕ್‌, ಇಂಟಿಗ್ರೇಟೆಡ್‌, ಎಂಎಸ್ಸಿ, ಆರ್ಕಿಟೆಕ್ಚರ್‌ನಲ್ಲಿ ಪದವಿ, ಇಂಟಿಗ್ರೇಟೆಡ್‌, ಬಿಎಸ್‌, ಇಂಟಿಗ್ರೇಟೆಡ್‌, ಎಂಎಸ್‌ ಪದವಿ ಪಡೆದವರು ಈ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ಈ ಪದವಿಯ ಅಂತಿಮ ವರ್ಷದಲ್ಲಿರುವವರೂ ಅರ್ಜಿ ಸಲ್ಲಿಸಬಹುದು.

ಗೇಟ್ ಪರೀಕ್ಷೆ 2018

ವಯೋಮಿತಿ

ಪರೀಕ್ಷೆ ಬರೆಯಲು ಯಾವುದೇ ವಯೋಮಿತಿ ನಿಗದಿಪಡಿಸಲಾಗಿರುವುದಿಲ್ಲ.

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್-ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್‌ 1ರಿಂದ ಅಕ್ಟೋಬರ್‌ 5 ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಪರೀಕ್ಷಾ ಶುಲ್ಕ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.1500/-
ಎಸ್‌ಸಿ/ಎಸ್‌ಟಿ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ ರೂ.750 /-

ಪರೀಕ್ಷಾ ದಿನಾಂಕ: 2018ರ ಫೆಬ್ರವರಿ 3,4, 10 ಮತ್ತು 11

ಪರೀಕ್ಷಾ ಕೇಂದ್ರಗಳು

ಆನ್‌ಲೈನ್‌ನಲ್ಲಿಯೇ ಪರೀಕ್ಷೆ ನಡೆಯಲಿದ್ದು, ಒಟ್ಟು ಎಂಟು ವಲಯಗಳಲ್ಲಿ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಯು ತಾವು ಯಾವ ವಲಯದ, ಯಾವ ನಗರದಲ್ಲಿ ಪರೀಕ್ಷೆ ಎದುರಿಸುತ್ತೆನೆ ಎಂಬುದನ್ನು ನಿರ್ಧರಿಸಿ, ಅರ್ಜಿಯಲ್ಲಿ ನಮೂದಿಸಬೇಕಾಗುತ್ತದೆ.

ರಾಜ್ಯದಲ್ಲಿ ಬೆಂಗಳೂರು, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್‌, ದಾವಣಗೆರೆ, ಕಲಬುರಗಿ, ಹಾಸನ, ಹುಬ್ಬಳ್ಳಿ, ಕೋಲಾರ, ಮಂಗಳೂರು, ತುಮಕೂರು, ಮಣಿಪಾಲ್‌, ಮೈಸೂರು, ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಗೇಟ್ ಪರೀಕ್ಷೆ

ಎಂಜಿನಿಯರಿಂಗ್‌ ಅಭ್ಯರ್ಥಿಗಳಿಗೆ ಉದ್ಯೊಗ ಪಡೆಯಲು, ಅಂತೆಯೇ ಉನ್ನತ ಶಿಕ್ಷ ಣಕ್ಕೆ ಇದು ವೇದಿಕೆಯಾಗಿದೆ. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದವರು ಪ್ರತಿಷ್ಠಿತ ಶಿಕ್ಷ ಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷ ಣ ಪಡೆಯಲು ಅವಕಾಶ ಪಡೆಯಲಿದ್ದಾರೆ.

ಅಲ್ಲದೆ, ಸರಕಾರದ ವಿವಿಧ ಸ್ಕಾಲರ್‌ಶಿಪ್‌, ಸಹಾಯ ಧನ ಪಡೆಯಲು ಅರ್ಹರಾಗುತ್ತಾರೆ. ಉದ್ಯೊಗ ಆಕಾಂಕ್ಷಿಗಳಿಗೆ ಇದು ಅರ್ಹತಾ ಪರೀಕ್ಷೆಯಾಗಿರುತ್ತದೆ.

ತೈಲ ಕಂಪನಿಗಳು, ಬಾಬಾ ಅಟೋಮಿಕ್‌ ರಿಸರ್ಚ್‌ ಸೆಂಟರ್‌, ಬಿಎಚ್‌ಇಎಲ್‌, ಪವರ್‌ ಗ್ರಿಡ್‌ ಕಾರ್ಪೋರೇಷನ್‌ ಸೇರಿದಂತೆ ಸಾರ್ವಜನಿಕ ಸಂಸ್ಥೆಗಳು 'ಗೇಟ್‌' ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ರ್ಯಾಂಕಿಂಗ್‌ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಿವೆ. ಇದೇ ರ್ಯಾಂಕಿಂಗ್‌ ಮೇಲೆ ವೇತನ ನಿಗದಿಪಡಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ www.gate.iitg.ac.in ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
The online application process for GATE 2018 exam has started from September 1, 2017 and is available till the last date of October 5, 2017 this year.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X