GATE 2022 Registration : ಅರ್ಜಿ ಸಲ್ಲಿಸಲು ಅರ್ಹತೆ, ಅಗತ್ಯ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ?

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಖರಗ್‌ಪುರ್ ಗ್ರ್ಯಾಜುಯೇಟ್‌ ಆಪ್ಟಿಟ್ಯೂಡ್‌ ಟೆಸ್ಟ್‌ ಇನ್‌ ಎಂಜಿನಿಯರಿಂಗ್‌'ಗೆ (ಗೇಟ್‌) 2022 ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ಆಸಕ್ತ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಲು ಏನೆಲ್ಲಾ ಅರ್ಹತೆಗಳಿರಬೇಕು ಮತ್ತು ಯಾವೆಲ್ಲಾ ಪ್ರಮುಖ ದಾಖಲೆಗಳನ್ನು ಹೊಂದಿರಬೇಕು ಹಾಗೂ ಪರೀಕ್ಷೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

 
ಗೇಟ್ 2022 ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ

ಗೇಟ್ 2022 ಅರ್ಹತಾ ಮಾನದಂಡಗಳು:

ಪ್ರಸ್ತುತ ಯಾವುದೇ ಪದವಿ ಕಾರ್ಯಕ್ರಮದ ಮೂರನೇ ಅಥವಾ ಹೆಚ್ಚಿನ ವರ್ಷಗಳಲ್ಲಿ ಓದುತ್ತಿರುವ ಅಭ್ಯರ್ಥಿಯು ಗೇಟ್ 2022 ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಎಂಜಿನಿಯರಿಂಗ್, ಟೆಕ್ನಾಲಜಿ, ಆರ್ಕಿಟೆಕ್ಚರ್, ಸೈನ್ಸ್, ಕಾಮರ್ಸ್, ಅಥವಾ ಆರ್ಟ್ಸ್ ನಲ್ಲಿ ಯಾವುದೇ ಸರ್ಕಾರಿ ಅನುಮೋದಿತ ಪದವಿ ಕೋರ್ಸ್ ಈಗಾಗಲೇ ಪೂರ್ಣಗೊಳಿಸಿದವರು ಗೇಟ್ 2022 ಪರೀಕ್ಷೆಗೆ ಹಾಜರಾಗಲು ಅರ್ಹರು.

ಯಾವುದೇ ವೃತ್ತಿಪರ ಸೊಸೈಟಿಗಳಿಂದ ಪ್ರಮಾಣಪತ್ರವನ್ನು ಹೊಂದಿರುವ ಅಭ್ಯರ್ಥಿಗಳು ಸೊಸೈಟಿಗಳು ನಡೆಸುವ ಪರೀಕ್ಷೆಗಳನ್ನು MoE, AICTE, UGC, UPSC ಗಳು BE, BTech, BArch ಅಥವಾ BPlanning, ಇತ್ಯಾದಿಗಳಿಗೆ ಅನುಮೋದನೆ ನೀಡಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಭಾರತವನ್ನು ಹೊರತುಪಡಿಸಿ ಬೇರೆ ದೇಶಗಳಿಂದ ತಮ್ಮ ಅರ್ಹತಾ ಪದವಿಯನ್ನು ಪಡೆದ ಅಥವಾ ಓದುತ್ತಿರುವ ಅಭ್ಯರ್ಥಿಗಳು ಪ್ರಸ್ತುತ ಮೂರನೇ ಅಥವಾ ಹೆಚ್ಚಿನ ವರ್ಷಗಳಲ್ಲಿರಬೇಕು ಅಥವಾ ಇಂಜಿನಿಯರಿಂಗ್, ತಂತ್ರಜ್ಞಾನ, ವಿಜ್ಞಾನ, ಕಲೆ ಅಥವಾ ವಾಣಿಜ್ಯದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಬೇಕು.

ಗೇಟ್ 2022 ವಯೋಮಿತಿ:

ಪರೀಕ್ಷೆ ಬರೆಯಲು ಯಾವುದೇ ವಯೋಮಿತಿ ನಿಗದಿಪಡಿಸಲಾಗಿರುವುದಿಲ್ಲ.

ಗೇಟ್ 2022 ಪರೀಕ್ಷೆ:

ಗೇಟ್ 2022 ಪರೀಕ್ಷೆಯು ಫೆಬ್ರವರಿ 5, 6, 12 ಮತ್ತು 13,೨೦೨೨ ರಂದು ನಡೆಯಲಿದೆ ಮತ್ತು ಪರೀಕ್ಷೆಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಖರಗ್‌ಪುರ ಆಯೋಜಿಸುತ್ತಿದೆ.

ಗೇಟ್ 2022 ಅರ್ಜಿ ಶುಲ್ಕ:

ಗೇಟ್ 2022 ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿಗಳು 1500/-ರೂ ಮತ್ತು ಇತರೆ ಅಭ್ಯರ್ಥಿಗಳು 750/-ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ.

 

ಗೇಟ್ 2022 ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳು:

ಗೇಟ್ 2022 ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಿದ್ದರಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ಕೆಳಗೆ ನೀಡಲಾಗಿರುವ ದಾಖಲೆಗಳನ್ನು ಹೊಂದಿರಬೇಕಿರುತ್ತದೆ.

* ಶೈಕ್ಷಣಿಕ ಪ್ರಮಾಣಪತ್ರಗಳು
* ಆಧಾರ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ವೋಟರ್ ಐಡಿ ಮತ್ತು ವಾಹನ ಚಾಲನಾ ಪರವಾನಗಿ ಇವುಗಳಲ್ಲಿ ಯಾವುದೇ ಒಂದು ಐಡಿ ಪ್ರೂಫ್
* ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ ಮತ್ತು ಪಿಡಬ್ಲ್ಯೂಡಿ ಪ್ರಮಾಣಪತ್ರವನ್ನು ಹೊಂದಿರಬೇಕು.
* ಅಭ್ಯರ್ಥಿಯ ಪಾಸ್‌ಪೋರ್ಟ್ ಸೈಜ್ ಫೋಟೋ ಮತ್ತು ಸಹಿಯನ್ನು ಹೊಂದಿರಬೇಕು.

ಅರ್ಜಿ ಸಲ್ಲಿಕೆ:

ಅರ್ಜಿಗಳನ್ನು ಆನ್-ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್‌ 2 ರಿಂದ ಸೆಪ್ಟೆಂಬರ್ 24,2021ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಕ್ಟೋಬರ್ 26 ರಂದು ನೋಂದಣಿ ಪೋರ್ಟಲ್ ಮತ್ತೆ ತೆರೆಯಲಿದೆ. ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಯಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಲು ಅವಕಾಶ ನೀಡಲಾಗುತ್ತದೆ. ಅರ್ಜಿಯನ್ನು ಸರಿಪಡಿಸಲು ನವೆಂಬರ್ ವರೆಗೆ ಅವಕಾಶ ನೀಡಲಾಗಿರುತ್ತದೆ.

ಗೇಟ್ 2022 ಅರ್ಜಿ ಸಲ್ಲಿಸುವುದು ಹೇಗೆ ?:

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ ರಿಜಿಸ್ಟ್ರೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ
ಸ್ಟೆಪ್ 4: ನಂತರ ಅಗತ್ಯ ದಾಖಲೆಗಳು ಸಲ್ಲಿಸಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ
ಸ್ಟೆಪ್ 5: ಆನ್‌ಲೈನ್ ನಲ್ಲಿ ಸಂಪೂರ್ಣವಾಗಿ ಅರ್ಜಿಯನ್ನು ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ.

ಗೇಟ್ ಪರೀಕ್ಷೆ 2022:

ಎಂಜಿನಿಯರಿಂಗ್‌ ಅಭ್ಯರ್ಥಿಗಳಿಗೆ ಉದ್ಯೊಗ ಪಡೆಯಲು, ಅಂತೆಯೇ ಉನ್ನತ ಶಿಕ್ಷ ಣಕ್ಕೆ ಇದು ವೇದಿಕೆಯಾಗಿದೆ. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದವರು ಪ್ರತಿಷ್ಠಿತ ಶಿಕ್ಷ ಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷ ಣ ಪಡೆಯಲು ಅವಕಾಶ ಪಡೆಯಲಿದ್ದಾರೆ. ಅಲ್ಲದೆ, ಸರಕಾರದ ವಿವಿಧ ಸ್ಕಾಲರ್‌ಶಿಪ್‌, ಸಹಾಯ ಧನ ಪಡೆಯಲು ಅರ್ಹರಾಗುತ್ತಾರೆ. ಉದ್ಯೊಗ ಆಕಾಂಕ್ಷಿಗಳಿಗೆ ಇದು ಅರ್ಹತಾ ಪರೀಕ್ಷೆಯಾಗಿರುತ್ತದೆ. ತೈಲ ಕಂಪನಿಗಳು, ಬಾಬಾ ಅಟೋಮಿಕ್‌ ರಿಸರ್ಚ್‌ ಸೆಂಟರ್‌, ಬಿಎಚ್‌ಇಎಲ್‌, ಪವರ್‌ ಗ್ರಿಡ್‌ ಕಾರ್ಪೋರೇಷನ್‌ ಸೇರಿದಂತೆ ಸಾರ್ವಜನಿಕ ಸಂಸ್ಥೆಗಳು 'ಗೇಟ್‌' ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ರ್ಯಾಂಕಿಂಗ್‌ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಿವೆ. ಇದೇ ರ್ಯಾಂಕಿಂಗ್‌ ಮೇಲೆ ವೇತನ ನಿಗದಿಪಡಿಸಲಾಗುತ್ತದೆ.

ಈ ವರ್ಷ ಗೇಟ್ 2022 ಪರೀಕ್ಷೆಯಲ್ಲಿ ಎರಡು ಹೊಸ ವಿಷಯ ಪತ್ರಿಕೆಗಳನ್ನು ಪರಿಚಯಿಸಲಾಗಿದೆ. ಅವುಗಳೆಂದರೆ ನೌಕಾ ವಾಸ್ತುಶಿಲ್ಪ ಮತ್ತು ಸಾಗರ ಎಂಜಿನಿಯರಿಂಗ್ ಮತ್ತು ಜಿಯೋಮ್ಯಾಟಿಕ್ಸ್ ಎಂಜಿನಿಯರಿಂಗ್.

ಜಿಇ ಪೇಪರ್ ಅನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು ಅದು ಸಂಪೂರ್ಣ ಪಠ್ಯಕ್ರಮವನ್ನು ಒಳಗೊಂಡಿದೆ. ಭಾಗ A 55 ಅಂಕಗಳಿಗೆ ಮತ್ತು ಎರಡನೇ ಭಾಗ (ಭಾಗ B) 30 ಅಂಕಗಳನ್ನು ಒಳಗೊಂಡಿರುತ್ತದೆ, ಆದರೆ NM ಒಟ್ಟು 85 ಅಂಕಗಳ ಒಂದು ವಿಭಾಗವನ್ನು ಹೊಂದಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ www.gate.iitg.ac.in ಗಮನಿಸಿ.

For Quick Alerts
ALLOW NOTIFICATIONS  
For Daily Alerts

English summary
Registration process for GATE 2022 will be last today. Check eligibility Criteria, important documents and how to apply.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X