ಇಂಟ್ರಸ್ಟಿಂಗ್ ಸಬ್‍ಜೆಕ್ಟ್ ಮನಶಾಸ್ತ್ರ... ಈ ವಿಷಯದಲ್ಲಿ ಹೆಚ್ಚು ಅಂಕ ಸ್ಕೋರ್ ಮಾಡಲು ಇಲ್ಲಿದೆ ಟ್ರಿಕ್ಸ್ !

Written By: Nishmitha B

ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು, ಎಪ್ರಿಲ್ 5, 2018 ರಂದು ಮನಶಾಸ್ತ್ರ ಪರೀಕ್ಷೆ ನಡೆಯಲಿದೆ. ಇತರ ಸಬ್‌ಜೆಕ್ಟ್ ಗೆ ಹೋಲಿಸಿದ್ರೆ ಈ ಪರೀಕ್ಷೆಗೆ ಸ್ವಲ್ಪ ಸಮಯ ಹೆಚ್ಚಿದೆ ಕೂಡಾ. ಹಾಗಾಗಿ ಮನಶಾಸ್ತ್ರ ವಿದ್ಯಾರ್ಥಿಗಳು ಈ ಸಬ್‌ಜೆಕ್ಟ್ ನಲ್ಲಿ ಹೆಚ್ಚು ಅಂಕ ಸ್ಕೋರ್ ಮಾಡಬೇಕಾದ್ರೆ ಮೊದಲಿಗೆ ಸರಿಯಾಗಿ ಪ್ಲ್ಯಾನ್ ಮಾಡಿಕೊಳ್ಳಬೇಕು. ನಿಮಗೆ ಸುಲಭವಾಗಲೆಂದು ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ

ಟೈಂ ಟೇಬಲ್ ಸಿದ್ಧತೆ ಮಾಡಿಕೊಳ್ಳಿ

Image Source

ಓದಲು ಪ್ರಾರಂಭಿಸುವ ಮುನ್ನ ಮೊದಲಿಗೆ ಟೈಂ ಟೇಬಲ್ ಸಿದ್ಧತೆ ಮಾಡಿಕೊಳ್ಳಿ. ಈ ಟೈಂ ಟೇಬಲ್ ನಿಮ್ಮ ಎಲ್ಲಾ ಪಠ್ಯಕ್ರಮ ಕವರ್ ಮಾಡುವಂತಿರಬೇಕು. ಅಷ್ಟೇ ಅಲ್ಲ ಮೊದಲು ಯಾವುದು ಓದಬೇಕು ನಂತರ ಯಾವುದು ಎಂದು ಪ್ರಾಮುಖ್ಯತೆ ಆಧಾರದ ಮೇಲೆ ಲಿಸ್ಟ್ ಮಾಡಿಕೊಳ್ಳಿ. ನಿಮ್ಮ ಲಿಸ್ಟ್ ಕಷ್ಟದ ಸಬ್‌ಜೆಕ್ಟನಿಂದ ಸುಲಭದ ಸಬ್‌ಜೆಕ್ಟ್ ಕಡೆ ಬರುವಂತಿರಬೇಕು. ಆ ರೀತಿಯಾಗಿ ಒಂದು ಸ್ಟಾಟಜಿ ಹಾಕಿಕೊಳ್ಳಿ

 

ಸಿಲೇಬಸ್ ಅರ್ಥ ಮಾಡಿಕೊಳ್ಳಿ

Image Source

ಮೊದಲಿಗೆ ಸಿಲೇಬಸ್ ನ್ನು ಕಂಪ್ಲೀಟ್ ಆಗಿ ಅರ್ಥ ಮಾಡಿಕೊಳ್ಳಿ. ಇದರಿಂದ ನೀವು ಓದಬೇಕಾದ ವಿಷಯದ ಬಗ್ಗೆ ನಿಮಗೆ ಹಿಡಿತ ಸಿಗುತ್ತದೆ. ಅಷ್ಟೇ ಅಲ್ಲ ಆ ಟಾಪಿಕ್ ಬೇಕಾದ ಎಲ್ಲಾ ರೀತಿಯ ತಯಾರು ಮಾಡಿಕೊಳ್ಳಿ. ಟಾಪಿಕ್ ಗೆ ಸಂಬಂಧಪಟ್ಟಂತೆ ಚಿತ್ರ ಹಾಗೂ ಫೋಟೋಗಳನ್ನ ಕೂಡಾ ತಯಾರು ಮಾಡಿಕೊಳ್ಳಿ. ಓದುವಾಗ ಟಾಪಿಕ್ ಗೆ ಸಂಬಂಧಪಟ್ಟ ಫೋಟೋ ಇಲ್ಲ ಚಿತ್ರಗಳಿದ್ರೆ ನೀವು ಓದಿರುವುದು ನೆನಪಲ್ಲಿ ಉಳಿಯುತ್ತದೆ. ಇನ್ನು ನಿಮ್ಮ ಪರೀಕ್ಷೆಗೆ ನೀವು ಮಾಡಿಕೊಂಡಿರುವಂತಹ ತಯಾರಿ ಬಗ್ಗೆ ಕಾಂಪಿಡೆಂಡ್ ಆಗಿರಿ.

 

ನೋಟ್ಸ್ ಮಾಡಿಕೊಳ್ಳಿ

Image Source

ಓದುವಾಗ ಏನಾದ್ರೂ ಪ್ರಮುಖ ಮಾಹಿತಿ ಸಿಕ್ಕರೆ ಕೂಡಲೇ ಅದನ್ನ ಒಂದು ನೋಟ್ ಮಾಡಿಕೊಳ್ಳಿ. ಇನ್ನ ಕ್ಲಾಸ್‌ನಲ್ಲಿ ಪ್ರೊಫೆಸರ್ ಪಾಠ ಮಾಡಿದ್ದಾಗ ಅವರು ಬೋರ್ಡ್‌ನಲ್ಲಿ ಪ್ರಮುಖ ಅಂಶವನ್ನ ಬರೆದಿರುತ್ತಾರೆ ಹಾಗೆಯೇ ನೀವು ಕೂಡಾ ಅದನ್ನ ನೋಟ್ ಮಾಡಿಕೊಂಡಿರುತ್ತೀರಿ. ಆ ನೋಟನ್ನ ಕೂಡಾ ಅಭ್ಯಸಿಸುವ ವೇಳೆ ಜತೆಗಿರಿಸಿಕೊಳ್ಳಿ. ಇದು ನಿಮಗೆ ಮತ್ತಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಾಯಕವಾಗುವುದು. ಇನ್ನು ಈ ನೋಟ್ ನೀಟ್ ಆಗಿರಲಿ ಜತೆಗೆ ಈ ನೋಟ್ ಮಾಡುವಾಗ ಹೈಲೆಟ್ಸ್ ಬಳಸಿ

 

ಬೇಗ ಓದಲು ಪ್ರಾರಂಭಿಸಿ

Image Source

ಇನ್ನು ಟೈಂ ಟೇಬಲ್ ಸಿದ್ಧತೆ ಮಾಡಿಕೊಂಡ ನಂತರ ತಡ ಮಾಡಬೇಡಿ. ಆದಷ್ಟು ಬೇಗ ಓದಲು ಟ್ರೈ ಮಾಡಿ. ಬೇಗ ಓದಲು ಪ್ರಾರಂಭಿಸಿದ್ರೆ ನೀವು ಅಂದುಕೊಂಡಂತೆ ನಿಗಧಿತ ಸಮಯದಲ್ಲಿ ನಿಮ್ಮ ಎಲ್ಲಾ ಸಿಲಬಸ್ ಕಂಪ್ಲೀಟ್ ಆಗುವುದು. ಅಷ್ಟೇ ಅಲ್ಲ ಮತ್ತೊಮ್ಮೆ ರಿವೈಸ್ ಮಾಡಲು ಕೂಡಾ ಸಹಾಯಕವಾಗುವುದು. ಪ್ರಾಮುಖ್ಯತೆ ಆಧಾರದ ಮೇಲೆ ಟಾಪಿಕ್ ಸೆಲೆಕ್ಟ್ ಮಾಡಿ. ಇನ್ನು ಓದುವಾಗ ಕಷ್ಟದ ಟಾಪಿಕ್ ಬಂದ್ರೆ ಆ ಟಾಪಿಕ್ ಮೇಲೆ ಕಾಂಫಿಡೆಂಟ್ ಬರುವ ತನಕ ಪ್ರಾಕ್ಟೀಸ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ರಿವೈಸ್ ಕೂಡಾ ಕಂಪ್ಲೀಟ್ ಆಗುವುದು

 

ಸಿಲಬಸ್ ಮೇಲೆ ಗಮನವಿರಲಿ

Image Source

10 ಹಾಗೂ12ನೇ ತರಗತಿ ಆಧಾರದ ಮೇಲೆ ಈ ಸಿಲಬಸ್ ತಯಾರಾಗಿರುತ್ತದೆ. ಮೂಲಭೂತ ವಿಷಯದತ್ತ ಹೆಚ್ಚು ಗಮನಕೊಡಿ. ನಿಮಗೆ ಕಷ್ಟ ಎನಿಸುವ ವಿಷಯದ ಬಗ್ಗೆ ಚಿಕ್ಕ ನೋಟ್ ಮಾಡಿಕೊಳ್ಳಿ. ಇನ್ನು ಸಿಲಬಸ್ ನಲ್ಲಿ ಇಲ್ಲದ ವಿಷಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡು ಸಮಯ ವೇಸ್ಟ್ ಮಾಡಬೇಡಿ

 

ಹಳೆಯ ಪ್ರಶ್ನಾಪತ್ರಿಕೆಯತ್ತ ಒಮ್ಮೆ ಕಣ್ಣು ಹಾಯಿಸಿ

Image Source

ಇದು ಮುಖ್ಯವಾದ ಕೆಲಸ. ಹಳೆಯ ಪ್ರಶ್ನಾಪತ್ರಿಕೆಗಳನ್ನ ಒಮ್ಮೆ ತೆಗೆದುಕೊಂಡು ಅದರಲ್ಲಿನ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಲು ಟ್ರೈ ಮಾಡಿ. ಹೀಗೆ ಮಾಡುವುದರಿಂದ ನಿಮಗೆ ಮುಂಬರುವ ಪರೀಕ್ಷೆ ಪತ್ರಿಕೆ ಬಗ್ಗೆ ಒಂದಿಷ್ಟು ಐಡಿಯಾ ಇರುತ್ತದೆ. ಹಾಗೂ ಪರೀಕ್ಷೆಗೆ ಹೇಗೆ ಟೈಂ ಮ್ಯಾನೇಜ್‌ಮೆಂಟ್ ಮಾಡುವುದು ಎಂಬುವುದು ಕೂಡಾ ತಿಳಿಯುತ್ತದೆ

 

ಸರಿಯಾದ ಪುಸ್ತಕ ಆಯ್ಕೆ

Image Source

ನಿಮ್ಮ ಸಿಲೆಬಸ್‌ಗೆ ಸಂಬಂಧಪಟ್ಟಂತೆ ಅನೇಕ ಪುಸ್ತಕಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದ್ರೆ ಕೆಲವೊಂದರಲ್ಲಿ ಅನಗತ್ಯ ಮಾಹಿತಿ ಜಾಸ್ತಿಯಾಗಿರುತ್ತದೆ. ಹಾಗಾಗಿ ನಿಮ್ಮ ಸಿಲಬಸ್ ಗೆ ಸಂಬಂಧಪಟ್ಟ ಪುಸ್ತಕವನ್ನ ಖರೀದಿಸಿ ಅಭ್ಯಸಿಸಿ. ಅಷ್ಟೇ ಅಲ್ಲ ನಿಮ್ಮ ಸ್ನೇಹಿತರ ಹಾಗೂ ಶಿಕ್ಷಕರ ಬಳಿಯಿಂದ ಕೂಡಾ ಪುಸ್ತಕಗಳನ್ನ ಪಡೆದು ಓದಲು ಪ್ರಾರಂಭಿಸಿ

 

English summary
A student who is attending psychology exam must always remember to make a study plan as the first step. Here are some simple steps that can be followed by students with ease.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia