JEE Advanced 2022 : ಜೆಇಇ ಅಡ್ವಾನ್ಸ್ಡ್ ಪರೀಕ್ಷಾ ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ

JEE ಅಡ್ವಾನ್ಸ್ಡ್ 2022: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಬಾಂಬೆ ಆಗಸ್ಟ್ 28 ರಂದು JEE ಅಡ್ವಾನ್ಸ್ಡ್ 2022 ಪರೀಕ್ಷಾ ದಿನಾಂಕವನ್ನು ನಿಗದಿಪಡಿಸಲಾಗಿದೆ. ಪ್ರವೇಶ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆಯು ಆಗಸ್ಟ್ 7 ರಿಂದ ಆಗಸ್ಟ್ 11 ರವರೆಗೆ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಹಾಕಬಹುದು.

ಜೆಇಇ ಅಡ್ವಾನ್ಸ್ಡ್ 2022 ಪರೀಕ್ಷೆಯ ಪಮುಖ ದಿನಾಂಕಗಳು, ಪತ್ರಿಕೆ ಮಾದರಿ ಮತ್ತು ಅರ್ಜಿ ಸಲ್ಲಿಕೆ ವಿವರ

ಜೆಇಇ ಅಡ್ವಾನ್ಸ್ಡ್ 2022 ಪರೀಕ್ಷೆಯ ಪತ್ರಿಕೆ 1 ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿದ್ದು, ಪೇಪರ್ 2 ಮಧ್ಯಾಹ್ನ 2:30 ರಿಂದ ಸಂಜೆ 5:30 ರವರೆಗೆ ನಡೆಯಲಿದೆ.

ಅಭ್ಯರ್ಥಿಗಳು ಹಿಂದಿನ ವರ್ಷದ ಪರೀಕ್ಷೆಯ ಮಾದರಿಯನ್ನು ಪರಿಶೀಲಿಸಬಹುದು ಮತ್ತು ಪ್ರತಿ ವರ್ಷ JEE ಅಡ್ವಾನ್ಸ್ಡ್ ಪರೀಕ್ಷೆಯ ಮಾದರಿಯು ಬದಲಾಗುವುದರಿಂದ ಪ್ರಶ್ನೆಗಳ ಪ್ರಕಾರಗಳು ಮತ್ತು ಪರೀಕ್ಷೆಯ ಮಾರ್ಕಿಂಗ್ ಸ್ಕೀಮ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು.

JEE ಅಡ್ವಾನ್ಸ್ಡ್ 2022 : ಪರೀಕ್ಷೆಯ ಮಾದರಿ

JEE ಅಡ್ವಾನ್ಸ್ಡ್ ಪರೀಕ್ಷೆಯ ಮಾದರಿ 2022ರ ಪ್ರಕಾರ ಎರಡು ಪೇಪರ್‌ಗಳು ಅಂದರೆ ಪೇಪರ್ 1 ಮತ್ತು ಪೇಪರ್ 2 ಪತ್ರಿಕೆಗಳಿರುತ್ತವೆ. ಪ್ರತಿ ಪೇಪರ್ ಮೂರು ಗಂಟೆಗಳ ಕಾಲ ಇರುತ್ತದೆ. ಪತ್ರಿಕೆಯು ಬಹು-ಆಯ್ಕೆಯ ಪ್ರಶ್ನೆಗಳು, ಬಹು ಉತ್ತರಗಳೊಂದಿಗೆ ಪ್ರಶ್ನೆಗಳು, ಸಂಖ್ಯಾತ್ಮಕ ಮೌಲ್ಯಗಳೊಂದಿಗೆ ಪ್ರಶ್ನೆಗಳು ಮತ್ತು ಹೊಂದಾಣಿಕೆಯ ಪ್ರಕಾರದ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ.

ಜೆಇಇ ಅಡ್ವಾನ್ಸ್ಡ್ 2022 ಪರೀಕ್ಷೆಯ ಪಮುಖ ದಿನಾಂಕಗಳು, ಪತ್ರಿಕೆ ಮಾದರಿ ಮತ್ತು ಅರ್ಜಿ ಸಲ್ಲಿಕೆ ವಿವರ

JEE ಅಡ್ವಾನ್ಸ್ಡ್ 2022 : ಅರ್ಜಿ ಸಲ್ಲಿಸುವುದು ಹೇಗೆ ?:

ಸ್ಟೆಪ್ 1 : JEE ಅಡ್ವಾನ್ಸ್ಡ್ 2022 ರ ಅಧಿಕೃತ ವೆಬ್‌ಸೈಟ್‌ jeeadv.ac.in. ಗೆ ಭೇಟಿ ನೀಡಿ

ಸ್ಟೆಪ್ 2 : ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಸ್ಟೆಪ್ 3 : ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಿ.

ಸ್ಟೆಪ್ 4 : ನಂತರ ಅರ್ಜಿ ನಮೂನೆಯನ್ನು ಸಲ್ಲಿಸಿ.

ಸ್ಟೆಪ್ 5 : ಭವಿಷ್ಯದ ಉಲ್ಲೇಖಗಳಿಗಾಗಿ ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟೌಟ್ ತೆಗೆದುಕೊಳ್ಳಿ

JEE ಅಡ್ವಾನ್ಸ್ಡ್ 2022: ಪ್ರಮುಖ ದಿನಾಂಕಗಳು :

JEE ಅಡ್ವಾನ್ಸ್ಡ್ 2022 ಗಾಗಿ ನೋಂದಣಿ ದಿನಾಂಕ : ಆಗಸ್ಟ್ 7 ರಿಂದ 11,2022

ನೋಂದಾಯಿತ ಅಭ್ಯರ್ಥಿಗಳ ಶುಲ್ಕ ಪಾವತಿಗೆ ಕೊನೆಯ ದಿನಾಂಕ : ಆಗಸ್ಟ್ 12,2022

JEE ಅಡ್ವಾನ್ಸ್ಡ್ 2022 ಪ್ರವೇಶ ಪತ್ರ ಲಭ್ಯವಿರುವ ದಿನಾಂಕ : ಆಗಸ್ಟ್ 23 ರಿಂದ 28,2022

JEE ಅಡ್ವಾನ್ಸ್ಡ್ 2022 ಪರೀಕ್ಷೆ ದಿನಾಂಕ : ಆಗಸ್ಟ್ 28,2022

JEE ಅಡ್ವಾನ್ಸ್ಡ್ 2022 ಅಭ್ಯರ್ಥಿಗಳ ಪ್ರತಿಕ್ರಿಯೆಯ ಪ್ರತಿ : ಸೆಪ್ಟೆಂಬರ್ 1,2022

JEE ಅಡ್ವಾನ್ಸ್ಡ್ ತಾತ್ಕಾಲಿಕ ಉತ್ತರ ಕೀ ಬಿಡುಗಡೆ ದಿನಾಂಕ : ಸೆಪ್ಟೆಂಬರ್ 3,2022

ಜೆಇಇ ಅಡ್ವಾನ್ಸ್ಡ್ ತಾತ್ಕಾಲಿಕ ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ದಿನಾಂಕಗಳು : ಸೆಪ್ಟೆಂಬರ್ 3 ರಿಂದ 4,2022

ಜೆಇಇ ಅಡ್ವಾನ್ಸ್ಡ್ ಅಂತಿಮ ಉತ್ತರ ಕೀ : ಸೆಪ್ಟೆಂಬರ್ 11,2022

JEE ಅಡ್ವಾನ್ಸ್ಡ್ 2022 ಫಲಿತಾಂಶ : ಸೆಪ್ಟೆಂಬರ್ 11,2022

ಆರ್ಕಿಟೆಕ್ಚರ್ ಆಪ್ಟಿಟ್ಯೂಡ್ ಟೆಸ್ಟ್ (AAT) 2022 ಗಾಗಿ ಆನ್‌ಲೈನ್ ನೋಂದಣಿ ದಿನಾಂಕ : ಸೆಪ್ಟೆಂಬರ್ 11 ರಿಂದ 12,2022

ಆರ್ಕಿಟೆಕ್ಚರ್ ಆಪ್ಟಿಟ್ಯೂಡ್ ಟೆಸ್ಟ್ (AAT) 2022 ದಿನಾಂಕ : ಸೆಪ್ಟೆಂಬರ್ 14,2022

AAT 2022 ಫಲಿತಾಂಶ ದಿನಾಂಕ : ಸೆಪ್ಟೆಂಬರ್ 17,2022

For Quick Alerts
ALLOW NOTIFICATIONS  
For Daily Alerts

English summary
JEE advanced 2022 exam scheduled on august 28. Here is important dates, paper pattern, application process and complete details in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X