JEE Main 2022 Application : ಜೆಇಇ ಮುಖ್ಯ ಪರೀಕ್ಷೆಯ ಅರ್ಹತೆ, ಪರೀಕ್ಷಾ ಮಾದರಿ ಮತ್ತು ಅರ್ಜಿ ಸಲ್ಲಿಕೆ ವಿವರ

2022ರ ಜಾಯಿಂಟ್ ಎಂಟ್ರೇಂಸ್ ಎಕ್ಸಾಮಿನೇಶನ್ (ಜೆಇಇ) ಮುಖ್ಯ ಪರೀಕ್ಷೆಯ ಮೊದಲ ಅವಧಿಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 1,2022 ರಿಂದ ಮಾರ್ಚ್ 31,2022ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಜೆಇಇ ಮುಖ್ಯ ಪರೀಕ್ಷೆಗೆ ಅರ್ಜಿ ಆಹ್ವಾನ

ಜೆಇಇ ಮುಖ್ಯ ಪರೀಕ್ಷೆಯನ್ನು ದೇಶದ ಟಾಪ್ ಕಾಲೇಜುಗಳಲ್ಲಿ ಮತ್ತು ಐಐಟಿಗಳಲ್ಲಿ ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆಯಲು ನಡೆಸಲಾಗತ್ತದೆ. ಜೆಇಇ ಮುಖ್ಯ ಪರೀಕ್ಷೆಯು ಈ ಭಾರಿ ಎರಡು ಅವಧಿಯಲ್ಲಿ ನಡೆಯಲಿದ್ದು, ಮೊದಲ ಅವಧಿಯು ಏಪ್ರಿಲ್ 16 ಮತ್ತು ಏಪ್ರಿಲ್ 21 ರ ನಡುವೆ ಮತ್ತು ಎರಡನೇ ಅವಧಿಯ ಪರೀಕ್ಷೆಯು ಮೇ 24 ರಿಂದ ಮೇ 29 ರವರೆಗೆ ನಡೆಯಲಿದೆ. ಪರೀಕ್ಷೆಗೆ ನೊಂದಾಯಿಸಿಕೊಳ್ಳಲು ಇಚ್ಚಿಸುವ ಅಭ್ಯರ್ಥಿಗಳಿಗೆ ಅರ್ಹತಾ ಮಾನದಂಡ, ಪರೀಕ್ಷಾ ಮಾದರಿ, ಪರೀಕ್ಷಾ ಶುಲ್ಕ ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಜೆಇಇ ಮುಖ್ಯ ಪರೀಕ್ಷೆ 2022 ಅರ್ಹತಾ ಮಾನದಂಡ :

ಜೆಇಇ ಮುಖ್ಯ ಪರೀಕ್ಷೆ 2022 ಅರ್ಹತಾ ಮಾನದಂಡ :

ಜೆಇಇ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ವಯಸ್ಸಿನ ಮಿತಿಯಿಲ್ಲ.

ಅಭ್ಯರ್ಥಿಯು 2020, 2021 ರಲ್ಲಿ 12 ನೇ ತರಗತಿ/ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ 2022ರಲ್ಲಿ ತಮ್ಮ ವಯಸ್ಸನ್ನು ಲೆಕ್ಕಿಸದೆ ಜೆಇಇ ಮುಖ್ಯ ಪರೀಕ್ಷೆ 2022ಗೆ ಹಾಜರಾಗಬಹುದು ಎಂದು ಎನ್‌ಟಿಎ ಹೇಳಿದೆ.

ಆದಾಗ್ಯೂ ಅಭ್ಯರ್ಥಿಗಳು ಅವರು ಪ್ರವೇಶ ಪಡೆಯಲು ಬಯಸುವ ಸಂಸ್ಥೆ(ಗಳ) ವಯಸ್ಸಿನ ಮಾನದಂಡಗಳನ್ನು ಪೂರೈಸಬೇಕಾಗಬಹುದು ಎಂದು ಎನ್‌ಟಿಎ ತಿಳಿಸಿದೆ.

ಜೆಇಇ ಮುಖ್ಯ ಪರೀಕ್ಷೆ 2022ರ ಪ್ರಶ್ನೆ ಪತ್ರಿಕೆಯ ಮಾದರಿ :

ಜೆಇಇ ಮುಖ್ಯ ಪರೀಕ್ಷೆ 2022ರ ಪ್ರಶ್ನೆ ಪತ್ರಿಕೆಯ ಮಾದರಿ :

ಜೆಇಇ ಮುಖ್ಯ ಪರೀಕ್ಷೆ 2022ರ ಪ್ರಶ್ನೆ ಪತ್ರಿಕೆಯು ಪ್ರತಿ ವಿಷಯಕ್ಕೆ ಎರಡು ವಿಭಾಗಗಳನ್ನು ಹೊಂದಿರುತ್ತದೆ. ಎ ವಿಭಾಗದಲ್ಲಿ 20 ಕಡ್ಡಾಯ ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ ಆದರೆ ಬಿ ವಿಭಾಗದಲ್ಲಿ 10 ಸಂಖ್ಯಾತ್ಮಕ ಪ್ರಶ್ನೆಗಳಿರುತ್ತವೆ. ಅದರಲ್ಲಿ ವಿದ್ಯಾರ್ಥಿಗಳು ಕೇವಲ ಐದು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.

ಜೆಇಇ ಮುಖ್ಯ ಪರೀಕ್ಷೆಯು ಪೇಪರ್ 1 ಅಥವಾ ಬಿಟೆಕ್ ಪೇಪರ್ ಮತ್ತು ಪೇಪರ್ 2 ಅಥವಾ BArch ಮತ್ತು BPlaning ಪೇಪರ್ ಎಂಬ ಎರಡು ಪತ್ರಿಕೆಗಳಲ್ಲಿ ನಡೆಸಲಾಗುತ್ತದೆ. BArch ಮತ್ತು BPlanning ಪತ್ರಿಕೆಗಳನ್ನು ಕ್ರಮವಾಗಿ ಪೇಪರ್ 2A ಮತ್ತು ಪೇಪರ್ 2B ನಂತೆ ಪ್ರತ್ಯೇಕವಾಗಿ ನಡೆಸಲಾಗುವುದು.

ಜೆಇಇ 2022ಗೆ ಅಪ್‌ಲೋಡ್ ಮಾಡಬೇಕಾದ ದಾಖಲೆಗಳು :

ಜೆಇಇ 2022ಗೆ ಅಪ್‌ಲೋಡ್ ಮಾಡಬೇಕಾದ ದಾಖಲೆಗಳು :

* ಅಭ್ಯರ್ಥಿಯ ಛಾಯಾಚಿತ್ರವು JPG ಅಥವಾ JPEG ಸ್ವರೂಪದಲ್ಲಿ ಮತ್ತು 10 kb ಮತ್ತು 200 kb ಗಾತ್ರದ ಸ್ಕ್ಯಾನ್ ಮಾಡಿದ ಪ್ರತಿ.

* JPG ಅಥವಾ JPEG ಸ್ವರೂಪದಲ್ಲಿ 4 kb ಮತ್ತು 30 kb ಗಾತ್ರದಲ್ಲಿ ಸ್ಕ್ಯಾನ್ ಮಾಡಲಾದ ಸಹಿಯ ಪ್ರತಿ.

* ಮೀಸಲು ವರ್ಗಕ್ಕೆ ಸಂಬಂಧಿಸಿದ ದಾಖಲೆಗಳ ಸ್ಕ್ಯಾನ್‌ಗಳನ್ನು ಅಪ್‌ಲೋಡ್ ಮಾಡಿ. ಅವು 50 kb ಮತ್ತು 300 kb ಗಾತ್ರದಲ್ಲಿರಬೇಕು.

ಜೆಇಇ ಮುಖ್ಯ ಪರೀಕ್ಷೆ 2022: ಈ ವರ್ಷ ಹೊಸದೇನಿದೆ ? :

ಜೆಇಇ ಮುಖ್ಯ ಪರೀಕ್ಷೆ 2022: ಈ ವರ್ಷ ಹೊಸದೇನಿದೆ ? :

ಸೆಷನ್‌ಗಳ ಸಂಖ್ಯೆ: ಜೆಇಇ ಮುಖ್ಯ ಪರೀಕ್ಷೆ 2022 ಎರಡು ಬಾರಿ ನಡೆಯಲಿದೆ.

ಜೆಇಇ ಮುಖ್ಯ ತಿದ್ದುಪಡಿ ಸೌಲಭ್ಯ: ಯಾವುದೇ ಸಂದರ್ಭದಲ್ಲಿ ಯಾವುದೇ ಹಂತದಲ್ಲಿ ಯಾವುದೇ ತಿದ್ದುಪಡಿ ಸೌಲಭ್ಯವನ್ನು ನೀಡಲಾಗುವುದಿಲ್ಲ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ನಗರಗಳ ಆಯ್ಕೆ: ನೋಂದಣಿ ಸಮಯದಲ್ಲಿ ಭರ್ತಿ ಮಾಡಿದ ಶಾಶ್ವತ ಮತ್ತು ಪ್ರಸ್ತುತ ವಿಳಾಸದ ಆಧಾರದ ಮೇಲೆ ಪರೀಕ್ಷಾ ನಗರಗಳ ಆಯ್ಕೆಯನ್ನು ಅಭ್ಯರ್ಥಿಗಳಿಗೆ ಲಭ್ಯವಾಗಲಿದೆ.

ಪೋಷಕರ ಆದಾಯದ ವಿವರಗಳು: ಕುಟುಂಬದ ವಾರ್ಷಿಕ ಆದಾಯ (ತಂದೆಯ/ಪೋಷಕರ ಒಟ್ಟು ವಾರ್ಷಿಕ ಆದಾಯ, ತಾಯಿಯ/ರಕ್ಷಕರ ಒಟ್ಟು ವಾರ್ಷಿಕ ಆದಾಯ, ಮತ್ತು ಇತರ ಮೂಲಗಳಿಂದ ತಂದೆಯ/ತಾಯಿಯ/ರಕ್ಷಕರ ವಾರ್ಷಿಕ ಆದಾಯ, ಯಾವುದಾದರೂ ಇದ್ದರೆ) ಕಡ್ಡಾಯ ಕ್ಷೇತ್ರವಾಗಿದೆ.

ಋಣಾತ್ಮಕ ಗುರುತು: ವಿಭಾಗ A (MCQ) ಮತ್ತು ವಿಭಾಗ B (ಸಂಖ್ಯೆಯ ಮೌಲ್ಯ) ಎರಡಕ್ಕೂ ಋಣಾತ್ಮಕ ಅಂಕಗಳು ಇರುತ್ತದೆ.

13 ಭಾಷೆಗಳಲ್ಲಿ ಜೆಇಇ ಮುಖ್ಯ ಪರೀಕ್ಷೆ 2022 :

13 ಭಾಷೆಗಳಲ್ಲಿ ಜೆಇಇ ಮುಖ್ಯ ಪರೀಕ್ಷೆ 2022 :

ಜೆಇಇ ಮುಖ್ಯ ಪರೀಕ್ಷೆಯು ಅಸ್ಸಾಮಿ, ಬೆಂಗಾಲಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು ಜೊತೆಗೆ ಹಿಂದಿ, ಇಂಗ್ಲಿಷ್ ಮತ್ತು ಗುಜರಾತಿ ಭಾಷೆಗಳಲ್ಲಿ ನಡೆಯಲಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಜೆಇಇ ಮುಖ್ಯ ಪರೀಕ್ಷೆ 2022ಗೆ ಅರ್ಜಿ ಶುಲ್ಕ ವಿವರ :

ಜೆಇಇ ಮುಖ್ಯ ಪರೀಕ್ಷೆ 2022ಗೆ ಅರ್ಜಿ ಶುಲ್ಕ ವಿವರ :

ಜೆಇಇ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕದ ವಿವರವನ್ನು ತಿಳಿಯಲು ಮೇಲೆ ನೀಡಿರುವ ಚಿತ್ರವನ್ನು ನೋಡಬಹುದು.

ಜೆಇಇ ಪ್ರಮುಖ ಪರೀಕ್ಷೆಗೆ ರಿಜಿಸ್ಟ್ರೇಶನ್ ಮಾಡುವುದು ಹೇಗೆ :

ಜೆಇಇ ಪ್ರಮುಖ ಪರೀಕ್ಷೆಗೆ ರಿಜಿಸ್ಟ್ರೇಶನ್ ಮಾಡುವುದು ಹೇಗೆ :

ಸ್ಟೆಪ್ 1: ಜೆಇಇ ಅಧಿಕೃತ ವೆಬ್‌ಸೈಟ್ https://jeemain.nta.nic.in/ ಗೆ ವಿಸಿಟ್ ಮಾಡಿ
ಸ್ಟೆಪ್ 2: ಹೋಂ ಪೇಜ್ ನಲ್ಲಿ ಜಾಯಿಂಟ್ ಎಂಟ್ರೇಂಸ್ ಎಕ್ಸಾಮಿನೇಶನ್ ರಿಜಿಸ್ಟ್ರೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಮತ್ತು ಅರ್ಜಿ ಶುಲ್ಕ ಪಾವತಿಸಿ
ಸ್ಟೆಪ್ 4: ಎಲ್ಲವೂ ಪೂರ್ಣಗೊಂಡ ಬಳಿಕ ಅರ್ಜಿಯನ್ನು ಸಬ್‌ಮಿಟ್ ಮಾಡಿ
ಸ್ಟೆಪ್ 5 : ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

ಅಭ್ಯರ್ಥಿಗಳು ಅಧಿಕೃತ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
JEE main 2022 registration process begins, Here is eligibility criteria, exam pattern and how to apply in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X