JEE Main 2022 Revised Exam Date : ಜೆಇಇ ಮುಖ್ಯ ಪರೀಕ್ಷೆ ಏ.21 ರಿಂದ ಆರಂಭ

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ ಮೇನ್ 2022) ಪರಿಷ್ಕೃತ ದಿನಾಂಕಗಳನ್ನು ಪ್ರಕಟ ಮಾಡಿದೆ. ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳು ಪರಿಷ್ಕೃತ ದಿನಾಂಕಗಳನ್ನು ಒಮ್ಮೆ ಚೆಕ್ ಮಾಡಿಕೊಳ್ಳಬಹುದು.

 
ಜೆಇಇ ಮುಖ್ಯ ಪರೀಕ್ಷೆಯ ಪರಿಷ್ಕೃತ ದಿನಾಂಕ ಪ್ರಕಟ

ಎನ್‌ಟಿಎ ಈ ಮುಂಚೆ ಜೆಇಇ ಮುಖ್ಯ ಪರೀಕ್ಷೆಯನ್ನು ಏಪ್ರಿಲ್ 16 ರಂದು ನಿಗದಿಪಡಿಸಲಾಗಿತ್ತು.ಇದೀಗ ಮುಖ್ಯ ಪರೀಕ್ಷೆಯ ದಿನಾಂಕಗಳನ್ನು ಪರಿಷ್ಕೃರಿಸಲಾಗಿದ್ದು, ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಪರೀಕ್ಷೆಯು ಏಪ್ರಿಲ್ 21ರಿಂದ ಪ್ರಾರಂಭವಾಗಲಿದೆ.

ಎನ್‌ಟಿಎ ಮಾಹಿತಿ ಪ್ರಕಾರ ಜೆಇಇ ಮುಖ್ಯ ಪರೀಕ್ಷೆಯ ದಿನಾಂಕಗಳು ಬೋರ್ಡ್ ಪರೀಕ್ಷೆಗಳ ದಿನಾಂಕಗಳೊಂದಿಗೆ ಸಂಘರ್ಷಿಸುವ ಹಿನ್ನೆಲೆಯಲ್ಲಿ ಸೆಷನ್ 1 ರ ದಿನಾಂಕವನ್ನು ಬದಲಾಯಿಸಲು ವಿದ್ಯಾರ್ಥಿಗಳು ಮನವಿ ಮಾಡಿದ್ದರು ಹಾಗಾಗಿ ಜೆಇಇ ಮುಖ್ಯ ಪರೀಕ್ಷೆಯ ದಿನಾಂಕಗಳನ್ನು ಪರಿಷ್ಕರಿಸಲಾಗಿದೆ. ಈ ಕುರಿತು "ವಿದ್ಯಾರ್ಥಿ ಸಮುದಾಯದ ನಿರಂತರ ಬೇಡಿಕೆ ಮತ್ತು ಅವರ ಬೆಂಬಲದ ದೃಷ್ಟಿಯಿಂದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು JEE (ಮುಖ್ಯ) - 2022 ಸೆಷನ್ 1ರ ದಿನಾಂಕಗಳನ್ನು ಮರುಹೊಂದಿಸಲು ನಿರ್ಧರಿಸಿದೆ" ಎಂದು NTA ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಜೆಇಇ ಮುಖ್ಯ ಪರೀಕ್ಷೆಯು ಏಪ್ರಿಲ್ 21, 24, 25, 29 ಮತ್ತು ಮೇ 1, 4 ದಿನಾಂಕಗಳಲ್ಲಿ ನಡೆಯಲಿದೆ. ಎಂಜಿನಿಯರಿಂಗ್ ಪರೀಕ್ಷೆಯನ್ನು ಈ ಮುಂಚೆ ಏಪ್ರಿಲ್ 16, 17, 18, 19, 20 ಮತ್ತು 21 ರಂದು ನಿಗದಿಪಡಿಸಲಾಗಿತ್ತು.

ಜೆಇಇ ಮೇನ್ 2022 ಅನ್ನು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಮತ್ತು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ) ಸೇರಿದಂತೆ ದೇಶಾದ್ಯಂತ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರಲ್ ಕೋರ್ಸ್‌ಗಳಲ್ಲಿ ಪದವಿಪೂರ್ವ ಪ್ರವೇಶವನ್ನು ಬಯಸುವ ಅಭ್ಯರ್ಥಿಗಳಿಗಾಗಿ ನಡೆಸಲಾಗುತ್ತದೆ. ಅಭ್ಯರ್ಥಿಗಳು ಜೆಇಇ ಮೇನ್‌ನಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಜೆಇಇ ಅಡ್ವಾನ್ಸ್ಡ್ 2022 ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ.

 

ಜೆಇಇ ಮುಖ್ಯ ಪರೀಕ್ಷೆಯನ್ನು ಎರಡು ಪತ್ರಿಕೆಗಳೊಂದಿಗೆ ನಡೆಸಲಾಗುತ್ತದೆ ಅವುಗಳೆಂದರೆ - ಪೇಪರ್ 1 ಅಥವಾ BTech ಪೇಪರ್ ಮತ್ತು ಪೇಪರ್ 2 ಅಥವಾ BArch ಮತ್ತು BPlaning ಪೇಪರ್. BArch ಮತ್ತು BPlanning ಪತ್ರಿಕೆಗಳನ್ನು ಕ್ರಮವಾಗಿ ಪೇಪರ್ 2A ಮತ್ತು ಪೇಪರ್ 2B ನಂತೆ ಪ್ರತ್ಯೇಕವಾಗಿ ನಡೆಸಲಾಗುವುದು.

BE ಮತ್ತು BTech ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಪೇಪರ್ 1 ಅನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರಕ್ಕೆ ಕಂಪ್ಯೂಟರ್ ಆಧಾರಿತ ಕ್ರಮದಲ್ಲಿ ನಡೆಸಲಾಗುತ್ತದೆ. ಪೇಪರ್ 2ಎ ಮತ್ತು ಪೇಪರ್ 2ಬಿಗೆ ಗಣಿತ ಮತ್ತು ಆಪ್ಟಿಟ್ಯೂಡ್ ಪರೀಕ್ಷೆ ಸಾಮಾನ್ಯವಾಗಿದ್ದರೆ, ಡ್ರಾಯಿಂಗ್ ಟೆಸ್ಟ್ ಮತ್ತು ಪ್ಲಾನಿಂಗ್ ಕ್ರಮವಾಗಿ ಆರ್ಕಿಟೆಕ್ಚರ್ ಮತ್ತು ಬಿಪ್ಲಾನಿಂಗ್ ಕೋರ್ಸ್‌ಗಳಿಗೆ ಮಾತ್ರ ಇರುತ್ತದೆ.

ಜೆಇಇ ಮುಖ್ಯ 2022 ಪರೀಕ್ಷೆಯು ಹಿಂದಿ, ಇಂಗ್ಲಿಷ್ ಮತ್ತು ಗುಜರಾತಿ ಜೊತೆಗೆ ಅಸ್ಸಾಮಿ, ಬೆಂಗಾಲಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು ಭಾಷೆಗಳಲ್ಲಿ ನಡೆಯಲಿದೆ.

For Quick Alerts
ALLOW NOTIFICATIONS  
For Daily Alerts

English summary
NTA announced JEE mains 2022 revised exam dates, exam beings from april 21.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X