ಜೆಇಇ- ಮೇನ್ಸ್: ರಾಜ್ಯದ 17 ಜಿಲ್ಲಾ ಕೇಂದ್ರಗಳಲ್ಲಿ ಆನ್‌ಲೈನ್ ಪರೀಕ್ಷೆ

Posted By:

2018ರ ಜಂಟಿ ಪ್ರವೇಶ ಪರೀಕ್ಷೆ (ಜೆಇಇ- ಮೇನ್ಸ್) ದಿನಾಂಕ ಪ್ರಕಟವಾಗಿದ್ದು, ಈ ಬಾರಿ ರಾಜ್ಯಕ್ಕೆ ಹೆಚ್ಚುವರಿಯಾಗಿ 14 ಪರೀಕ್ಷಾ ಕೇಂದ್ರಗಳನ್ನು ನೀಡಲಾಗಿದೆ.

2018ರ ಏಪ್ರಿಲ್ 8ರಂದು ಲಿಖಿತ ಪರೀಕ್ಷೆ ಮತ್ತು ಅದೇ ತಿಂಗಳ 15, 16ರಂದು ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ ನಡೆಯಲಿದೆ.

ಬೆಂಗಳೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಲಿಖಿತ ಮತ್ತು ಆನ್‌ಲೈನ್ ಪರೀಕ್ಷೆಗಳು ನಡೆಯುತ್ತವೆ. ಬಾಗಲಕೋಟೆ, ಬೆಳಗಾವಿ, ತುಮಕೂರು ಸೇರಿ 17 ಜಿಲ್ಲಾ ಕೇಂದ್ರಗಳಲ್ಲಿ ಆನ್‌ಲೈನ್ ಪರೀಕ್ಷೆ ಮಾತ್ರ ನಡೆಯಲಿದೆ.

ಕುವೆಂಪು ವಿಶ್ವವಿದ್ಯಾನಿಲಯ ದೂರ ಶಿಕ್ಷಣ ಪ್ರವೇಶಾತಿ 2017-18

ಜೆಇಇ ಪರೀಕ್ಷೆ -2018

ಈ ಬಾರಿಯ ಪರೀಕ್ಷೆಯನ್ನು ಐಐಟಿ ಕಾನ್ಪುರ್ ನಡೆಸುತ್ತಿದ್ದು, ದೇಶದ 104 ನಗರಗಳಲ್ಲಿ ಮತ್ತು ಹೊರದೇಶದ 9 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ. ದೇಶದಾದ್ಯಂತ ಒಟ್ಟು 248 ಪರೀಕ್ಷಾ ಕೇಂದ್ರಗಳಿವೆ.

ಒಟ್ಟು 24,323 ಸೀಟುಗಳನ್ನು ಈ ಪರೀಕ್ಷೆ ಮೂಲಕ ಹಂಚಿಕೆ ಮಾಡಲಾಗುವುದು. ಕಳೆದ ವರ್ಷ 12 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಜೆ ಇ ಇ ಪರೀಕ್ಷೆ ತೆಗೆದುಕೊಂಡಿದ್ದರು.

ಪರೀಕ್ಷಾ ಕೇಂದ್ರಗಳ ವಿವರ

ಬಳ್ಳಾರಿ-ಕಂಪ್ಯೂಟರ್ ಬೇಸ್ಡ್
ಬೀದರ್ -ಕಂಪ್ಯೂಟರ್ ಬೇಸ್ಡ್
ಹಾಸನ್-ಕಂಪ್ಯೂಟರ್ ಬೇಸ್ಡ್
ಉಡುಪಿ-ಕಂಪ್ಯೂಟರ್ ಬೇಸ್ಡ್
ಬೆಳಗಾಂ-ಕಂಪ್ಯೂಟರ್ ಬೇಸ್ಡ್
ಬೆಂಗಳೂರು-ಕಂಪ್ಯೂಟರ್ ಬೇಸ್ಡ್ , ಪೆನ್ ಪೇಪರ್ ಬೇಸ್ಡ್
ಧಾರವಾಡ-ಕಂಪ್ಯೂಟರ್ ಬೇಸ್ಡ್
ಗುಲ್ಬರ್ಗ-ಕಂಪ್ಯೂಟರ್ ಬೇಸ್ಡ್
ಹುಬ್ಬಳ್ಳಿ-ಕಂಪ್ಯೂಟರ್ ಬೇಸ್ಡ್ , ಪೆನ್ ಪೇಪರ್ ಬೇಸ್ಡ್
ಮಂಗಳೂರು-ಕಂಪ್ಯೂಟರ್ ಬೇಸ್ಡ್ , ಪೆನ್ ಪೇಪರ್ ಬೇಸ್ಡ್
ಮೈಸೂರು-ಕಂಪ್ಯೂಟರ್ ಬೇಸ್ಡ್
ಶಿವಮೊಗ್ಗ-ಕಂಪ್ಯೂಟರ್ ಬೇಸ್ಡ್
ಬಾಗಲಕೋಟೆ-ಕಂಪ್ಯೂಟರ್ ಬೇಸ್ಡ್
ದಾವಣಗೆರೆ-ಕಂಪ್ಯೂಟರ್ ಬೇಸ್ಡ್
ಕೋಲಾರ-ಕಂಪ್ಯೂಟರ್ ಬೇಸ್ಡ್
ಮಣಿಪಾಲ-ಕಂಪ್ಯೂಟರ್ ಬೇಸ್ಡ್
ತುಮಕೂರು-ಕಂಪ್ಯೂಟರ್ ಬೇಸ್ಡ್

ಜೆ ಇ ಇ ಪರೀಕ್ಷೆಗಳು

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ ಮತ್ತು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿ ಬಿ ಎಸ್ ಇ ), ನವದೆಹಲಿ, ಸಹಯೋಗದೊಂದಿಗೆ ಆಯೋಜಿಸುವ ಜಂಟಿ ಪ್ರವೇಶ ಪರೀಕ್ಷೆ.

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು (ಎನ್‌ಐಟಿ) ಮತ್ತು ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪ್ರವೇಶಾತಿಗಾಗಿ ಸಿಬಿಎಸ್‌ಇಯು ಪ್ರತಿ ವರ್ಷ ಜೆಇಇ (ಮುಖ್ಯ) ನಡೆಸುತ್ತದೆ. ವೃತ್ತಿಪರ ಕೋರ್ಸುಗಳಿಗೆ ಸೇರುವ ವಿದ್ಯಾರ್ಥಿಗಳಲ್ಲಿ ಒತ್ತಡ ಕಡಿಮೆಮಾಡಲು ಹಾಗು ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ಬಯಸುವವರಿಗೆ ಜೆ ಇ ಇ ಪರೀಕ್ಷೆಗಳು ಸಹಕಾರಿಯಾಗಿವೆ.

ಐ.ಐ.ಟಿ., ಎನ್.ಐ.ಟಿ., ಐ.ಎಸ್.ಇ.ಆರ್., ಮುಂತಾದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಶುದ್ಧ ವಿಜ್ಞಾನವನ್ನೋ ಅಥವಾ ಅನ್ವಯ ವಿಜ್ಞಾನವನ್ನೋ ಅಧ್ಯಯನ ಮಾಡಲು ಜೆ.ಇ.ಇ. ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆಯಬೇಕು.

ಜೆ.ಇ.ಇ. ಆಯ್ಕೆ ಪರೀಕ್ಷೆಗಳು ತಮ್ಮದೇ ಆದ ಪಠ್ಯವನ್ನು ಆಧರಿಸಿರುತ್ತವೆ. ಈ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದವರು ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿ) ಪ್ರವೇಶಾತಿಗಾಗಿ ಈ ಸಂಸ್ಥೆಗಳ ಜಂಟಿ ಪ್ರವೇಶಾತಿ ಮಂಡಳಿ (ಜೆಎಬಿ) ನಡೆಸುವ ಜೆಇಇ-ಅಡ್ವಾನ್ಸ್ಡ್‌ ಬರೆಯಲು ಅರ್ಹತೆ ಗಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
The Joint Entrance Examination (JEE-Maine) Karnataka has got additional 14 test centers.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia