ನವೋದಯ ವಿದ್ಯಾಲಯ: ಪ್ರವೇಶ ಪರೀಕ್ಷೆ ದಿನಾಂಕ ಮುಂದೂಡಿಕೆ

ಈ ಮೊದಲು ಹೊರಡಿಸಿದ್ದ ಅಧಿಸೂಚನೆಯಂತೆ ಫೆ.10 ಕ್ಕೆ ಪ್ರವೇಶ ಪರೀಕ್ಷೆಯನ್ನು ನಡೆಸುವುದಾಗಿ ಸೂಚಿಸಲಾಗಿತ್ತು. ಆದರೆ ಕಾರಣಾಂತರಗಳಿಂದಾಗಿ ಈ ಪರೀಕ್ಷೆಯನ್ನು ಏ.21 ಕ್ಕೆ ನಡೆಸಲು ತೀರ್ಮಾನಿಸಲಾಗಿದೆ.

ಜವಾಹರ್ ನವೋದಯ ವಿದ್ಯಾಲಯದ ಸಾಲಿನ ಆರನೇ ತರಗತಿ ಪ್ರವೇಶಾತಿಗೆ ನಡೆಸುವ ಪ್ರವೇಶ ಪರೀಕ್ಷೆಯ ದಿನಾಂಕವನ್ನು ಮುಂದೂಡಲಾಗಿದೆ.

ಫೆ.3 ರಂದು ಶಿವಮೊಗ್ಗದಲ್ಲಿ ಉದ್ಯೋಗ ಮೇಳಫೆ.3 ರಂದು ಶಿವಮೊಗ್ಗದಲ್ಲಿ ಉದ್ಯೋಗ ಮೇಳ

ಈ ಮೊದಲು ಹೊರಡಿಸಿದ್ದ ಅಧಿಸೂಚನೆಯಂತೆ ಫೆ.10 ಕ್ಕೆ ಪ್ರವೇಶ ಪರೀಕ್ಷೆಯನ್ನು ನಡೆಸುವುದಾಗಿ ಸೂಚಿಸಲಾಗಿತ್ತು. ಆದರೆ ಕಾರಣಾಂತರಗಳಿಂದಾಗಿ ಈ ಪರೀಕ್ಷೆಯನ್ನು ಏ.21 ಕ್ಕೆ ನಡೆಸಲು ತೀರ್ಮಾನಿಸಲಾಗಿದೆ.

ಕೆಪಿಟಿಸಿಎಲ್ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಕೆಪಿಟಿಸಿಎಲ್ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

ಪ್ರವೇಶ ಪರೀಕ್ಷೆ ದಿನಾಂಕ ಮುಂದೂಡಿಕೆ

ಲಭ್ಯವಿರುವ ಸೌಲಭ್ಯಗಳು

ಬಾಲಕ ಬಾಲಕಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ, ಅನುಭವಿ ಮತ್ತು ನುರಿತ ಸಿಬ್ಬಂದಿ, ಶಿಕ್ಷಣದಲ್ಲಿ ಮಾಹಿತಿ ತಂತ್ರಜ್ಞಾನ, ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕಾಗಿ ಸಹಪಠ್ಯ ಚಟುವಟಿಕೆ, ಕ್ರೀಡೆ ಮತ್ತು ಆಟೋಟ, ಯೋಗ ತರಬೇತಿಗೆ ವಿಶೇಷ ಪ್ರೋತ್ಸಾಹ, ಉಚಿತ ಊಟ, ವಸತಿ, ಸಮವಸ್ತ್ರ, ಪಠ್ಯ ಪುಸ್ತಕ ಮತ್ತು ಲೇಖನ ಸಾಮಾಗ್ರಿ ಇತ್ಯಾದಿ, ಅಂತರ್ಜಾಲ, ವಿಸ್ಯಾಟ್, ಎಜುಸ್ಯಾಟ್ ಸೌಲಭ್ಯ.

ಕೆಪಿಎಸ್‌ಸಿ: ಎಫ್‌ಡಿಎ, ಎಸ್‌ಡಿಎ ಪ್ರವೇಶ ಪತ್ರ ಪ್ರಕಟಕೆಪಿಎಸ್‌ಸಿ: ಎಫ್‌ಡಿಎ, ಎಸ್‌ಡಿಎ ಪ್ರವೇಶ ಪತ್ರ ಪ್ರಕಟ

ಮೀಸಲಾತಿ

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೇ.75 ರಷ್ಟು ಮತ್ತು ನಗರದ ವಿದ್ಯಾರ್ಥಿಗಳಿಗೆ ಶೇ.25 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಕನಿಷ್ಠ ಶೇ.15 ರಷ್ಟು ಪ.ಜಾ ಮತ್ತು ಶೇ.7.5 ರಷ್ಟು ಪ.ಪಂ ಮತ್ತು ಶೇ 3 ರಷ್ಟು ವಿಕಲ ಚೇತನ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಶೇ.33 ರಷ್ಟು ಸ್ಥಾನಗಳನ್ನು ಬಾಲಕಿಯರಿಗೆ ಕಾಯ್ದಿರಸಲಾಗಿದೆ.

ಪ್ರವೇಶ ಪರೀಕ್ಷೆ ದಿನಾಂಕ ಮುಂದೂಡಿಕೆ

ಆಯ್ಕೆ ಪರೀಕ್ಷೆಯ ಸ್ವರೂಪ

ಪರೀಕ್ಷೆಯು ವಸ್ತುನಿಷ್ಠ ಮಾದರಿಯ 2 ಗಂಟೆಯ 100 ಅಂಕಗಳನ್ನು ಒಳಗೊಂಡ ಪತ್ರಿಕೆಯಿರುತ್ತದೆ. ಇದರಲ್ಲಿ 50 ಪ್ರತಿಶತ ಮಾನಸಿಕ ಸಾಮರ್ಥ್ಯ, 25 ಪ್ರತಿಶತ ಗಣಿತ ಮತ್ತು 25 ಪ್ರತಿಶತ ಭಾಷಾ ಸಾಮರ್ಥ್ಯವನ್ನು ಪರೀಕ್ಷಿಸುವ ಪ್ರಶ್ನೆಗಳಿರುತ್ತವೆ. ಈ ಪರೀಕ್ಷೆಯ ಮಾಧ್ಯಮವು ವಿದ್ಯಾರ್ಥಿಯು ಓದುತ್ತಿರುವ 5ನೇ ತರಗತಿಯ ಭಾಷಾ ಮಾಧ್ಯಮವಾಗಿರುತ್ತದೆ.

21 ಭಾಷೆಗಳ ಪೈಕಿ ಯಾವುದಾದರೂ ಒಂದು ಭಾಷಾ ಮಾಧ್ಯಮದಲ್ಲಿ ಪರೀಕ್ಷೆಯನ್ನು ಬರೆಯಬಹುದಾಗಿದೆ. ತಪ್ಪು ಉತ್ತರಗಳಿಗೆ ಅಂಕಗಳನ್ನು ಕಳೆಯುವುದಿಲ್ಲ. ಮರು ಮೌಲ್ಯಮಾಪನ, ಮರು ಎಣಿಕೆಗೆ ಅವಕಾಶ ಇರುವುದಿಲ್ಲ.

ನವೋದಯ ವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ಮಕ್ಕಳಿಗೆ ತ್ರಿಭಾಷಾ ಮಾಧ್ಯಮದಲ್ಲಿ ವ್ಯಾಸಂಗ ಮಾಡುವ ಅವಕಾಶ ಕಲ್ಪಿಸಿಕೊಡಲಾಗಿದ್ದು 6 ರಿಂದ 12ನೇ ತರಗತಿವರೆಗೆ ನವೋದಯ ವಿದ್ಯಾಲಯಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ.

ನವೋದಯ ವಿದ್ಯಾಲಯಗಳಲ್ಲಿ 8ನೇ ತರಗತಿವರೆಗೆ ಬೋಧನಾ ಮಾಧ್ಯಮವು ಮಾತೃ ಭಾಷೆ ಅಥವಾ ಪ್ರಾದೇಶಿಕ ಭಾಷೆಯಾಗಿರುತ್ತದೆ. ನಂತರದ ತರಗತಿಗಳಲ್ಲಿ ಗಣಿತ ಮತ್ತು ವಿಜ್ಞಾನವನ್ನು ಆಂಗ್ಲಭಾಷೆಯಲ್ಲಿ, ಸಮಾಜಶಾಸ್ತ್ರ ವಿಷಯಗಳನ್ನು ಹಿಂದಿಯಲ್ಲಿ ಬೋಧಿಸಲಾಗುತ್ತದೆ.

ಈ ಶಾಲೆಗಳಲ್ಲಿ ಬಾಲಕ, ಬಾಲಕಿಯರಿಗೆ ಪ್ರತ್ಯೇಕವಾದ ವಸತಿ ನಿಲಯಗಳಿದ್ದು, ಅನುಭವಿ ಶಿಕ್ಷಕರು, ಮಾಹಿತಿ ತಂತ್ರಜ್ಞಾನ, ಇಂಟರ್ನೆಟ್, ವಿಸ್ಯಾಟ್, ಎಜುಸ್ಯಾಟ್ ಜೊತೆಗೆ ಶಿಕ್ಷಣೇತರ ಚಟುವಟಿಕೆಗಳಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆ, ಯೋಗ, ವ್ಯಕ್ತಿತ್ವ ವಿಕಸನ ಇತ್ಯಾದಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಮುಖ್ಯವಾಗಿ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Navodaya Vidyalaya Summer Bound Areas Exam Which was scheduled on 10.02.2018 has been postponed to 21.04.2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X