ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್

Posted By: Vinaykumar

ಜೆ ಇ ಇ ಪರೀಕ್ಷೆಗಳು

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ ಮತ್ತು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿ ಬಿ ಎಸ್ ಇ ), ನವದೆಹಲಿ, ಸಹಯೋಗದೊಂದಿಗೆ ಆಯೋಜಿಸುವ ಜಂಟಿ ಪ್ರವೇಶ ಪರೀಕ್ಷೆ. ವೃತ್ತಿಪರ ಕೋರ್ಸುಗಳಿಗೆ ಸೇರುವ ವಿದ್ಯಾರ್ಥಿಗಳಲ್ಲಿ ಒತ್ತಡ ಕಡಿಮೆಮಾಡಲು ಹಾಗು ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ಬಯಸುವವರಿಗೆ ಜೆ ಇ ಇ ಪರೀಕ್ಷೆಗಳು ಸಹಕಾರಿಯಾಗಿವೆ.

ಜೆಇಇ ಪರೀಕ್ಷೆಗಳು

ಜೆ.ಇ.ಇ. ಪರೀಕ್ಷೆಗಳು ರಾಷ್ಟ್ರ ಮಟ್ಟದ ತಾಂತ್ರಿಕ ವಿದ್ಯಾಸಂಸ್ಥೆಗಳಿಗೆ ಪ್ರವೇಶವನ್ನು ಪಡೆಯಲು ತೆಗೆದುಕೊಳ್ಳಬೇಕಾದಂಥವು. ಐ.ಐ.ಟಿ., ಎನ್.ಐ.ಟಿ., ಐ.ಎಸ್.ಇ.ಆರ್., ಮುಂತಾದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಶುದ್ಧ ವಿಜ್ಞಾನವನ್ನೋ ಅಥವಾ ಅನ್ವಯ ವಿಜ್ಞಾನವನ್ನೋ ಅಧ್ಯಯನ ಮಾಡಲು ಜೆ.ಇ.ಇ. ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆಯಬೇಕು. ಜೆ.ಇ.ಇ. ಆಯ್ಕೆ ಪರೀಕ್ಷೆಗಳು ತಮ್ಮದೇ ಆದ ಪಠ್ಯವನ್ನು ಆಧರಿಸಿರುತ್ತವೆ.

ಈ ಪಠ್ಯ ಹೆಚ್ಚುಕಡಿಮೆ ಪಿ.ಯು. ಪಠ್ಯಕ್ರಮವನ್ನೇ ಹೋಲುತ್ತದೆ. ಪಿ.ಯು.ಸಿ ಓದುವಾಗಲೇ ಈ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕು. ಇದಕ್ಕೆ ಬೇಕಾದ ಮಾರ್ಗದರ್ಶಿ ಪುಸ್ತಕಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ದೊರೆಯುತ್ತವೆ. ಈ ಪರೀಕ್ಷೆಗೆ ತರಬೇತಿ ನೀಡುವ ಸಂಸ್ಥೆಗಳೂ ಹಲವಾರು ಇವೆ. ಇವುಗಳಲ್ಲೊಂದನ್ನು ಸಂಪರ್ಕಿಸಿ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಿ. ಎರಡು ವರ್ಷ ಮುಗಿದ ನಂತರವೂ, ಒಂದು ವರ್ಷ ಜೆ.ಇ.ಇ. ಪರೀಕ್ಷೆಗೋಸ್ಕರ ಅಧ್ಯಯನ ಮಾಡಿ, ಪಿ.ಯು., ಐ.ಐ.ಟಿ.ಗಳಿಗೆ ಪ್ರವೇಶ ಪಡೆಯಲು ಪ್ರಯತ್ನಿಸಬಹುದು

ಪರೀಕ್ಷಾ ವಿಧಾನ

ಜೆ ಇ ಇ ಮುಖ್ಯ ಪರೀಕ್ಷೆಯನ್ನು ಭಾರತದಾದ್ಯಂತ ಆಯೋಜಿಸಲಾಗುವುದು. ಎನ್ಐಟಿ , ಐಐಟಿ, ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಇಂಜಿನಿಯರಿಂಗ್ ಪದವಿ ಬಯಸುವವರಿಗೆ ಪರೀಕ್ಷೆ ನಡೆಸಲಾಗುವುದು.  ಮುಖ್ಯ ಪರೀಕ್ಷೆಯು ಆನ್ಲೈನ್ ಮತ್ತು ಆಫ್ಲೈನ್ ಎರಡೂ ವಿಧಗಳಲ್ಲಿ ನಡೆಯುವುದು. ಆನ್ಲೈನ್ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿರುತ್ತದೆ. ಮುಖ್ಯ ಪರೀಕ್ಷೆಯು ಮೂರು ಪ್ರಶ್ನ ಪತ್ರಿಕೆಗಳನ್ನು ಹೊಂದಿರುತ್ತದೆ.
1. ಮೊದಲ ಪತ್ರಿಕೆ ಎಐಇಇಇ, ಮೂರು ಗಂಟೆ ಅವಧಿಯ ಈ ಪರೀಕ್ಷೆ ಆಬ್ಜೆಕ್ಟಿವ್ ಟೈಪ್ ಆಗಿರುತ್ತದೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ಹೊಂದಿರುತ್ತದೆ.
2. ಎರಡನೇ ಪತ್ರಿಕೆಯು ಬಿ.ಆರ್ಕ್/ಬಿ.ಪ್ಲಾನಿಂಗ್ ಆಗಿದ್ದು ಎನ್ಐಟಿ , ಐಐಟಿ, ಡಿಟಿಯು, ದೆಹಲಿ ಮತ್ತು ಸಿಎಫ್ಟಿಐ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದು. ಈ ಪತ್ರಿಕೆಯು ಗಣಿತ, ಡ್ರಾಯಿಂಗ್ ಮತ್ತು ಆಪ್ಟಿಟ್ಯೂಡ್ ಟೆಸ್ಟ್ ಒಳಗೊಂಡಿರುತ್ತದೆ.
3. ಮೂರನೇ ಪತ್ರಿಕೆಯು ಲಿಖಿತ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿದ್ದು ಮೂರು ಗಂಟೆಯ ಅವಧಿಯ ಪರೀಕ್ಷೆಯಾಗಿರುತ್ತದೆ.

ಅರ್ಹತೆ

10 +2 ಜೆ ಇ ಇ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಇರಬೇಕಾದ ಕನಿಷ್ಠ ಅರ್ಹತೆ
ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ.

English summary
The Ministry of Human Resource Development, Government of India and Central Board of Secondary education (CBSE), New Delhi introduced the national level common entrance exam called Joint Entrance Examination (JEE).

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia