ಏ. 18 ಮತ್ತು 19ರಂದು ಸಿಇಟಿ-2018

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ 12 ದಿನ ಮೊದಲೇ ಸಿಇಟಿ ನಡೆಯುತ್ತಿದ್ದು, ಏ. 18 ಮತ್ತು 19ರಂದು ಸಿಇಟಿ ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2018-19ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವೇಳಾಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ 12 ದಿನ ಮೊದಲೇ ಸಿಇಟಿ ನಡೆಯುತ್ತಿದ್ದು, ಏ. 18 ಮತ್ತು 19ರಂದು ಸಿಇಟಿ ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಹೊರನಾಡು ಹಾಗೂ ಗಡಿನಾಡ ಕನ್ನಡಿಗ ಅಭ್ಯರ್ಥಿಗಳಿಗೆ ಏ. 20ರಂದು ಬೆಂಗಳೂರಿನಲ್ಲಿ ಮಾತ್ರ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.

ದ್ವಿತೀಯ ಪಿಯುಸಿ : ವಾರ್ಷಿಕ ಪರೀಕ್ಷೆ 2018ರ ತಾತ್ಕಾಲಿಕ ವೇಳಾ ಪಟ್ಟಿದ್ವಿತೀಯ ಪಿಯುಸಿ : ವಾರ್ಷಿಕ ಪರೀಕ್ಷೆ 2018ರ ತಾತ್ಕಾಲಿಕ ವೇಳಾ ಪಟ್ಟಿ

ಸಿಇಟಿ-2018 ವೇಳಾಪಟ್ಟಿ

ಪ್ರತಿ ವರ್ಷ ಮೇ ಮೊದಲ ವಾರ ಸಿಇಟಿ ನಡೆಯುತ್ತಿತ್ತು. ಆದರೆ, ರಾಜ್ಯ ವಿಧಾನಸಭೆಗೆ ಮೇ ಮೊದಲ ವಾರ ಚುನಾವಣೆ ನಡೆಯಲಿರುವ ಸಾಧ್ಯತೆ ಹಿನ್ನೆಲೆಯಲ್ಲಿ 12 ದಿನ ಮೊದಲೇ ಸಿಇಟಿ ನಡೆಸಲಾಗುತ್ತಿದೆ.

ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಇದೇ ವೇಳೆ ವೈದ್ಯಕೀಯ ಹಾಗೂ ದಂತ ವೈದ್ಯ ಕೋರ್ಸ್‌ಗಳಿಗೆ ಪ್ರವೇಶಾವಕಾಶ ಕಲ್ಪಿಸಲು ಸಿಬಿಎಸ್‌ಇ ನಡೆಸಲಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ('ನೀಟ್‌'-2018)ಯನ್ನು ಮೇ 7ರಂದು ನಡೆಸಲು ನಿಗದಿಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮೂಲಗಳು ತಿಳಿಸಿವೆ .

ಸಿಇಟಿ-2018 ವೇಳಾಪಟ್ಟಿ

ದಿನಾಂಕಸಮಯವಿಷಯ
18.04.2018
ಬೆ.10:30 ರಿಂದ 11:50 ಜೀವಶಾಸ್ತ್ರ
ಮ.2:30 ರಿಂದ 3:50 ಗಣಿತ
19.04.2018
ಬೆ.10:30 ರಿಂದ 11:50 ಭೌತಶಾಸ್ತ್ರ
ಮ.2:30 ರಿಂದ 3:50 ರಸಾಯನಶಾಸ್ತ್ರ

ಹೊರನಾಡು ಹಾಗೂ ಗಡಿನಾಡ ಕನ್ನಡಿಗ ಅಭ್ಯರ್ಥಿಗಳಿಗೆ 20.04.2018 ರಂದು ಬೆ.11:30 ರಿಂದ ಮ.12:30 ಬೆಂಗಳೂರಿನಲ್ಲಿ ಮಾತ್ರ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.

ಎಂಜಿನಿಯರಿಂಗ್‌, ತಂತ್ರಜ್ಞಾನ, ಕೃಷಿ ವಿಜ್ಞಾನ ಕೋರ್ಸ್‌ಗಳಾದ ಅಂದರೆ, ಬಿವಿಎಸ್‌ಸಿ ಅಂಡ್‌ ಎಎಚ್‌ ಬಿಎಸ್ಸಿ- ಕೃಷಿ, ರೇಷ್ಮೆ ಕೃಷಿ, ತೋಟಗಾರಿಕೆ, ಅರಣ್ಯ ವಿಜ್ಞಾನ, ಕೃಷಿ ಜೈವಿಕ ತಂತ್ರಜ್ಞಾನ, ಬಿಎಚ್‌ಎಸ್‌ಸಿ , ಬಿ.ಟೆಕ್‌- ಕೃಷಿ ಎಂಜಿನಿಯರಿಂಗ್‌, ಆಹಾರ ತಂತ್ರಜ್ಞಾನ, ಹೈನುಗಾರಿಕೆ ತಂತ್ರಜ್ಞಾನ, ಬಿಎಫ್‌ಎಸ್‌ಸಿ (ಮೀನುಗಾರಿಕೆ), ಬಿ.ಟೆಕ್‌ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ), ಬಿ.ಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ), ಬಿ-ಫಾರ್ಮ, ಫಾರ್ಮ-ಡಿ ಮತ್ತು ಆಯುಷ್‌ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ಬರೆಯುವುದು ಕಡ್ಡಾಯವಾಗಿದೆ.

ಸಿಇಟಿ ರ‍್ಯಾಂಕಿಂಗ್‌ ಅನ್ವಯ ಪ್ರಾಧಿಕಾರ ಈ ಕೋರ್ಸ್‌ಗಳಿಗೆ ಸೀಟುಗಳನ್ನು ಹಂಚಿಕೆ ಮಾಡಲಿದೆ.

For Quick Alerts
ALLOW NOTIFICATIONS  
For Daily Alerts

English summary
Karnataka Examination Authority (KEA)has announced KCET-2018 exam date. CET-2018 will be held on April 18 and 19. While the Kannada language test will be on April 20,2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X