Karnataka SSLC Exam 2021-22 Pattern: ಈ ಭಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆ ಇಲ್ಲ

ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ಕೈಬಿಡಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಿರ್ಧಾರ ಕೈಗೊಂಡಿದೆ.

ಎಸ್ಸೆಎಸ್ಸೆಲ್ಸಿ ಪರೀಕ್ಷೆ : ಈ ಭಾರಿ ಬಹು ಆಯ್ಕೆ ಪ್ರಶ್ನೆ ಇಲ್ಲ

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಮಾರ್ಚ್-ಏಪ್ರಿಲ್ 2022 ರ ಪೂರ್ವಸಿದ್ಧತಾ ಮತ್ತು ಅಂತಿಮ ಪರೀಕ್ಷೆಗಳನ್ನು ನಡೆಸಲು ಇತ್ತೀಚೆಗೆ ಮಾರ್ಗಸೂಚಿಯನ್ನು ಹೊರಡಿಸಲಾಗಿತ್ತು ಅದರಲ್ಲಿ ಬದಲಾವಣೆಯನ್ನು ಕುರಿತು ತಿಳಿಸಲಾಗಿದೆ.

ಕೋವಿಡ್-19 ಕಾರಣಕ್ಕೆ 2020-2021ನೇ ಸಾಲಿನಲ್ಲಿ ಪಠ್ಯಕ್ರಮವು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಬಹುಆಯ್ಕೆ ಪ್ರಶ್ನೆಗಳನ್ನೊಳಗೊಂಡ ಪರೀಕ್ಷೆಯನ್ನು ಜಾರಿಗೊಳಿಸಲಾಗಿತ್ತು.

ವಿದ್ಯಾರ್ಥಿಗಳ ಹಿತಾಸಕ್ತಿಯಿಂದ ನಿರ್ಧಾರ :

ವಿದ್ಯಾರ್ಥಿಗಳ ಹಿತಾಸಕ್ತಿಯಿಂದ ನಿರ್ಧಾರ :

ಈ ವರ್ಷ ಕೂಡ ಬಹು ಆಯ್ಕೆ ಪ್ರಶ್ನೆಗಳುಳ್ಳ ಪರೀಕ್ಷೆಯನ್ನು ನಡೆಸಲು ಚಿಂತನೆ ನಡೆಸಲಾಗಿತ್ತು. ಆದರೆ ಶಿಕ್ಷಕರು ಮತ್ತು ತಜ್ಞರ ಅಭಿಪ್ರಾಯಗಳನ್ನು ಪಡೆದು ಬಹು ಆಯ್ಕೆಯ ಪ್ರಶ್ನೆಗಳನ್ನು ಕೈಬಿಡಲಾಗಿದೆ. ವಿದ್ಯಾರ್ಥಿಗಳ ಹಿತಾಸಕ್ತಿಯಿಂದಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿವರವಾಗಿ ಉತ್ತರ ಬರೆಯುವ ಪದ್ಧತಿಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಮತ್ತು ಅವರ ಆಲೋಚನಾ ಕ್ರಮ ಇನ್ನಷ್ಟು ವೃದ್ಧಿಯಾಗುತ್ತದೆ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ವಿಷಯಗಳಿಗೆ ನೀಡುವ ಅಂಕಗಳು ಹೀಗಿವೆ :

ವಿಷಯಗಳಿಗೆ ನೀಡುವ ಅಂಕಗಳು ಹೀಗಿವೆ :

ಪ್ರಥಮ ಭಾಷೆಯನ್ನು ಹೊರತುಪಡಿಸಿ ಕೋರ್ ವಿಷಯಗಳಿಗೆ 100 ಅಂಕಗಳನ್ನು ನಿಗದಿಪಡಿಸಲಾಗಿದೆ. ಇದರಲ್ಲಿ 80 ಅಂಕಗಳಿಗೆ ಥಿಯರಿ ಮತ್ತು 20 ಅಂಕಗಳಿಗೆ ಆಂತರಿಕ ಪರೀಕ್ಷೆ ನಡೆಸಲಾಗುತ್ತದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆಗೆ ಮಾತ್ರ 125 ಅಂಕಗಳನ್ನು ನೀಡಲಾಗಿದೆ.

ವಿದ್ಯಾರ್ಥಿಗಳ ಮಿಶ್ರ ಪ್ರತಿಕ್ರಿಯೆ :
 

ವಿದ್ಯಾರ್ಥಿಗಳ ಮಿಶ್ರ ಪ್ರತಿಕ್ರಿಯೆ :

ಪರೀಕ್ಷಾ ಮಾದರಿ ಬದಲಾವಣೆಗೆ ಸಂಬಂಧಿಸಿದಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರೆ ಮತ್ತು ಇನ್ನೂ ಕೆಲವು ವಿದ್ಯಾರ್ಥಿಗಳು ಬೇಸರಗೊಂಡಿದ್ದಾರೆ.

ಸರ್ಕಾರ ನಡೆಸುವ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಈ ಮುಂಚೆ ಇದ್ದ ಪರೀಕ್ಷಾ ಮಾದರಿಯೇ ಅನುಕೂಲವಾಗಿತ್ತು ಎಂದು 10ನೇ ತರಗತಿ ವಿದ್ಯಾರ್ಥಿಯೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳ ಬರೆವಣಿಗೆ ಕೌಶಲ್ಯ ಅಭಿವೃದ್ಧಿ :

ವಿದ್ಯಾರ್ಥಿಗಳ ಬರೆವಣಿಗೆ ಕೌಶಲ್ಯ ಅಭಿವೃದ್ಧಿ :

ಮಕ್ಕಳಲ್ಲಿ ಬರವಣಿಗೆ ಕೌಶಲ ಮತ್ತು ಜ್ಞಾನಮಟ್ಟ ಬೆಳೆಯುವುದು ಮುಖ್ಯ. ಬಹು ಆಯ್ಕೆ ಪ್ರಶ್ನೆಗಳಿಂದ ವಿದ್ಯಾರ್ಥಿಗಳು ಬರೆಯುವುದನ್ನು ಮರೆಯುತ್ತಾರೆ. ವಿದ್ಯಾರ್ಥಿಗಳು ವಿಷಯದ ವಿಶ್ಲೇಷನೆ ನಡೆಸಿ ಬರೆಯುವುದು ಮುಖ್ಯವಾಗಬೇಕು ಎಂದು ಕರ್ನಾಟಕ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್‌.ಕೆ. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Karnataka SSLC 2021 Exams switch back to descriptive mode. Students appearing for Karnataka SSLC board exams this academic year will have to prepare to write descriptive answers.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X