SSLC Supplementary Exam Fees Last Date 2020: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಕೆಯ ಡೀಟೇಲ್ಸ್

ಜೂನ್/ಜುಲೈ 2020ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆದು ಅನುತ್ತೀರ್ಣರಾದ ಅಭ್ಯರ್ಥಿಗಳಿಗೆ ಹಾಗೂ ಈ ಹಿಂದಿನ ಸಾಲಿನಲ್ಲಿ ಅನುತ್ತೀರ್ಣರಾದ ಎಲ್ಲಾ ಅರ್ಹ ಪುನರಾವರ್ತಿತ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 2020ರಲ್ಲಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯನ್ನು ನಡೆಸಲಾಗುವುದು. ಈ ಹಿನ್ನೆಯಲ್ಲಿ ಪುನರಾವರ್ತಿತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಮಹತ್ವದ ಮಾಹಿತಿ

ಜೂನ್/ಜುಲೈ 2020ರ ಮಾಹೆಯಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಗೆ ಕೋವಿಡ್-19ರ ಹಿನ್ನೆಲೆಯಲ್ಲಿ ಕ್ವಾರಂಟೈನ್ ನಲ್ಲಿದ್ದಂತಹ ವಿದ್ಯಾರ್ಥಿಗಳು, ಕೋವಿಡ್-19 ಪಾಸಿಟಿವ್ ಎಂದು ಗುರುತಿಸಲ್ಪಟ್ಟಂತಹ ವಿದ್ಯಾರ್ಥಿಗಳು, ದಿಢೀರ್ ಅನಾರೋಗ್ಯಕ್ಕೊಳಗಾದ ಹಾಗೂ ಶಸ್ತ್ರಚಿಕಿತ್ಸೆಗೊಳಗಾದ ವಿದ್ಯಾರ್ಥಿಗಳು ,ಅಪಘಾತಕ್ಕೆ ಒಳಗಾಗಿದ್ದ ವಿದ್ಯಾರ್ಥಿಗಳು, ಇತರೆ ಅನಾರೋಗ್ಯದಿಂದ ಬಳಲುತ್ತಿದ್ದಂತಹ ವಿದ್ಯಾರ್ಥಿಗಳು, ಸೀಲ್ಡೌನ್ ಪ್ರದೇಶದಲ್ಲಿದ್ದು ಪರೀಕ್ಷಾ ಕೇಂದ್ರಕ್ಕೆ ತೆರಳಲು ಅನಾನುಕೂಲವಾಗಿದ್ದ ವಿದ್ಯಾರ್ಥಿಗಳು ಮತ್ತು ತಮ್ಮ ಸ್ವಂತ ಗ್ರಾಮಕ್ಕೆ ಹಿಂದಿಗಿದ ವಲಸೆ ಕಾರ್ಮಿಕರ ಮಕ್ಕಳಿಗೆ ಹತ್ತಿರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದರೂ ಸಹ ಇತರೆ ಕಾರಣಗಳಿಂದಾಗಿ ಪರೀಕ್ಷೆಗೆ ಗೈರು ಹಾಜರಾಗಿ್ದ ವಿದ್ಯಾರ್ಥಿಗಳು ಸೆಪ್ಟೆಂಬರ್ 2020ರ ಮಾಹೆಯಲ್ಲಿ ನಡೆಸಲಾದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗೆ ನೊಂದಾಯಿಸಿಕೊಂಡಲ್ಲಿ 'ಪ್ರಥಮ ಅವಕಾಶ' ಎಂದು ಪರಿಗಣಿಸಲಾಗುವುದು.

ಅನುತ್ತೀರ್ಣ ವಿದ್ಯಾರ್ಥಿಗಳು ಪಾವತಿಸಬೇಕಾಗಿರುವ ಪರೀಕ್ಷಾ ಶುಲ್ಕದ ವಿವರಗಳು:

ಒಂದು ವಿಷಯಕ್ಕೆ 320/-ರೂ
ಎರಡು ವಿಷಯಕ್ಕೆ 386/-ರೂ
ಮೂರು ಅಥವಾ ಮೂರಕ್ಕಿಂತ ಮೇಲ್ಪಟ್ಟು ವಿಷಯಗಳಿಗೆ - 520/-ರೂ

ಕೋವಿಡ್-19 ಹಿನ್ನೆಲೆಯಲ್ಲಿ ಗೈರು ಹಾಜರಾಗಿರುವ ವಿಷಯಗಳಿಗೆ ಶುಲ್ಕವಿನಾಯಿತಿ ನೀಡಲಾಗಿದೆ. ಆದ್ದರಿಂದ ಗೈರು ಹಾಜರಾದ ವಿಷಯವನ್ನು ಹೊರತುಪಡಿಸಿ ಅನುತ್ತೀರ್ಣರಾದ ವಿಷಯಗಳಿಗೆ ಮಾತ್ರ ಮೇಲಿನಂತೆ ಶುಲ್ಕವನ್ನು ಪಾವತಿಸಬಹುದು.

ಆನ್‌ಲೈನ್ ಪರೀಕ್ಷಾ ಅರ್ಜಿಯನ್ನು ನೊಂದಾಯಿಸಲು ಹಾಗೂ ನೆಫ್ಟ್ ಚಲನ್ ಮೂಲಕ ಬ್ಯಾಂಕ್ ಗೆ ಪರೀಕ್ಷಾ ಶುಲ್ಕ ಪಾವತಿಸಲು ನಿಗಧಿಪಡಿಸಿದ ದಿನಾಂಕ:

ಪರೀಕ್ಷಾ ಶುಲ್ಕ ಸ್ವೀಕರಿಸಲು ಮತ್ತು ಆನ್‌ಲೈನ್ ನಲ್ಲಿ ವಿದ್ಯಾರ್ಥಿಗಳ ವಿವರಗಳನ್ನು ಅಪ್‌ಲೋಡ್ ಪ್ರಾರಂಭಿಸಲು ನಿಗಧಿಪಡಿಸಿದ ದಿನಾಂಕ: 11.8.2020
ಪರೀಕ್ಷಾ ಶುಲ್ಕ ಸ್ವೀಕರಿಸಲು ಮತ್ತು ಆನ್‌ಲೈನ್ ನಲ್ಲಿ ವಿದ್ಯಾರ್ಥಿಗಳ ವಿವರಗಳನ್ನು ಅಪ್‌ಲೋಡ್ ಮಾಡಲು ಕೊನೆ ದಿನಾಂಕ: 20.8.2020
200/-ರೂ ದಂಡ ಶುಲ್ಕದೊಂದಿಗೆ ಪರೀಕ್ಷಾ ಶುಲ್ಕ ಸ್ವೀಕರಿಸಲು ಮತ್ತು ಆನ್‌ಲೈನ್ ನಲ್ಲಿ ವಿದ್ಯಾರ್ಥಿಗಳ ವಿವರ ಅಪ್‌ಲೋಡ್ ಮಾಡಲು ಕೊನೆಯ ದಿನಾಂಕ: 24.8.2020
ಆನ್‌ಲೈನ್ ವಿದ್ಯಾರ್ಥಿಗಳ ವಿವರವನ್ನು ಅಪ್‌ಲೋಡ್ ಮಾಡಲು ನಿಗದಿಪಡಿಸಿದ ದಿನಾಂಕ ನಂತರ ನೆಫ್ಟ್ ಚಲನ್ ಜನರೇಟ್ ಮಾಡಿಕೊಂಡು ಬ್ಯಾಂಕಿಗೆ ಪಾವತಿಸಲು ಕೊನೆಯ ದಿನಾಂಕ: 28.8.2020
ನೆಫ್ಟ್ ಚಲನ್ ಮೂಲಕ ಪರೀಕ್ಷಾ ಶುಲ್ಕವನ್ನು ಬ್ಯಾಂಕ್ ಗೆ ಪಾವತಿಸಿದ ಬ್ಯಾಂಕ್ ನ ಮೂಲ ಚಲನ್ ಪ್ರತಿ ಮತ್ತು ಇತರೆ ಎಲ್ಲಾ ಪೂರಕ ದಾಖಲೆಗಳನ್ನು ಮಂಡಳಿಗೆ ತಲುಪಿಸುವ ದಿನಾಂಕ: 2.9.2020

 

ಅಭ್ಯರ್ಥಿಗಳು ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಕೆಯ ಅಧಿಕೃತ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Karnataka sslc supplementary exam application process, application fee and important dates here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X