ಕೆ ಪಿ ಎಸ್ ಸಿ ಇಲಾಖಾ ಪರೀಕ್ಷೆ ಪ್ರವೇಶ ಪತ್ರ ಲಭ್ಯ

Posted By:

ಕೆ ಪಿ ಎಸ್ ಸಿ ಇಲಾಖಾ ಪರೀಕ್ಷೆ ಪ್ರಥಮ ಅಧಿವೇಶನದ ಪ್ರವೇಶ ಪತ್ರಗಳ ಕೆ ಪಿ ಎಸ್ ಸಿ ವೆಬ್ಸೈಟ್ ನಲ್ಲಿ ಲಭ್ಯವಿದ್ದು ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ರಾಜ್ಯದ ಆಡಳಿತವೆಲ್ಲವೂ ಅಧಿನಿಯಮ, ಸಂಹಿತೆ ಮತ್ತು ನಿಯಮಾವಳಿಗಳ ಮೂಲಕ ನಡೆಯುತ್ತಿವೆ. ಈ ಕಾನೂನುಗಳ ಅರಿವು ಪ್ರತಿಯೊಬ್ಬ ಸರ್ಕಾರಿ ನೌಕರನಿಗೆ ಇರಬೇಕಾದುದು ದಕ್ಷ ಆಡಳಿತ ದೃಷ್ಟಿಯಿಂದ ಅತ್ಯಗತ್ಯ. ಈ ಹಿನ್ನೆಲೆಯಲ್ಲೇ ಸರ್ಕಾರ ತನ್ನ ನೌಕರರಿಗೆ ಇಲಾಖಾ ಪರೀಕ್ಷೆಗಳನ್ನು ಕಳೆದ ಹಲವು ದಶಕಗಳಿಂದ ನಡೆಸಿಕೊಂಡು ಬರುತ್ತಿದೆ.

ಪ್ರವೇಶ ಪತ್ರ ಲಭ್ಯ

1974ರ ಕರ್ನಾಟಕ ಸರ್ಕಾರಿ ಸೇವಾ (ಸೇವೆ ಮತ್ತು ಕನ್ನಡ ಭಾಷಾ ಪರೀಕ್ಷೆ) ನಿಯಮಾವಳಿ ರೀತ್ಯಾ ಕರ್ನಾಟಕ ರಾಜ್ಯದ ಆಡಳಿತ ವಿದ್ಯಮಾನಗಳ ಸಂಬಂಧದಲ್ಲಿ ನಿಯುಕ್ತಿಗೊಂಡ ಸರ್ಕಾರಿ ನೌಕರನು ತನ್ನ ಅಧಿಕೃತ ಕರ್ತವ್ಯಗಳನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಆಯಾ ಹುದ್ದೆಗೆ ಸಂಬಂಧಿಸಿದ ಇಲಾಖಾ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳುವುದು ಕಡ್ಡಾಯ.

ಆಯೋಗವು ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಅಕೌಂಟ್ಸ್ ಹೈಯರ್, ಅಕೌಂಟ್ಸ್ ಲೋಯರ್, ಜನರಲ್ ಲಾ ಭಾಗ 1 ಮತ್ತು 2, ರೆವಿನ್ಯೂ ಹೈಯರ್ ಎಸ್​ಸಿಎಸ್ ಮುಂತಾದ 63 ವಿಷಯಗಳ ವಿವಿಧ ಪತ್ರಿಕೆಗಳಿಗೆ ವಸ್ತುನಿಷ್ಠ ಬಹು ಆಯ್ಕೆ ಮಾದರಿ (Objective Type Multiple Choice) ಪರೀಕ್ಷೆಯನ್ನು ನಡೆಸಲಿದೆ. ಇವುಗಳ ಪರೀಕ್ಷಾ ಅವಧಿಯನ್ನು 2:00 ಗಂಟೆಗಳಿಗೆ ನಿಗದಿಪಡಿಸಲಾಗಿದೆ. ಅಲ್ಲದೇ 13 ವಿಷಯಗಳ ವಿವಿಧ ಪತ್ರಿಕೆಗಳಿಗೆ ವಿವರಣಾತ್ಮಕ ಮಾದರಿಯಲ್ಲಿ (Descriptive Type) ಪರೀಕ್ಷೆ ಕೂಡ ನಡೆಸಲಾಗುವುದು.

ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳುವ ವಿಧಾನ

  • ಕೆ ಪಿ ಎಸ್ ಸಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
  • ವೆಬ್ ಪೇಜ್ ನ ಮಧ್ಯಭಾಗದಲ್ಲಿ ಕಾಣುವ "Apply Online-Admission Ticket Download " ಬಟನ್ ಕ್ಲಿಕ್ ಮಾಡಿ
  • ಅಪ್ಲಿಕೇಷನ್ ನಂಬರ್ ನಮೂದಿಸಿ ಲಾಗಿನ್ ಅಗಿ
  • ಪ್ರವೇಶ ಪತ್ರ ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಸೂಚನೆ

ಅಪ್ಲಿಕೇಷನ್ ನಂಬರ್ ಕಳೆದುಹೋಗಿದ್ದರೆ ಅಥವಾ ಮರೆತುಹೋಗಿದ್ದರೆ "Forgot Application Number " ಬಟನ್ ಕ್ಲಿಕ್ ಮಾಡಿ. ನಿಮ್ಮ ಹೆಸರು ಮತ್ತು ಜನ್ಮದಿನಾಂಕವನ್ನು ನಮೂದಿಸುವ ಮೂಲಕ ಪ್ರವೇಶ ಪತ್ರ ಪಡೆಯಬಹುದಾಗಿದೆ.

ಆಯೋಗದ ವೆಬ್ಸೈಟ್‍ನಲ್ಲಿ ಡೌನ್ಲೋಡ್ ಮಾಡಿಕೊಂಡ ಪ್ರವೇಶಪತ್ರವನ್ನು ಅಭ್ಯರ್ಥಿಗಳು ಪರೀಕ್ಷಾ ಉಪ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರುಪಡಿಸಬೇಕು. ಇಲ್ಲದಿದ್ದಲ್ಲಿ ಯಾವುದೇ ಕಾರಣಕ್ಕೂ ಪರೀಕ್ಷೆ ಬರೆಯಲು ಅನುಮತಿನೀಡಲಾಗುವುದಿಲ್ಲ.

ಪರೀಕ್ಷೆಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಆಯೋಗದ ವೆಬ್ಸೈಟ್ kpsc.kar.nic.in ನಲ್ಲಿ ಲಭ್ಯವಿರುವ ಅಧಿಸೂಚನೆಯನ್ನು ನೋಡಬಹುದು ಹಾಗೂ ವಿಚಾರಣೆಗಾಗಿ ಆಯೋಗದ ದೂರವಾಣಿ ಸಂಖ್ಯೆ. 080-30574944 / 30574945 / 30574957 / 30574901/ 30574915 / 30574910 ಅನ್ನು ಸಂಪರ್ಕಿಸಬಹುದು.

English summary
KPSC Admission ticket for Dept.Examination 2017 1st Session is hosted. Candidates can download the hall tickets in its official website.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia