ಕೆಪಿಎಸ್ಸಿ: ಎಫ್ ಡಿ ಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಹೇಗಿರುತ್ತೆ ಗೊತ್ತಾ?

ಕರ್ನಾಟಕ ಲೋಕ ಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕರ ಹುದ್ದೆ ಪರೀಕ್ಷೆಯು ಮೂರು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಒಟ್ಟು 350 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಮೂರೂ ಪತ್ರಿಕೆಗಳಲ್ಲೂ ಉತ್ತೀರ್ಣರಾಗಬೇಕು.

By Kavya

ಕರ್ನಾಟಕ ಲೋಕ ಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಕೇಳಲಾಗುವು ಪ್ರಶ್ನೆ ಪತ್ರಿಕೆ ಮತ್ತು ಪಠ್ಯಕ್ರಮದ ವಿವರ ಈ ಕೆಳಗಿನಂತಿದೆ.

ಕೆಪಿಎಸ್ಸಿ: FDA, SDA ಹುದ್ದೆಗಳ ನೇಮಕಾತಿಕೆಪಿಎಸ್ಸಿ: FDA, SDA ಹುದ್ದೆಗಳ ನೇಮಕಾತಿ

ಪರೀಕ್ಷೆಯು ಮೂರು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಒಟ್ಟು 350 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಮೂರೂ ಪತ್ರಿಕೆಗಳಲ್ಲೂ ಉತ್ತೀರ್ಣರಾಗಬೇಕು.

ಕೆಪಿಎಸ್ಸಿ: ಎಫ್ ಡಿ ಎ ಪರೀಕ್ಷೆ ಪ್ರಶ್ನೆ ಪತ್ರಿಕೆ

ಪ್ರಶ್ನೆ ಪತ್ರಿಕೆ ವಿವರ

ಪತ್ರಿಕೆ 1: ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ: 150 ಅಂಕಗಳು, ವಿವರಣಾತ್ಮಕ ಪತ್ರಿಕೆ (Descriptive Type)

ಪತ್ರಿಕೆ-2: ಸಾಮಾನ್ಯ ಕನ್ನಡ/ಸಾಮಾನ್ಯ ಇಂಗ್ಲೀಷ್ : 100 ಅಂಕಗಳು, ವಸ್ತುನಿಷ್ಠ ಬಹು ಆಯ್ಕೆಯ/Objective Multiple Choice Type

ಪತ್ರಿಕೆ-3: ಸಾಮಾನ್ಯ ಜ್ಞಾನ : 100 ಅಂಕಗಳು, ವಸ್ತುನಿಷ್ಠ ಬಹು ಆಯ್ಕೆಯ/Objective Multiple Choice Type

ಪ್ರತಿಯೊಂದು ಪತ್ರಿಕೆಯನ್ನು ಒಂದುವರೆ ಗಂಟೆ ಸಮಯದಲ್ಲಿ ಉತ್ತರಿಸಬೇಕಾಗುತ್ತದೆ.

ಪತ್ರಿಕೆ 1: ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಪಠ್ಯಕ್ರಮ

ವಿಷಯ ಸಮಗ್ರ ಅರ್ಥೈಸುವಿಕೆ, ಪದಪ್ರಯೋಗ, ವಿಷಯ ಸಂಕ್ಷೇಪಣೆ, ಪದ ಜ್ಞಾನ, ಲಘು ಪ್ರಬಂಧ ಮತ್ತು ಇಂಗ್ಲಿಷ್ ನಿಂದ ಕನ್ನಡಕ್ಕೆ ಭಾಷಾಂತರ ಮಾಡುವುದುನ್ನು ಒಳಗೊಂಡಿರುತ್ತದೆ.

ಪತ್ರಿಕೆ-2: ಸಾಮಾನ್ಯ ಕನ್ನಡ/ಸಾಮಾನ್ಯ ಇಂಗ್ಲೀಷ್

ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲೀಷ್ ಪತ್ರಿಕೆಯು ಸಾಮಾನ್ಯವಾಗಿ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವಿದ್ಯಾರ್ಥಿಗೆ ಇರಬೇಕಾದ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುವುದು ಇದರ ಮೂಲಕ ಅಭ್ಯರ್ಥಿಯ ಕನ್ನಡ / ಇಂಗ್ಲೀಷ್ ವ್ಯಾಕರಣ, ಶಬ್ಧ ಸಂಪತ್ತು, ಕಾಗುಣಿತ (Spelling) ಸಮನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು ಇವುಗಳ ಪರಿಜ್ಞಾನ, ಇಂಗ್ಲೀಷ್ / ಕನ್ನಡ ಭಾಷೆಯನ್ನು ಅರಿಯುವ ಮತ್ತು ಗ್ರಹಿಸುವ ಅಭ್ಯರ್ಥಿಯ ಶಕ್ತಿಯ ಮತ್ತು ಅದರ ಸರಿಯಾದ ಹಾಗೂ ತಪ್ಪು ಬಳಕೆ ಇತ್ಯಾದಿಗಳನ್ನು ಪರಿಶೀಲಿಸುವ ಅಭ್ಯರ್ಥಿಯ ಸಾಮಥ್ರ್ಯ ಇವುಗಳನ್ನು ಪರೀಕ್ಷಿಸಲು ಉದ್ದೇಶಿಸಲಾಗಿದೆ.

ಅಭ್ಯರ್ಥಿಗಳು ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲೀಷ್ ಪತ್ರಿಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡತಕ್ಕದ್ದು. ಒಮ್ಮೆ ಆಯ್ಕೆ ಮಾಡಿದ ನಂತರ ಬದಲಾವಣೆಗೆ ಅವಕಾಶ ಇರುವುದಿಲ್ಲ.

ಪತ್ರಿಕೆ-3: ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ ಪತ್ರಿಕೆಯು ಸಾಮಾನ್ಯವಾಗಿ ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವಿದ್ಯಾರ್ಥಿಗೆ ಇರಬೇಕಾದ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುವುದು ಮತ್ತು ಇದು ಭಾರತದ ಸಂವಿಧಾನ, ಭಾರತ ಇತಿಹಾಸ, ಮತ್ತು ಸಂಸ್ಕೃತಿ, ಭಾರತದ ಸಾಮಾನ್ಯ ಹಾಗೂ ಆರ್ಥಿಕ, ಭೂಗೋಳ ಶಾಸ್ತ್ರ, ಇತ್ತೀಚಿನ ಘಟನೆಗಳು, ದೈನಿಕ ಜೀವನದಲ್ಲಿ ವಿಜ್ಞಾನ ಮತ್ತು ಒಬ್ಬ ವಿದ್ಯಾವಂತ ವ್ಯಕ್ತಿಯು ದೈನಂದಿನ ಜೀವನದಲ್ಲಿ ಗಮನಿಸಬಹುದಾದಂತಹ ವಿಷಯಗಳು. ಇವುಗಳ ಮೇಲಿನ ಪ್ರಶ್ನೆಗಳನ್ನು
ಒಳಗೊಂಡಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
kpsc First division assistant question paper pattern and syllabus. FDA exam consists of three papers.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X