ಕೆಪಿಎಸ್ಸಿ : ಗ್ರೂಪ್ 'ಸಿ' ತಾಂತ್ರಿಕೇತರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷಾ ವಿಧಾನ ಮತ್ತು ಪಠ್ಯಕ್ರಮ

ಸ್ಪರ್ಧಾತ್ಮಕ ಪರೀಕ್ಷೆಯು ವಸ್ತು ನಿಷ್ಠ ಬಹು ಆಯ್ಕೆ ಮಾದರಿಯಲ್ಲಿದ್ದು ಋಣಾತ್ಮಕ ಮೌಲ್ಯಮಾಪನವಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುವುದು.

ಕೆಪಿಎಸ್ಸಿ ಗ್ರೂಪ್ 'ಸಿ' ತಾಂತ್ರಿಕೇತರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳು ಎರಡು ಮಟ್ಟದ್ದಾಗಿರುತ್ತದೆ. ಪದವಿ ವಿದ್ಯಾರ್ಹತೆಯುಳ್ಳ ಎಲ್ಲಾ ಹುದ್ದೆಗಳಿಗೆ ಒಂದು ಪರೀಕ್ಷೆ ಹಾಗೂ ಪದವಿಗಿಂತ ಕೆಳಮಟ್ಟದ ವಿದ್ಯಾರ್ಹತೆಯನ್ನುಳ್ಳ ಎಲ್ಲಾ ಹುದ್ದೆಗಳಿಗೆ ಇನ್ನೊಂದು ಪರೀಕ್ಷೆ.

ಅಭ್ಯರ್ಥಿಗಳು ಪದವಿ ವಿದ್ಯಾರ್ಹತೆಯುಳ್ಳ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರೂ ಒಂದೇ ಪದವಿ ಮಟ್ಟದ ಪರೀಕ್ಷೆಯನ್ನು ಬರೆಯತಕ್ಕದ್ದು, ಈ ಪರೀಕ್ಷೆಯ ಫಲಿತಾಂಶವನ್ನು ಅವರು ಅರ್ಜಿ ಸಲ್ಲಿಸಿದ ಪದವಿ ಮಟ್ಟದ ವಿದ್ಯಾರ್ಹತೆಯುಳ್ಳ ಇತರೆ ಎಲ್ಲಾ ಹುದ್ದೆಗಳಿಗೂ ಪರಿಗಣಿಸಲಾಗುವುದು.

ಕೆಪಿಎಸ್ಸಿ: ಗ್ರೂಪ್ 'ಸಿ' 1604 ಹುದ್ದೆಗಳ ನೇಮಕಾತಿಕೆಪಿಎಸ್ಸಿ: ಗ್ರೂಪ್ 'ಸಿ' 1604 ಹುದ್ದೆಗಳ ನೇಮಕಾತಿ

ಕೆಪಿಎಸ್ಸಿ : ಗ್ರೂಪ್ 'ಸಿ' ಪರೀಕ್ಷಾ ವಿಧಾನ ಮತ್ತು ಪಠ್ಯಕ್ರಮ

ಸ್ಪರ್ಧಾತ್ಮಕ ಪರೀಕ್ಷೆಯು ವಸ್ತು ನಿಷ್ಠ ಬಹು ಆಯ್ಕೆ ಮಾದರಿಯಲ್ಲಿದ್ದು ಋಣಾತ್ಮಕ ಮೌಲ್ಯಮಾಪನವಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುವುದು.

ಪತ್ರಿಕೆ ವಿವರ

  1. ಸಾಮಾನ್ಯ ಜ್ಞಾನ-100 ಅಂಕಗಳು (1 ಗಂಟೆ 30 ನಿಮಿಷ)
  2. ಸಂವಹನ-100 ಅಂಕಗಳು (2 ಗಂಟೆ)
    (a) ಸಾಮಾನ್ಯ ಕನ್ನಡ (ಗರಿಷ್ಠ ಅಂಕಗಳು-35)
    (b) ಸಾಮಾನ್ಯ ಇಂಗ್ಲಿಷ್ (ಗರಿಷ್ಠ ಅಂಕಗಳು-35)
    (c) ಗಣಕ ಯಂತ್ರ ಜ್ಞಾನ (ಗರಿಷ್ಠ ಅಂಕಗಳು-30)

ಪದವಿ ವಿದ್ಯಾರ್ಹತೆ ಹೊಂದಿರುವ ಗ್ರೂಪ್ 'ಸಿ' ತಾಂತ್ರಿಕೇತರ ಹುದ್ದೆಗಳಿಗೆ ಪಠ್ಯಕ್ರಮ

ಪತ್ರಿಕೆ 1/ - ಸಾಮಾನ್ಯ ಜ್ಞಾನ

  1. ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಜ್ಞಾನ
  2. ಸಾಮಾನ್ಯ ವಿಜ್ಞಾನ
  3. ಭೂಗೋಳಶಾಸ್ತ್ರ
  4. ಸಮಾಜ ವಿಜ್ಞಾನ
  5. ಭಾರತೀಯ ಸಮಾಜ ಮತ್ತು ಅದರ ಕ್ರಿಯಾಶೀಲತೆ
  6. ಭಾರತೀಯ ಇತಿಹಾಸ
  7. ಭಾರತೀಯ ಸಂವಿಧಾನ ಮತ್ತು ಸಾರ್ವಜನಿಕ ಆಡಳಿತ
  8. ಪ್ರಾಯೋಗಿಕ ಜ್ಞಾನ ಮತ್ತು ಮಾನಸಿಕ ಸಾಮಥ್ರ್ಯತೆ (ಎಸ್.ಎಸ್.ಎಲ್.ಸಿ ಮಟ್ಟದ)
  9. ಕರ್ನಾಟಕ ರಾಜ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸ
  10. ಸ್ವಾತಂತ್ರದ ನಂತರ ಕರ್ನಾಟಕದಲ್ಲಿ ಭೂ ಸುಧಾರಣೆ ಮತ್ತು ಸಾಮಾಜಿಕ ಬದಲಾವಣೆಗಳು
  11. ಕರ್ನಾಟಕದ ಆರ್ಥಿಕತೆ; ಅದರ ಬಲ ಮತ್ತು ದೌರ್ಬಲ್ಯ: ಪ್ರಸ್ತುತ ಹಂತ
  12. ಗ್ರಾಮೀಣ ಅಭಿವೃದ್ದಿ , ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ
  13. ಕರ್ನಾಟಕದ ಸಮರ್ಥ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ
  14. ಕರ್ನಾಟಕದಲ್ಲಿ ಪರಿಸರ ಸಮಸ್ಯೆಗಳು ಮತ್ತು ಅಭಿವೃದ್ಧಿ ವಿಷಯಗಳು

ಪತ್ರಿಕೆ -2: ಸಂವಹನ

  1. ಸಾಮಾನ್ಯ ಕನ್ನಡ (ಗರಿಷ್ಠ ಅಂಕಗಳು-35)
  2. ಸಾಮಾನ್ಯ ಇಂಗ್ಲಿಷ್ (ಗರಿಷ್ಠ ಅಂಕಗಳು-35)
  3. ಗಣಕ ಯಂತ್ರ ಜ್ಞಾನ (ಗರಿಷ್ಠ ಅಂಕಗಳು-30)

ಸ್ಪರ್ಧಾತ್ಮಕ ಪರೀಕ್ಷೆಗೆ ಅಭ್ಯರ್ಥಿಗಳು ಅವರ ಪ್ರವೇಶ ಪತ್ರ ಹಾಗೂ ಮೂಲ ಗುರುತಿನ ಚೀಟಿಯನ್ನು (ವೋಟರ್ ಐಡಿ/ ಪ್ಯಾನ್ ಕಾರ್ಡ್/ಆಧಾರ್ ಕಾರ್ಡ್/ ಪಾಸ್‍ಪೋರ್ಟ್/ ಸರ್ಕಾರಿ ನೌಕರರ ಗುರುತಿನ ಚೀಟಿ/ ಡ್ರೈವಿಂಗ್ ಲೈಸೆನ್ಸ್) ಕಡ್ಡಾಯವಾಗಿ ಹಾಜರುಪಡಿಸಬೇಕು. ತಪ್ಪಿದ್ದಲ್ಲಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದಿಲ್ಲ.

ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲೂ ಇರುತ್ತವೆ. ಕನ್ನಡ ಭಾಷೆಯಲ್ಲಿರುವ ಪ್ರಶ್ನೆಗಳ ಭಾಷಾಂತರದಲ್ಲಿ ಏನಾದರೂ ಅಸ್ಪಷ್ಟತೆ ಇದ್ದಲ್ಲಿ ಅಭ್ಯರ್ಥಿಗಳು ಆಂಗ್ಲ ಭಾಷೆಯಲ್ಲಿರುವ ಪ್ರಶ್ನೆಗಳನ್ನು ನೋಡುವುದು ಹಾಗೂ ಇದೇ ಅಂತಿಮವಾಗಿರುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Competitive tests of KPSC Group 'C' non-technical posts are two levels. One is for those who qualifying degree and another one is for rank below the graduate qualification.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X