2015 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅಧಿಸೂಚನೆ ಹೊರಡಿಸಿದೆ.
ಪ್ರಿಲಿಮ್ಸ್ ನಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹರಾಗಿದ್ದು, ಅಕ್ಟೋಬರ್ 16 ರೊಳಗೆ ಅರ್ಜಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ.
ಮುಖ್ಯ ಪರೀಕ್ಷೆಯು 2017 ರ ನವೆಂಬರ್ ತಿಂಗಳ ಕೊನೆಯ ವಾರ ಹಾಗೂ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ವೇಳಾ ಪಟ್ಟಿಯನ್ನು ಶೀಘ್ರದಲ್ಲೇ ಕೆಪಿಎಸ್ಸಿ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.
ಅರ್ಜಿ ಸಲ್ಲಿಕೆ
ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅಭ್ಯರ್ಥಿಯು ತನ್ನ ಪೂರ್ವಭಾವಿ ಪರೀಕ್ಷೆಯ ನೋಂದಣಿ ಸಂಖ್ಯೆ ಬಳಸಿ ಅರ್ಜಿ ಸಲ್ಲಿಸತಕ್ಕದ್ದು
ಪರೀಕ್ಷಾ ಶುಲ್ಕ
ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.500/-
ಪ.ಜಾ/ಪ.ಪಂ/ಪ್ರ-1/ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.300/-
ಪರೀಕ್ಷೆ ವಿವರ
ಮುಖ್ಯ ಪರೀಕ್ಷೆಯು ಅರ್ಹತಾದಾಯಕ ಮತ್ತು ಕಡ್ಡಾಯ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. 300 ಅಂಕಗಳ ಅರ್ಹತಾದಾಯಕ ಪತ್ರಿಕೆಗಳು ಮತ್ತು 1750 ಅಂಕಗಳ ಕಡ್ಡಾಯ ಪತ್ರಿಕೆಗಳಿಗೆ ಅಭ್ಯರ್ಥಿಯು ಉತ್ತರಿಸಬೇಕಾಗುತ್ತದೆ.
ಕೆಪಿಎಸ್ಸಿ ಮುಖ್ಯ ಪರೀಕ್ಷೆಯ ವಿವರಗಳು
ಅರ್ಹತಾದಾಯಕ ಪತ್ರಿಕೆಗಳು | ಕಡ್ಡಾಯ ಕನ್ನಡ | 150 ಅಂಕಗಳು | 2 ಗಂಟೆಗಳು |
ಕಡ್ಡಾಯ ಆಂಗ್ಲ ಭಾಷೆ | 150 ಅಂಕಗಳು | 2 ಗಂಟೆಗಳು |
ಕಡ್ಡಾಯ ಪತ್ರಿಕೆಗೆಳು
ಪತ್ರಿಕೆ | ವಿಷಯ | ಅಂಕಗಳು | ಸಮಯ |
ಪತ್ರಿಕೆ-1 | ಪ್ರಬಂಧ | 250 | 3 ಗಂಟೆಗಳು |
ಪತ್ರಿಕೆ-2 | ಸಾಮಾನ್ಯ ಅಧ್ಯಯನ-1 | 250 | 3 ಗಂಟೆಗಳು |
ಪತ್ರಿಕೆ-3 |
ಪ್ರಮುಖ ದಿನಾಂಕಗಳು
ಆನ್-ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-10-2017
ಶುಲ್ಕ ಪಾವತಿಸಲು ಕೊನೆಯ ದಿನಾಂಕ: 17-10-2017
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ