ಕೆಪಿಎಸ್ಸಿ ಮುಖ್ಯ ಪರೀಕ್ಷೆ: ಸಾಮಾನ್ಯ ಅಧ್ಯಯನ ಪತ್ರಿಕೆಗಳ ವಿವರ

Posted By:

ಕೆಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿ ಒಟ್ಟು ನಾಲ್ಕು ಸಾಮಾನ್ಯ ಅಧ್ಯಯನದ ಪ್ರಶ್ನೆಪತ್ರಿಕೆಗಳನ್ನು ಕೇಳಲಾಗಿರುತ್ತದೆ. ಎಲ್ಲಾ ಪತ್ರಿಕೆಗಳನ್ನು ವಿವರಣಾತ್ಮಕ ಮಾದರಿಯಲ್ಲೇ ಉತ್ತರಿಸಬೇಕಾಗುತ್ತದೆ.

ಕೆಪಿಎಸ್ಸಿ ಮುಖ್ಯ ಪರೀಕ್ಷೆ: ಪ್ರಬಂಧ ಮತ್ತು ಅರ್ಹತಾ ಪತ್ರಿಕೆಗಳ ವಿವರ

ಪ್ರತಿ ಸಾಮಾನ್ಯ ಅಧ್ಯಯನ ಪತ್ರಿಕೆಯು 250 ಅಂಕಗಳನ್ನು ಹೊಂದಿದ್ದು, ಉತ್ತರಿಸಲು ಪ್ರತಿ ಪತ್ರಿಕೆಗೆ 3 ಗಂಟೆಗಳ ಕಾಲಾವಕಾಶ ನೀಡಲಾಗಿರುತ್ತದೆ. ಪತ್ರಿಕೆಯನ್ನು ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ.

ಸಾಮಾನ್ಯ ಅಧ್ಯಯನ ಪತ್ರಿಕೆಗಳ ವಿವರ

ಸಾಮಾನ್ಯ ಅಧ್ಯಯನ ಪತ್ರಿಕೆಗಳ ವಿವರ

ಸಾಮಾನ್ಯ ಅಧ್ಯಯನ ಪತ್ರಿಕೆ-1

 1. ಚಾರಿತ್ರಿಕ ಮತ್ತು ಸಾಂಸ್ಕೃತಿಕ ಪರಂಪರೆ (ಭಾರತ ಹಾಗೂ ಕರ್ನಾಟಕ): ಭಾರತದ ಪಾರಂಪರಿಕ ಸಾಂಸ್ಕೃತಿಕ ಸಂಪತ್ತು, ಭಾರತೀಯ ಸಮಾಜಗಳ ಪರಿವರ್ತನೆಯತ್ತ ಪ್ರಮುಖ ವೈಚಾರಿಕ ಸಿದ್ಧಾಂತಗಳು, ಅಧುನಿಕ ಭಾರತದ ಇತಿಹಾಸ, 19 ನೇ ಶತಮಾನದ ಸುಧಾರಕರು ಹಾಗೂ ಪ್ರಾರಂಭದಿಂದಾದ ಸುಧಾರಣೆಗಳು, ಕದಂಬರಿಂದ ಹೊಯ್ಸಳರವರೆಗೂ, ವಿಜಯನಗರ ಸಾಮ್ರಾಜ್ಯ ಹಾಗೂ ಅನಂತರ (1339-1799), ಆಧುನಿಕ ಮೈಸೂರು (1799-1947), ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳವಳಿ ಹಾಗೂ ಏಕೀಕರಣ (1885-1956)
 • ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನ ಚಿತ್ರಣ
 • ಭಾರತದ ಆರ್ಥಿಕ ವ್ಯವಸ್ಥೆ, ಯೋಜನೆ, ಗ್ರಾಮೀಣಾಭಿವೃದ್ಧಿ ದತ್ತಾಂಶ, ವಿಧಾನಗಳು ಮತ್ತು ವಿಶ್ಲೇಷಣೆ

ಸಾಮಾನ್ಯ ಅಧ್ಯಯನ-2

 1. ಭೌಗೋಳಿಕ ಲಕ್ಷಣಗಳು, ನೈಸರ್ಗಿಕ ಸಂಪನ್ಮೂಲಗಳು: ವಿಶ್ವ ಭೂಗೋಳಶಾಸ್ತ್ರ, ಭಾರತದ ಭೂಗೋಳಶಾಸ್ತ್ರ, ಕರ್ನಾಟಕ ಭೂಗೋಳಶಾಸ್ತ್ರ
 2. ಭಾರತದ ಸಂವಿಧಾನದ ಅವಲೋಕನ
 3. ಸಾರ್ವಜನಿಕ ಆಡಳಿತ ಮತ್ತು ನಿರ್ವಹಣೆ, ಅಂತರಾಷ್ಟ್ರೀಯ ಸಂಬಂಧಗಳು

ಸಾಮಾನ್ಯ ಅಧ್ಯಯನ -3

 1. ಭಾರತದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಪಾತ್ರ ಹಾಗೂ ಪ್ರಭಾವ, ಸಾರ್ವಜನಿಕ ವಲಯದಲ್ಲಿ ಮಾಹಿತಿ ತಂತ್ರಜ್ಞಾನ.
 2. ನೈಸರ್ಗಿಕ ವಿಜ್ಞಾನ, ಜೀವ ವಿಜ್ಞಾನ, ಕೃಷಿ ವಿಜ್ಞಾನ ಆರೋಗ್ಯ ಮತ್ತು ನೈರ್ಮಲ್ಯ ಕ್ಷೇತ್ರಗಳಲ್ಲಿ ಪ್ರಗತಿ ಮತ್ತು ಆಧುನಿಕ ಪ್ರವೃತ್ತಿಗಳು.
 3. ಪರಿಸರ ಮತ್ತು ಜೀವಿ ಪರಿಸ್ಥಿತಿಶಾಸ್ತ್ರ, ಇವುಗಳ ಮೇಲೆ ಅಭಿವೃದ್ಧಿಯಿಂದಾಗುವ ಪರಿಣಾಮಗಳು ಹಾಗೂ ಅದರ ಸವಾಲುಗಳು

ಸಾಮಾನ್ಯ ಅಧ್ಯಯನ-4

 1. ನೈತಿಕತೆ
 2. ಐಕ್ಯತೆ
 3. ಅಭಿಕ್ಷಮತೆ

ನೈತಿಕತೆ, ಪ್ರಾಮಾಣಿಕ ನಿಷ್ಠುರತೆ, ನಾಗರೀಕ ಸೇವೆಯೆಡಗಿನ ಒಲವು ಮತ್ತು ಅರ್ಹತೆ

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

English summary
KPSC main examinations general study paper details, There are 4 general papers each consisting 250 marks.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia