ಕೆಪಿಎಸ್ಸಿ ಮುಖ್ಯ ಪರೀಕ್ಷೆ: ಪ್ರಬಂಧ ಮತ್ತು ಅರ್ಹತಾ ಪತ್ರಿಕೆಗಳ ವಿವರ

Posted By:

ಕರ್ನಾಟಕ ಲೋಕಸೇವಾ ಆಯೋಗದ 2015 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ನಡೆಸುವ ಮುಖ್ಯ ಪರೀಕ್ಷೆಯ ಏಳು ಕಡ್ಡಾಯ ಪತ್ರಿಕೆ ಮತ್ತು ಎರಡು ಅರ್ಹಾತಾ ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲಿಷ್ ಪತ್ರಿಕೆಗಳಲ್ಲಿ ಪಡೆದ ಅಂಕಗಳು ಅರ್ಹತಾದಾಯಕ ಸ್ವರೂಪದ್ದಾಗಿರುತ್ತದೆ. ಅರ್ಹತೆ ಪಡೆಯಲು ಈ ಪತ್ರಿಯೊಂದು ಪತ್ರಿಕೆಯಲ್ಲಿ ಕನಿಷ್ಠ ಶೇ.35 ಅಂಕಗಳು, ಅಂದರೆ 52.5 ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ.

ಕೆಪಿಎಸ್ಸಿ ಮುಖ್ಯ ಪರೀಕ್ಷೆ ಪತ್ರಿಕೆಗಳ ವಿವರ
ಈ ಎರಡೂ ಪತ್ರಿಕೆಗಳಲ್ಲಿ ಗಳಿಸಿದ ಅಂಕಗಳನ್ನು ಅಭ್ಯರ್ಥಿಗಳ ಆಯ್ಕೆಯ ಅರ್ಹತೆಯನ್ನು ನಿಗದಿಪಡಿಸುವಲ್ಲಿ ಪರಿಗಣಿಸಲಾಗುವುದಿಲ್ಲ.

ಕೆಪಿಎಸ್ಸಿ ಮುಖ್ಯ ಪರೀಕ್ಷೆ: ಲಿಖಿತ ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ವಿವರಗಳು

ಮುಖ್ಯ ಪರೀಕ್ಷೆಯ ಕಡ್ಡಾಯ ಕನ್ನಡ ಪತ್ರಿಕೆ ಮತ್ತು ಕಡ್ಡಾಯ ಇಂಗ್ಲಿಷ್ ಪತ್ರಿಕೆ ಎಸ್ ಎಸ್ ಎಲ್ ಸಿ ಯ ಪ್ರಥಮ ಭಾಷೆಯ ಮಟ್ಟದ್ದಾಗಿರುತ್ತದೆ ಮತ್ತು ವಿವರಣಾತ್ಮಕವಾಗಿರುತ್ತದೆ.

ಕೆಪಿಎಸ್ಸಿ: ಮುಖ್ಯ ಪರೀಕ್ಷೆ ಅರ್ಜಿ ಸಲ್ಲಿಕೆ ಪ್ರಾರಂಭ

ಅರ್ಹತಾದಾಯಕ ಪತ್ರಿಕೆಗಳ ವಿವರ

ಸಾಮಾನ್ಯ ಕನ್ನಡ

ವಿಷಯಅಂಕಗಳು
ವಿಷಯದ ಸಮಗ್ರ ಅರ್ಥೈಸುವಿಕೆ25
ಪದ ಪ್ರಯೋಗ25
ವಿಷಯ ಸಂಕ್ಷೇಪಣೆ25
ಪದ ಜ್ಞಾನ25
ಲಘು ಪ್ರಬಂಧ25
ಇಂಗ್ಲಿಷ್ ನಿಂದ ಕನ್ನಡಕ್ಕೆ ಭಾಷಾಂತರ25

ಇಂಗ್ಲಿಷ್

ವಿಷಯ ಅಂಕಗಳು
Comprehension of given passages25
Precise writing25
Usage25
Vocabulary25
Short essay25
Communication skills25

ಕಡ್ಡಾಯ ಪತ್ರಿಕೆ ಪ್ರಬಂಧ

ಈ ಪತ್ರಿಕೆಯು ಕಡ್ಡಾಯ ಪತ್ರಿಕೆಗಳಲ್ಲಿ ಮೊದಲನೆಯದಾಗಿದ್ದು, ಇಲ್ಲಿ ಎರಡು ಪ್ರಬಂಧಗಳನ್ನು ಕೇಳಲಾಗಿರುತ್ತದೆ.(ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ). ಪ್ರತಿ ಪ್ರಬಂಧಕ್ಕೆ 125 ಅಂಕಗಳನ್ನು ನಿಗಧಿಪಡಿಸಲಾಗಿರುತ್ತದೆ.

  • ಪ್ರಬಂಧ 1- ಅಂತಾರಾಷ್ಟ್ರೀಯ/ರಾಷ್ಟ್ರೀಯ ಮಹತ್ವ ಪಡೆದ ವಿಷಯಗಳಿಗೆ ಸಂಬಂಧಿಸಿರುತ್ತದೆ.
  • ಪ್ರಬಂಧ 2- ರಾಜ್ಯದ/ ಸ್ಥಳೀಯ ಪ್ರಾಮುಖ್ಯತೆ/ ಪ್ರಚಲಿತ ವಿಷಯಗಳಿಗೆ ಸಂಬಂಧಿಸಿರುತ್ತದೆ.

ಈ ಪತ್ರಿಕೆಗಳ ಉದ್ದೇಶವು ಕನ್ನಡ ಮತ್ತು ಇಂಗ್ಲಿಷ್ ನ ಗಂಭೀರ ಗ್ರಾಂಥಿಕ ಗದ್ಯವನ್ನು ಓದುವ ಮತ್ತ ಗ್ರಹಿಸುವ ಸಾಮರ್ಥ್ಯವನ್ನು ಹಾಗೂ ಈ ಭಾಷೆಗಳಲ್ಲಿ ಅಭ್ಯರ್ಥಿಯ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಮತ್ತು ಸರಿಯಾಗಿ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಪರೀಕ್ಷಿಸುವುದಾಗಿರುತ್ತದೆ.

English summary
Karnataka Public Service Commission (KPSC) main exams eligibility paper and essay paper details. Aim of these papers is to test the candidate's ability to read and understand serious discursive prose and to express his ideas clearly.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia