ಕೆ ಪಿ ಟಿ ಸಿ ಎಲ್ ಸ್ಪರ್ಧಾತ್ಮಕ ಪರೀಕ್ಷೆ ಅಂತಿಮ ಕೀ ಉತ್ತರ ಪ್ರಕಟ

Posted By:

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ವಿವಿಧ ಹುದ್ದೆಗಳ ನೇಮಕಾತಿಗೆ ನಡೆಸಿದ್ದ ಪರೀಕ್ಷೆಯ ಅಂತಿಮ ಉತ್ತರಗಳ ಕೀ, ಅಂಕಗಳನ್ನು ಪ್ರಕಟಿಸಿದೆ.

ಸಹಾಯಕ ಇಂಜಿನಿಯರ್ (ವಿದ್ಯುತ್), ಸಹಾಯಕ ಲೆಕ್ಕಾಧಿಕಾರಿ, ಕಿರಿಯ ಇಂಜನಿಯರ್ (ವಿದ್ಯುತ್/ಸಿವಿಲ್), ಸಹಾಯಕ ಹಾಗೂ ಕಿರಿಯ ಸಹಾಯಕ ಹುದ್ದೆಗಳ ಅಂತಿಮ ಉತ್ತರಗಳ ಕೀ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಮತ್ತು ಸಹಾಯಕ ಇಂಜಿನಿಯರ್ (ವಿದ್ಯುತ್), ಸಹಾಯಕ ಲೆಕ್ಕಾಧಿಕಾರಿ, ಕಿರಿಯ ಇಂಜಿನಿಯರ್ (ವಿದ್ಯುತ್/ಸಿವಿಲ್) ಹುದ್ದೆಗಳ 1:2 ರ ಅನುಪಾತದ ಅಭ್ಯರ್ಥಿಯ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಅಧಿಸೂಚನೆ ಪ್ರಕಟಿಸಿದೆ.

ಅಂತಿಮ ಕೀ ಉತ್ತರ ಪ್ರಕಟ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ವಿವಿಧ ಎಸ್ಕಾಂಗಳಲ್ಲಿನ ನೇಮಕಾತಿಗೆ ಆನ್-ಲೈನ್ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ 07-07-2017 ರಿಂದ 11-07-2017 ರವರೆಗೆ ರಾಜ್ಯಾದ್ಯಂತ ನಡೆಸಲಾಗಿತ್ತು.

ಆನ್-ಲೈನ್ ಪರೀಕ್ಷೆಗೆ ಸಂಬಂಧಿಸಿದಂತೆ ಕೀ ಉತ್ತರಗಳನ್ನು ಇಲಾಖೆಯ ವೆಬ್ಸೈಟ್ ನಲ್ಲಿ 14-07-2017 ರಂದು ಪ್ರಕಟಿಸಲಾಗಿತ್ತು. ಅಲ್ಲದೇ ಆಕ್ಷೇಪಣೆ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿತ್ತು.

ಆಕ್ಷೇಪಣೆ ಪರಿಶೀಲಿಸಿದ ನಂತರ ಅಂತಿಮಗೊಳಿಸಿದ ಕೀ ಉತ್ತರಗಳನ್ನು ವಿದ್ಯುತ್ ಸರಬರಾಜು ಕಂಪನಿಗಳ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಅಭ್ಯರ್ಥಿಗಳು ಸಂಬಂಧಿಸಿದ ಕಂಪನಿಯ ವೆಬ್ಸೈಟ್ ನಲ್ಲಿ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮದಿನಾಂಕದೊಂದಿಗೆ ಲಾಗ್ ಆನ್ ಮಾಡುವುದರೊಂದಿಗೆ ತಾವು ಗಳಿಸಿದ ಅಂಕಗಳನ್ನು ನೋಡಬಹುದಾಗಿದೆ.

ಅಭ್ಯರ್ಥಿಗಳ ಮೂಲ ದಾಖಲಾತಿಗಳನ್ನು ಪರಿಶೀಲನೆಯ ಉದ್ದೇಶಕ್ಕಾಗಿ ಸಹಾಯಕ ಇಂಜಿನಿಯರ್, ಸಹಾಯಕ ಲೆಕ್ಕಾಧಿಕಾರಿ, ಕಿರಿಯ ಇಂಜಿನಿಯರ್ ಗೆ ಪ್ರಕಟಿಸಿದ ಹುದ್ದೆಗಳಿಗನುಗುಣವಾಗಿ 1:2ರ ಅನುಪಾತದ ಪಟ್ಟಿಯನ್ನು, ಕಟ್ ಆಫ್ ಶೇಕಡವಾರನ್ನು ಸಹ ಪ್ರಕಟಿಸಲಾಗಿದೆ. (ಇದು ಆಯ್ಕೆ ಪಟ್ಟಿಯಾಗಿರುವುದಿಲ್ಲ)

ಮುಂದಿನ ದಿನಗಳಲ್ಲಿ ದಾಖಲಾತಿ ಪರಿಶೀಲನೆ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ www.kptcl.com ಗಮನಿಸಿ

English summary
karnataka power transmission corporation limited (KPTCL)has released the final key answers of July examination.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia