ಕೆ-ಸೆಟ್ 2017: ಪರೀಕ್ಷೆ ಮತ್ತು ಪ್ರಶ್ನೆಪತ್ರಿಕೆ ವಿವರ

ಕೆ-ಸೆಟ್ ಪರೀಕ್ಷೆಯು ಯುಜಿಸಿ ಎನ್ ಇ ಟಿ ಮಾದರಿಯಲ್ಲೇ ಇರುತ್ತದೆ. ಇಲ್ಲೂ ಕೂಡ ಅಭ್ಯರ್ಥಿಗಳು ಮೂರು ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಬೇಕು. ಅಭ್ಯರ್ಥಿಗಳು ಮೂರು ಪ್ರಶ್ನೆಪತ್ರಿಕೆಗಳನ್ನು ಕಡ್ಡಾಯವಾಗಿ ಬರೆಯಲೇಬೇಕು.

ಕೆ-ಸೆಟ್ 2017 ರ ಅಧಿಸೂಚನೆ ಹೊರಬಿದ್ದಾಗಿದೆ. ಡಿಸೆಂಬರ್ 31 ಕ್ಕೆ ಪರೀಕ್ಷೆ ನಡೆಯಲಿದ್ದು ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರು ಸಹಾಯಕ ಪ್ರಾಧ್ಯಾಪಕರಾಗಲು ಅರ್ಹರಾಗುತ್ತಾರೆ.

ಕೆ ಸೆಟ್ 2017 ಅಧಿಸೂಚನೆ ಕೆ ಸೆಟ್ 2017 ಅಧಿಸೂಚನೆ

ಕೆ-ಸೆಟ್ ಪರೀಕ್ಷೆಯು ಯುಜಿಸಿ ಎನ್ ಇ ಟಿ ಮಾದರಿಯಲ್ಲೇ ಇರುತ್ತದೆ. ಇಲ್ಲೂ ಕೂಡ ಅಭ್ಯರ್ಥಿಗಳು ಮೂರು ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಬೇಕು. ಮೊದಲ ಪತ್ರಿಕೆ ಸಾಮಾನ್ಯ ಪತ್ರಿಕೆಯಾದರೆ ಉಳಿದೆರೆಡು ಪತ್ರಿಕೆಗಳು ಪತ್ರಿಕೆಗಳು ವಿಷಯಾಧರಿತ ಪತ್ರಿಕೆಗಳಾಗಿರುತ್ತವೆ.

ಕೆ-ಸೆಟ್ 2017

ಅಭ್ಯರ್ಥಿಗಳು ಮೂರು ಪ್ರಶ್ನೆಪತ್ರಿಕೆಗಳನ್ನು ಕಡ್ಡಾಯವಾಗಿ ಬರೆಯಲೇಬೇಕು. ಅಲ್ಲದೇ ಮೂರು ಪತ್ರಿಕೆಗಳಲ್ಲೂ ಉತ್ತೀರ್ಣರಾದರೆ ಮಾತ್ರ ಅರ್ಹತಾ ಪತ್ರ ದೊರೆಯುವುದು.

ಪ್ರಶ್ನೆಪತ್ರಿಕೆಗಳ ವಿವರ

ಸಿಬಿಎಸ್ಇ /ಯುಜಿಸಿ ನಡೆಸುವ ನೆಟ್ ಪರೀಕ್ಷೆಗಳಂತೆ ಕೆ-ಸೆಟ್ ಪರೀಕ್ಷೆ ಕೂಡ ಬಹು ಆಯ್ಕೆಯ ಪ್ರಶ್ನಾಪತ್ರಿಕೆಯಾಗಿದ್ದು, ಮೂರು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ.

  • ಪ್ರಶ್ನೆಪತ್ರಿಕೆ-1: ಸಾಮಾನ್ಯ ಪತ್ರಿಕೆ (100 ಅಂಕಗಳು)
  • ಪ್ರಶ್ನೆಪತ್ರಿಕೆ-2 : ವಿಷಯ ಪತ್ರಿಕೆ (100 ಅಂಕಗಳು)
  • ಪ್ರಶ್ನೆಪತ್ರಿಕೆ -3: ವಿಷಯ ಪತ್ರಿಕೆ (150 ಅಂಕಗಳು)

ಪ್ರತಿ ಪ್ರಶ್ನೆಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿರುತ್ತದೆ. ಅಭ್ಯರ್ಥಿಯು ಸೂಕ್ತ ಉತ್ತರವನ್ನು ಆಯ್ಕೆ ಮಾಡಬೇಕಾಗುತ್ತದೆ. ಪ್ರತಿ ಉತ್ತರಕ್ಕೆ ಎರಡು ಅಂಕಗಳು ನಿಗದಿಯಾಗಿದ್ದು, ತಪ್ಪು ಉತ್ತರಗಳಿಗೆ ಯಾವುದೇ ಅಂಕಗಳನ್ನು ಕಡಿತಗೊಳಿಸಲಾಗುವುದಿಲ್ಲ (ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ)

ಒಟ್ಟು ಎರಡು ಅವಧಿಗಳಲ್ಲಿ ಕೆ-ಸೆಟ್ ಪರೀಕ್ಷೆಯನ್ನು ನಡೆಸಲಾಗುವುದು. ಮೊದಲ ಅವಧಿಯಲ್ಲಿ ಮೊದಲೆರೆಡು ಪತ್ರಿಕೆ ಮತ್ತು ಎರಡನೇ ಅವಧಿಯಲ್ಲಿ ಮೂರನೇ ಪತ್ರಿಕೆಯನ್ನು ಉತ್ತರಿಸಬೇಕು

ಕೆ-ಸೆಟ್ 2017

ಮೊದಲ ಪತ್ರಿಕೆ

ಮೊದಲ ಪತ್ರಿಕೆಯು ಸಾಮಾನ್ಯ ಪತ್ರಿಕೆಯಾಗಿದ್ದು, ಒಟ್ಟು 60 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇಲ್ಲಿ ಅಭ್ಯರ್ಥಿಯು 50 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಲು ಅವಕಾಶವಿರುತ್ತದೆ. ಒಂದು ವೇಳೆ ಅಭ್ಯರ್ತಿಯು 50 ಕ್ಕಿಂತ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಿದರೆ ಮೊದಲ 50 ಉತ್ತರಗಳನ್ನು ಪರಿಗಣಿಸಲಾಗುತ್ತದೆ. ನೂರು ಅಂಕಗಳ ಈ ಪತ್ರಿಕೆಯನ್ನು ಉತ್ತರಿಸಲು ಒಂದು ಗಂಟೆ ಹದಿನೈದು ನಿಮಿಷಗಳ ಕಾಲಾವಕಾಶ ನೀಡಲಾಗಿರುತ್ತದೆ.

ಎರಡನೇ ಪತ್ರಿಕೆ

ಎರಡನೇ ಪತ್ರಿಕೆಯು 50 ಪ್ರಶ್ನೆಗಳನ್ನು ಒಳಗೊಂಡಿದ್ದು ಇದು ವಿಷಯಾಧರಿತ ಪತ್ರಿಕೆಯಾಗಿರುತ್ತದೆ.ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗುತ್ತದೆ. ನೂರು ಅಂಕಗಳ ಈ ಪತ್ರಿಕೆಯನ್ನು ಉತ್ತರಿಸಲು ಒಂದು ಗಂಟೆ ಹದಿನೈದು ನಿಮಿಷಗಳ ಕಾಲಾವಕಾಶ ನೀಡಲಾಗಿರುತ್ತದೆ.

ಮೂರನೇ ಪತ್ರಿಕೆ

ಮೂರನೇ ಪತ್ರಿಕೆಯು 75 ಪ್ರಶ್ನೆಗಳನ್ನು ಒಳಗೊಂಡಿದ್ದು ಇದು ವಿಷಯಾಧರಿತ ಪತ್ರಿಕೆಯಾಗಿರುತ್ತದೆ.ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗುತ್ತದೆ. ನೂರ ಐವತ್ತು ಅಂಕಗಳ ಈ ಪತ್ರಿಕೆಯನ್ನು ಉತ್ತರಿಸಲು ಎರಡು ಗಂಟೆ 30 ನಿಮಿಷಗಳ ಕಾಲಾವಕಾಶ ನೀಡಲಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
KSET 2017 The test will be consisting of three papers. The test for all the three papers will consist of only Multiple-ChoiceQuestions(MCQs). The test will be held on 31st December,2017 in two separate sessions.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X